Wednesday, December 3, 2025
Homeರಾಜ್ಯಕ್ರಿಸ್‌ಮಸ್‌ ಹಬ್ಬಕ್ಕೆ ವಿಶೇಷ ರೈಲಗಳ ವ್ಯವಸ್ಥೆ

ಕ್ರಿಸ್‌ಮಸ್‌ ಹಬ್ಬಕ್ಕೆ ವಿಶೇಷ ರೈಲಗಳ ವ್ಯವಸ್ಥೆ

Special trains for Christmas

ಬೆಂಗಳೂರು,ಡಿ.1- ಕ್ರಿಸಸ್‌‍ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನೆಂಟ್‌ ಮತ್ತು ಬೀದರ್‌ ನಡುವೆ ಒಂದು ಟ್ರಿಪ್‌ ವಿಶೇಷ ಎಕ್‌್ಸಪ್ರೆಸ್‌‍ ರೈಲು ಬಿಡುಗಡೆ ಮಾಡಿದೆ.

ಡಿ.24ರಂದು ಬುಧವಾರ ರೈಲು ಸಂಖ್ಯೆ 06291 ಬೆಂಗಳೂರು ಕಂಟೋನೆಂಟ್‌ ಬೀದರ್‌ ವಿಶೇಷ ಎಕ್ಸ್ ಪ್ರೆಸ್‌‍ ರೈಲು ಬೆಂಗಳೂರಿನಿಂದ ರಾತ್ರಿ 9:15ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11:30ಕ್ಕೆ ಬೀದರ್‌ ತಲುಪಲಿದೆ.

ಮತ್ತೊಂದೆಡೆ, ಮರಳಿ ಸಂಚರಿಸುವ 06292 ಬೀದರ್‌ ರೈಲು ಬೆಂಗಳೂರು ಕ್ಯಾಂಟ್‌ ವಿಶೇಷ ಎಕ್‌್ಸಪ್ರೆಸ್‌‍ ರೈಲು 25ರಂದು ಗುರುವಾರ ಬೀದರ್‌ನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು, ಮರುದಿನ ಬೆಳಗಿನ ಜಾವ 4ಕ್ಕೆ ಬೆಂಗಳೂರು ಕಂಟೋನೆಂಟ್‌ ತಲುಪಲಿದೆ.

ಮಾರ್ಗಮಧ್ಯದಲ್ಲಿ ಈ ವಿಶೇಷ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್‌, ಆದೋನಿ, ಮಂತ್ರಾಲ ಯಂ ರೋಡ್‌, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ, ಶಹಾಬಾದ, ಕಲಬುರಗಿ ಮತ್ತು ಹುಮನಾಬಾದ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ವಿಶೇಷ ರೈಲು 22 ಬೋಗಿಗಳನ್ನು ಒಳಗೊಂಡಿರಲಿದೆ, ಇದರಲ್ಲಿ ಒಂದು ಎಸಿ 2-ಟೈರ್‌, ಎರಡು ಎಸಿ 3-ಟೈರ್‌, ಹನ್ನೊಂದು ಸ್ಲೀಪರ್‌ ಕ್ಲಾಸ್‌‍, ಆರು ಜನರಲ್‌ ಸೆಕೆಂಡ್‌ ಕ್ಲಾಸ್‌‍, ಮತ್ತು ಎರಡು ಎಸ್‌‍ಎಲ್‌ಆರ್‌/ಡಿ ಬೋಗಿಗಳು ಇರಲಿವೆ.

RELATED ARTICLES

Latest News