ಮುಂಬೈ,ಡಿ.11: ಟೊಮೆಟೋ, ಈರುಳ್ಳಿ ನಂತರ ಈಗ ಬೆಲೆ ಏರಿಕೆ ಸರದಿ ಬೆಳ್ಳುಳ್ಳಿ ಮೇಲೆ ಬಿದ್ದಿದೆ. ಈಗಾಗಲೇ ದೇಶದಾದ್ಯಂತ ಭಾರಿ ಸದ್ದು ಮಾಡಿದ ಟೊಮೆಟೋ ಬೆಲೆ ಏರಿಕೆ ನಂತರ ಈರುಳ್ಳಿ ದುಬಾರಿಯಾಗಿದ್ದು, ಈಗ ಅದು ಸ್ವಲ್ಪ ಮಟ್ಟಿಗೆ ಬೆಲೆ ಇಳಿಕೆಯಾಗಿದೆ. ಆದರೆ ಈಗ ಬೆಳ್ಳುಳ್ಳಿ ಬೆಲೆ ಹೆಚ್ಚಾಗುತ್ತಿದೆ.
ಬಹುತೇಕ ಖಾದ್ಯಗಳಿಗೆ ಬಳಸುವ ಬೆಳ್ಳುಳ್ಳಿ ಬೆಲೆ ಏರಿಕೆ ಗೃಹಿಣಿಯರ ಚಿಂತೆಗೀಡು ಮಾಡಿದೆ.ಪ್ರತಿ ಕೆಜಿ ಬೆಳ್ಳುಳ್ಳಿ 400 ರೂ.ಗೆ ಏರಿಕೆಯಾಗಿದ್ದು, ಇದರಿಂದ ಬಹುಬಗೆಯ ಖಾದ್ಯಗಳನ್ನು ತಯಾರಿಸುವುದು ಕೂಡ ಕಡಿಮೆಯಾಗುತ್ತಿದೆ. ಬೆಳ್ಳುಳ್ಳಿ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಹೋಟೆಲ್ಗಳಲ್ಲಿ ಬೆಲೆ ಏರಿಕೆಯನ್ನು ಮಾಡಲಾಗುತ್ತಿದೆ.
ಬೆಳಗಾವಿ : ಓಡಿಹೋದ ಪ್ರೇಮಿಗಳು, ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ
ಇನ್ನು ಸ್ವಲ್ಪ ದಿನದಲ್ಲೇ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿರುವುದರಿಂದ ಇದನ್ನು ಬೆಳೆಯುವ ರೈತರು ಸಂತಸಗೊಂಡಿದ್ದಾರೆ. ಇದರ ಜೊತೆಗೆ ಈಗ ಮೆಣಸಿನಕಾಯಿ ಕೂಡ ದುಬಾರಿಯಾಗಿದ್ದು, ಸಾಂಬಾರ್ ಪಾದಾರ್ಥಗಳು ಕೂಡ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದ್ದು, ಹಣದುಬ್ಬರದ ಮೇಲೆ ಇದು ಬಾರಿ ಪರಿಣಾಮ ಬೀರಲಿದೆ.