ಬೆಳಗಾವಿ,ಡಿ.12-ರಾಜರಾಜೇಶ್ವರಿ ನಗರದಲ್ಲಿ ನಾವು ಎರಡು ಎಕರೆ ಜಾಗ ಸರ್ಕಾರಿ ಜಾಗದಲ್ಲಿ ಉದ್ಯಾನವನ ನಿರ್ಮಿಸಲು ಗುದ್ದಲಿ ಪೂಜೆ ಮಾಡಲಾಗಿತ್ತು ಆದರೆ ಈಗ ಯಾರೊ ಈ ಜಾಗ ನಮ್ಮದು ಎಂದು ಬೋರ್ಡ್ ಹಾಕಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ವಿಧಾನಸಭೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ಪ್ರಸ್ತಾಪಿಸಿದ್ದಾರೆ.
ನನ್ನ ಕ್ಷೇತ್ರದಲ್ಲಿ ನಾವು ಹಿಂದೆ ಪಾರ್ಕ್ ನಿರ್ಮಿಸಲು ಗುದ್ದಲಿ ಪೂಜೆ ಮಾಡಲಾಗಿತ್ತು ನಂತರ ಕಾಮಗಾರಿ ಆರಂಭಿಸಲು ಹೋದಾಗ ಚುನಾವಣೆ ನೀತಿಸಂಹಿತೆ ಇತ್ತು ಆದರೆ ಹೊಸ ಸರ್ಕಾರ ಬಂದ ಮೇಲೆ ಅಲ್ಲಿ ಖಾಸಗಿ ಸ್ವತ್ತು ಎಂದು ಬೋರ್ಡ್ ಹಾಕಿದ್ದಾರೆ. ನಾನು ಬಿಬಿಎಂಪಿ ಅಧಿಕಾರಿಗಳನ್ನು ಕರೆದು ಮಾತನಾಡಿದೆ ಆದರೆ ಕೋರ್ಟ್‍ನಲ್ಲಿ ಜಾಗ ಅವರಿಗೆ ಆಗಿದೆ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ. ಬೆಂಗಳೂರು ರಕ್ಷಣೆ ಮಾಡಬೇಕಾದದ್ದು ಉಸ್ತುವಾರಿ ಸಚಿವರ ಜವಾಬ್ದಾರಿ ,ಸರ್ಕಾರಿ ಭೂಮಿ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಕೆಂಪು ಸಮುದ್ರದಲ್ಲಿ ತೈಲ ಸಾಗಿಸುತ್ತಿದ್ದ ಹಡಗಿನ ಮೇಲೆ ದಾಳಿ
ಡಿಸಿಎಂ ಡಿ ಕೆ ಶಿವಕುಮಾರ್ ಉತ್ತರಿಸಿ ಯಾವ ವಾರ್ಡ್‍ನಲ್ಲಿ ಹಿಗಾಗಿದೆ ಎಂದಾಗ ವಾರ್ಡ್ ನಂಬರ್ 73 ಕೊಟ್ಟಿಗೆಪಾಳ್ಯ ಎಂದು ಶಾಸಕ ಮುನಿರತ್ನ ಹೇಳಿದರು ಇದಕ್ಕೆ ಸರ್ಕಾರದ ಜಮೀನು ಕಬಳಿಕೆಗೆ ನಾವು ಬಿಡಲ್ಲ ನಾವು ತೆರವು ಗೋಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಮತ್ತೆ ಎದ್ದು ನಿಂತ ಮುನಿರತ್ನ ಅವರು ಪ್ರಭಾವಿ ನಾಯಕರ ಹೆಸರು ಹೇಳಿ ಭೂಮಿ ಕಬಳಿಕೆ ಮಾಡಿದ್ದಾರೆ ಅವರ ಹೆಸರು ಹೇಳಲ್ಲ ಎಂದು ಕೇಳಿದರು ರಾಜರಾಜೇಶ್ವರಿ ನಗರದಲ್ಲಿ ನಿನಿಗಿಂತ ಯಾರಪ್ಪ ಪ್ರಭಾವಿ ಇದ್ದಾರೆ ಎಂದು ಹೇಳಿ ಡಿಸಿಎಂ ಡಿ ಕೆ ಶಿವಕುಮಾರ್ ಹಾಸ್ಯ ಚಟಾಕಿ ಹಾರಿಸಿದರು.