Sunday, November 24, 2024
Homeರಾಷ್ಟ್ರೀಯ | National370ನೇ ವಿಧಿ ರದ್ದು ತೀರ್ಪು ಸ್ವಾಗತಾರ್ಹ : ಆರ್‌ಎಸ್‌ಎಸ್‌

370ನೇ ವಿಧಿ ರದ್ದು ತೀರ್ಪು ಸ್ವಾಗತಾರ್ಹ : ಆರ್‌ಎಸ್‌ಎಸ್‌

ನವದೆಹಲಿ,ಡಿ.12- ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪು ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಭಿಪ್ರಾಯಪಟ್ಟಿದೆ.ಆರೆಸ್ಸೆಸ್ ಸಂವಿಧಾನದ 370 ನೇ ವಿಧಿಯನ್ನು ಮೊದಲಿನಿಂದಲೂ ವಿರೋಧಿಸುತ್ತಿದೆ ಎಂದು ಸಂಘದ ಅಖಿಲ ಭಾರತ ಪ್ರಚಾರ ಮುಖ್ಯಸ್ಥ ಸುನಿಲ್ ಅಂಬೇಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ವಿಯ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರದ 2019 ರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ಎತ್ತಿಹಿಡಿದಿದೆ. ಸರ್ಕಾರವನ್ನು ಬೇಗನೆ ಮರುಸ್ಥಾಪಿಸುವುದರ ಜೊತೆಗೆ ಮುಂದಿನ ವರ್ಷ ಸೆಪ್ಟೆಂಬರ್ 30 ರೊಳಗೆ ವಿಧಾನಸಭೆಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಿದೆ.

ಆರ್ಟಿಕಲ್ 370 ರದ್ದತಿಯನ್ನು ಕಾನೂನುಬದ್ಧಗೊಳಿಸಿರುವ ಸುಪ್ರೀಂ ಕೋರ್ಟ್ ಸ್ವಾಗತಾರ್ಹವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‍ಎಸï) ಈ ನಿರ್ಧಾರವನ್ನು ಸ್ವಾಗತಿಸುತ್ತದೆ ಎಂದು ಸುನಿಲ್ ಅಂಬೇಕರ್ ಹೇಳಿದ್ದಾರೆ. ಆರ್‍ಎಸ್‍ಎಸ್ ಕೂಡ ಈ ವಿಷಯದಲ್ಲಿ ಹಲವು ನಿರ್ಣಯಗಳನ್ನು ಅಂಗೀಕರಿಸಿದೆ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಬಂಧನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸುವ ಎಲ್ಲಾ ಚಳುವಳಿಗಳಲ್ಲಿ ಭಾಗವಹಿಸಿದೆ ಎಂದು ಅವರು ಹೇಳಿದರು.

ಬೆಂಗಳೂರಲ್ಲಿ ಅಕ್ರಮ ನೀರು ಸಂಪರ್ಕ ಹೊಂದಿದ್ದರೆ ಜೈಲು ಗ್ಯಾರಂಟಿ..!

ಈ ನಿರ್ಧಾರವು ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ. 370 ನೇ ವಿಧಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ವರ್ಷಗಳಿಂದ ಅನ್ಯಾಯವನ್ನು ಅನುಭವಿಸುತ್ತಿರುವ ಜನರಿಗೆ ಈ ನಿರ್ಧಾರದಿಂದ ಪರಿಹಾರ ಸಿಕ್ಕಿದೆ ಎಂದು ಸುನಿಲ್ ಅಂಬೇಕರ್ ತಿಳಿಸಿದ್ದಾರೆ.
ಆರ್‍ಎಸ್‍ಎಸ್-ಸಂಯೋಜಿತ ಮಹಿಳಾ ಸಂಘಟನೆ ಸಂರ್ವನಿ ನ್ಯಾಸ್ ಕೂಡ ಸುಪ್ರೀಂ ಕೋರ್ಟ್ ತೀರ್ಪನ್ನು ಶ್ಲಾಘಿಸಿದೆ. ಕೇಂದ್ರವು 370 ನೇ ವಿಧಿಯನ್ನು ರದ್ದುಗೊಳಿಸಿರುವುದು ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಮುಖ್ಯವಾಹಿನಿಗೆ ಏಕೀಕರಣ ಮಾಡಲು ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಉತ್ತೇಜಿಸಲು ದಾರಿ ಮಾಡಿಕೊಟ್ಟಿದೆ ಎಂದು ಅದು ಹೇಳಿದೆ.

ನಾವು, ಸಂರ್ವನಿ ನ್ಯಾಸ್ ಕಾರ್ಯಕರ್ತರು, 370 ನೇ ವಿಧಿಯ ರದ್ದತಿಯ ಬಗ್ಗೆ ಸಕಾರಾತ್ಮಕ ತೀರ್ಪು ನೀಡಿದ್ದಕ್ಕಾಗಿ ನಿಮಗೆ ಅಪಾರ ಕೃತಜ್ಞತೆ ಸಲ್ಲಿಸುತ್ತೇವೆ … ನ್ಯಾಯ ಮತ್ತು ನಮ್ಮ ದೇಶದ ಸುಧಾರಣೆಗೆ ನಿಮ್ಮ ಅಚಲ ಬದ್ಧತೆಗೆ ಧನ್ಯವಾದಗಳು ಎಂದು ಸಂಸ್ಥೆಯು ಪತ್ರದಲ್ಲಿ ತಿಳಿಸಿದೆ.

ನಮ್ಮ ನ್ಯಾಯಾಂಗವು ಒಂದು ರಾಷ್ಟ್ರ, ಒಂದು ಪ್ರಧಾನಿ, ಒಂದು ಧ್ವಜದ ಕಡೆಗೆ ಪ್ರಬಲ ಹೆಜ್ಜೆ ಇಟ್ಟಿದೆ ಎಂದು ನಾವು ತುಂಬಾ ಹೆಮ್ಮೆಪಡುತ್ತೇವೆ. ನಾವು ಒಂದೇ. ತೀರ್ಪು ನಮ್ಮ ರಾಷ್ಟ್ರದೊಳಗೆ ನ್ಯಾಯಸಮ್ಮತತೆ, ಏಕತೆ ಮತ್ತು ಕಾನೂನಿನ ಆಳ್ವಿಕೆಗೆ ಬದ್ಧತೆಯನ್ನು ತೋರಿಸುತ್ತದೆ ಎಂದು ಸಂರ್ವನಿ ನ್ಯಾಸ್ ಹೇಳಿದ್ದಾರೆ.

RELATED ARTICLES

Latest News