ಚಿಕ್ಕಬಳ್ಳಾಪುರ,ಡಿ.2- ಜಿಲ್ಲೆಯಾದ್ಯಂತ ಹನುಮ ಜಯಂತಿ ಪ್ರಯುಕ್ತ ಇಂದು ಬೆಳಗ್ಗೆಯಿಂದಲೇ ಶ್ರೀರಾಮ ಭಕ್ತ ಶ್ರೀ ಹನುಮನಿಗೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಭಕ್ತರಿಂದ ಹನುಮಂತನ ನಾಮಜಪ ಮಾಡುತ್ತಾ ಭಕ್ತಿಯಲ್ಲಿ ಮಿಂದೆದ್ದರು.
ನಗರದ ಹೊರವಲಯದಲ್ಲಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಆವರಣದಲ್ಲಿನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಶ್ರೀ ವೀರಾಂಜನೇಯ ಸ್ವಾಮಿಗೆ ಹಾಗೂ ದೇವಾಲಯಕ್ಕೆ ವಿವಿಧ ಬಗೆಯ ಹೂಗಳಿಂದ ಶೃಂಗರಿಸಲಾಗಿದ್ದು ಬೆಳಗ್ಗೆಯಿಂದಲೇ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು.
ಇದಕ್ಕೂ ಮುನ್ನ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಜಿವರು ಶ್ರೀ ವೀರಾಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು.



ದೇಗುಲದಲ್ಲಿ ಹನುಮ ಜಯಂತಿ ಪ್ರಯುಕ್ತ ಪ್ರಾತಃಕಾಲ ಪುಣ್ಯಾಹ, ಹನುಮ ಮೂರ್ತಿಗೆ ನವಗ್ರಹ ಆರಾಧನೆ, ನವ ಕಳಸ ಸ್ಥಾಪನೆ, ಪಂಚಾಮೃತ ಅಭಿಷೇಕ ನಡೆಯಿತು. ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಇದೇ ವೇಳೆ ಶ್ರೀಗಳು ಅನ್ನದಾನ ಪ್ರಸಾದ ವಿನಿಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹನುಮಾನ್ ಜಯಂತಿಯು ಮಾರುತಿ ನಂದನ ಎಂದೂ ಕರೆಯಲ್ಪಡುವ ಆಂಜನೇಯಸ್ವಾಮಿಯ ಜನ ದಿನವಾದ ಹಿನ್ನಲೆ ಹಾಗೂ ಆಂಜನೇಯನು ಅಂಜನಿ ಮತ್ತು ಕೇಸರಿಯ ಪುತ್ರ. ಹನುಮಂತನು ಅಮರತ್ವದ ವರವನ್ನು ಪಡೆದುಕೊಂಡವರಲ್ಲಿ ಒಬ್ಬನಾಗಿ. ಆಂಜನೇಯ ಸ್ವಾಮಿಯನ್ನು ಹನುಮಂತ, ಬಜರಂಗಬಲಿ, ಪವನ ಪುತ್ರ, ಸಂಕಟಮೋಚನ, ಕೇಸರಿ ನಂದನ, ಅಂಜನೀ ಪುತ್ರ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ ಇದರಿಂದ ಶ್ರೀ ಹನುಮನಿಗೆ ವಿಶೇಷ ಪೂಜೆ ಮಾಡಲಾಗಿತ್ತು ಅದರಂತೆ ಡಾಕ್ಟರ್ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಬೆಳಗ್ಗೆ ಎಂದರೆ ವಿಶೇಷ ಪೂಜೆ ಹೋಮ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆದವು.
ವಿಶೇಷ ಅಲಂಕಾರ ಮಾಡಿದ್ದ ಶ್ರೀ ವೀರಾಂಜನೇಯ ಸ್ವಾಮಿಯ ದರ್ಶನ ಪಡೆಯಲು ಸಹಸ್ರಾರು ಮಂದಿ ಭಕ್ತರು ದರ್ಶನ ಪಡೆದು ಪುನೀತರಾದರು.
