ಬೆಂಗಳೂರು, ಡಿ.12- ಇನ್ಸ್ಟಾಗ್ರಾಂನಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಅವರ ಫೋಟೋಗಳನ್ನು ಡೌನ್ಲೋಡ್ ಮಾಡಿಕೊಂಡು ಹಾಗೂ ತಾನು ಕೆಲಸ ಮಾಡುವ ಕಂಪೆನಿಯ ಸಹೋದ್ಯೋಗಿ ಯುವತಿಯರ ಫೋಟೋ ಮಾರ್ಫ್ ಮಾಡುತ್ತಿದ್ದ ಕಾಲ್ಸೆಂಟರ್ ಉದ್ಯೋಗಿಯನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಮೂಲದ ಆದಿತ್ಯ ಬಂಧಿತ ಆರೋಪಿ. ಈತ ಬಿಬಿಎ ವ್ಯಾಸಂಗ ಮಾಡಿದ್ದು, ಬೆಳ್ಳಂದೂರಿನ ಕಾಲ್ಸೆಂಟರ್ ಕಂಪೆನಿಯೊಂದರ ಉದ್ಯೋಗಿ. ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಯುವತಿಯೊಬ್ಬರ ಜೊತೆ ಸಂಬಂಧ ಇಟ್ಟುಕೊಂಡಿದ್ದು, ಅವರೊಂದಿಗೆ ಏಕಾಂತದ ಸಮಯದಲ್ಲಿ ಕೆಲವು ವೈಯಕ್ತಿಕ ಪೊಟೋಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದಿರುತ್ತಾನೆ.
ಈ ವಿಷಯ ತಿಳಿದ ಯುವತಿಯು ಆತನ ಮೊಬೈಲ್ನಿಂದ ತನ್ನ ಪೊಟೊಗಳನ್ನು ಡಿಲೀಟ್ ಮಾಡುವ ಸಲುವಾಗಿ ಆತನ ಮೊಬೈಲ್ ಪರಿಶೀಲಿಸಿದಾಗ ಆತನ ಮೊಬೈಲ್ನಲ್ಲಿ ಅದೇ ರೀತಿಯ ಹಲವು ಹುಡುಗಿಯರ ಸುಮಾರು 12 ಸಾವಿರ ಪೊಟೋಗಳಿರುವುದು ಕಂಡು ಗಾಬರಿಗೊಂಡಿದ್ದಾರೆ.
ಹೊಸ ವರ್ಷಕ್ಕೆ ಸಂಗ್ರಹಿಸಿದ್ದ 21ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ತಕ್ಷಣ ಆ ಯುವತಿಯು ಈ ವಿಷಯವನ್ನು ಕಂಪನಿಯ ಲೀಗಲ್ ಹೆಡ್ರವರ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಕಂಪೆನಿಯ ಲೀಗಲ್ ಹೆಡ್ರವರು ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣದ ತನಿಖೆಯನ್ನು ಕೈಗೊಂಡ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಯವರು ಒಂದು ತಂಡವನ್ನು ರಚಿಸಿ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡು, ಆರೋಪಿಯ ಮೊಬೈಲ್ಪರಿಶೀಲಿಸಿದಾಗ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 11 ಸಹೋದ್ಯೋಗಿ ಹುಡುಗಿಯರ ಪೊಟೋಗಳನ್ನು ಸಹ ಮಾರ್ಫ್ ಮಾಡಿಸಿ ಇಟ್ಟುಕೊಂಡಿರುವುದು ತನಿಖೆಯಿಂದ ತಿಳಿದು ಬಂದಿರು ತ್ತದೆ.
ಆರೋಪಿಯನ್ನು ಸುದೀರ್ಘ ವಾಗಿ ವಿಚಾರಣೆಗೊಳಪಡಿಸಿದಾಗ, ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಇನ್ಸ್ಟಾಗ್ರಾಂ, ಸ್ನಾಪ್ಚಾಟ್ನಿಂದ ಹಲವು ಹುಡುಗಿಯರನ್ನು ಪರಿಚಯ ಮಾಡಿಕೊಂಡು, ಅವರ ಡಿಪಿ ಮತ್ತು ಇತರೆ ಫೋಟೋಗಳನ್ನು ಡೌನ್ಲೋಡ್ ಮಾಡಿಕೊಂಡು, ಟೆಲಿಗ್ರಾಂನಲ್ಲಿರುವ ಒಂದು ಅ್ಯಪ್ ಮುಖಾಂತರ, ಸೆರೆ ಹಿಡಿದಿರುವ ಹುಡುಗಿಯರ ಪೊಟೋಗಳನ್ನು ಕಳುಹಿಸುತ್ತಿದ್ದನು.
ಅದೇ ಅ್ಯಪ್ ಮುಖಾಂತರ ಹುಡುಗಿಯರ ಮಾರ್ಫ್ ಮಾಡಿರುವ ಚಿತ್ರಗಳು ಆತನ ಮೊಬೈಲ್ನಲ್ಲಿ ಶೇಖರಣೆ ಯಾಗಿರುವುದನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಪತ್ತೆಹಚ್ಚಿದ್ದಾರೆ. ಮಾರ್ಫ್ ಮಾಡಿರುವ ಚಿತ್ರಗಳು ಆತನ ಮೊಬೈಲ್ನಲ್ಲಿ ಶೇಖರಿಸಿಕೊಂಡಿದ್ದು, ಮುಂದೆ ಈತನು ಹುಡುಗಿಯರ ಮಾರ್ಫ್ಡ್ ಪೊಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಅಥವಾ ಹಣದ ಬೇಡಿಕೆಯನ್ನು ಮಾಡುವವನಾಗಿದ್ದು, ಆತನ ಬಂಧನದಿಂದ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸುವಲ್ಲಿ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿರುತ್ತಾರೆ.