Saturday, November 23, 2024
Homeರಾಷ್ಟ್ರೀಯ | Nationalಸಂಸತ್ ಮೇಲಿನ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗಣ್ಯರ ನಮನ

ಸಂಸತ್ ಮೇಲಿನ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗಣ್ಯರ ನಮನ

ನವದೆಹಲಿ, ಡಿ 13 (ಪಿಟಿಐ) : ಕಳೆದ 2001 ರಲ್ಲಿ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಉಪರಾಷ್ಟ್ರಪತಿ ಜಗದೀಪ್ ಧನ್‍ಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಇಂದು ಗೌರವ ಸಲ್ಲಿಸಿದರು.

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂ, ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಅಮಿತ್ ಶಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ವಾಣಿಜ್ಯ ಸಚಿವ ಪಿಯೂಷ್ ಗೋಯಲï, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಸೇರಿದಂತೆ ಹಲವರು ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು.

ಮೋದಿ ಅವರು ಹುತಾತ್ಮರ ಕುಟುಂಬ ಸದಸ್ಯರೊಂದಿಗೆ ವಿಶೇಷವಾಗಿ ಚಳಿಗಾಲದ ಬೆಳಿಗ್ಗೆ ಸಮಾರಂಭಕ್ಕೆ ನೆರೆದಿದ್ದ ಮಕ್ಕಳೊಂದಿಗೆ ಸಂವಾದ ನಡೆಸುತ್ತಿದ್ದರು.ಬಳಿಕ ಮೋದಿ ಅವರು ರಾಜ್ಯಸಭಾ ಅಧ್ಯಕ್ಷರ ಜತೆ ಮಾತುಕತೆ ನಡೆಸಿದರು.ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಅವರು ಸ್ಥಳದಿಂದ ನಿರ್ಗಮಿಸುವ ಮೊದಲು ಪ್ರಧಾನಿ ಅವರೊಂದಿಗೆ ಮಾತುಕತೆ ನಡೆಸಿದರು.

ಬಿಜೆಪಿ ನಾಯಕರನ್ನು ಜೀವಂತ ಸಮಾಧಿ ಮಾಡಲು ಸಿಪಿಐ(ಎಂ) ನಿರ್ಧರಿಸಿತ್ತು : ಸಹಾ

2001 ರಲ್ಲಿ ನಮ್ಮ ಸಂಸತ್ತಿನ ಮೇಲಿನ ದಾಳಿಯ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಧೈರ್ಯಶಾಲಿ ಭದ್ರತಾ ಸಿಬ್ಬಂದಿಯನ್ನು ಸ್ಮರಿಸುತ್ತಿದ್ದೇವೆ. ಅವರ ಅತ್ಯುನ್ನತ ತ್ಯಾಗಕ್ಕಾಗಿ ಭಾರತವು ಅವರಿಗೆ ಸದಾ ಋಣಿಯಾಗಿದೆ ಎಂದು ಉಪರಾಷ್ಟ್ರಪತಿ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.ಭಯೋತ್ಪಾದನೆಯು ವಿಶ್ವಾದ್ಯಂತ ಮಾನವೀಯತೆಗೆ ಬೆದರಿಕೆಯಾಗಿ ಉಳಿದಿದೆ ಮತ್ತು ಜಾಗತಿಕ ಶಾಂತಿಗೆ ಈ ಅಡಚಣೆಯನ್ನು ನಿರ್ಮೂಲನೆ ಮಾಡುವಲ್ಲಿ ರಾಷ್ಟ್ರಗಳು ಒಗ್ಗಟ್ಟಾಗಿ ನಿಲ್ಲುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.

2001 ರಲ್ಲಿ ಸಂಸತ್ತಿನ ದಾಳಿಯಲ್ಲಿ ಹುತಾತ್ಮರಾದ ಕೆಚ್ಚೆದೆಯ ಭದ್ರತಾ ಸಿಬ್ಬಂದಿಯನ್ನು ನಾವು ಇಂದು ಸ್ಮರಿಸುತ್ತೇವೆ ಮತ್ತು ಅವರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇವೆ. ಅಪಾಯದ ಸಂದರ್ಭದಲ್ಲಿ ಅವರ ಧೈರ್ಯ ಮತ್ತು ತ್ಯಾಗ ನಮ್ಮ ರಾಷ್ಟ್ರದ ಸ್ಮರಣೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಕ್ಸ್ ಮಾಡಿದ್ದಾರೆ.

ಸಂಸತ್ ಭವನಕ್ಕೆ ಮುತ್ತಿಗೆ ಹಾಕುವ ಅವರ ಪ್ರಯತ್ನವನ್ನು ಸಂಸತ್ ಭದ್ರತಾ ಸೇವೆ, ಸಿಆರ್‍ಪಿಎಫ್ ಮತ್ತು ದೆಹಲಿ ಪೊಲೀಸರ ಸಿಬ್ಬಂದಿ ವಿಫಲಗೊಳಿಸಿದರು.ದಾಳಿಗೆ ಒಳಗಾದವರಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‍ಪಿಎಫ್ ) ಕಾನ್‍ಸ್ಟೆಬಲ್ ಕಮಲೇಶ್ ಕುಮಾರಿ, ಭಯೋತ್ಪಾದಕರನ್ನು ಗುರುತಿಸಿ ಎಚ್ಚರಿಕೆ ನೀಡಿದ ಮೊದಲಿಗರು, ಜಗದೀಶ್ ಪ್ರಸಾದ್ ಯಾದವ್ ಮತ್ತು ಸಂಸತ್ ವಾಚ್ ಮತ್ತು ವಾರ್ಡ್‍ನ ಮತ್ಬರ್ ಸಿಂಗ್ ನೇಗಿ ಮತ್ತು ನಾನಕ್ ಚಂದ್, ರಾಂಪಾಲ್ , ಓಂ ಪ್ರಕಾಶ್, ಬಿಜೇಂದರ್ ಸಿಂಗ್, ದೆಹಲಿ ಪೊಲೀಸರ ಘನಶ್ಯಾಮ್ ಮತ್ತು ಸಿಪಿಡಬ್ಲ್ಯೂಡಿಯಲ್ಲಿ ತೋಟಗಾರ ದೇಶರಾಜ್ ಈ ದಾಳಿಯಲ್ಲಿ ಹುತಾತ್ಮರಾಗಿದ್ದರು.ದಾಳಿಯಲ್ಲಿ ಗಾಯಗೊಂಡಿದ್ದ ಪತ್ರಕರ್ತರೊಬ್ಬರು ಬಳಿಕ ಮೃತಪಟ್ಟಿದ್ದರು. ಎಲ್ಲಾ ಐವರು ಭಯೋತ್ಪಾದಕರನ್ನು ಭದ್ರತಾ ಸಿಬ್ಬಂದಿಗಳು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

RELATED ARTICLES

Latest News