Friday, November 22, 2024
Homeರಾಷ್ಟ್ರೀಯ | Nationalಸಂಸದ ಧೀರಜ್ ಸಾಹು ಬಚ್ಚಿಟ್ಟಿ ಚಿನ್ನ ಪತ್ತೆಗೆ ಹೈಟೆಕ್ ತಂತ್ರ

ಸಂಸದ ಧೀರಜ್ ಸಾಹು ಬಚ್ಚಿಟ್ಟಿ ಚಿನ್ನ ಪತ್ತೆಗೆ ಹೈಟೆಕ್ ತಂತ್ರ

ನವದೆಹಲಿ,ಡಿ.15- ಕಾಂಗ್ರೆಸ್ ಸಂಸದ ಧೀರಜ್ ಕುಮಾರ್ ಸಾಹು ಕುಟುಂಬದ ಒಡೆತನದ ಒಡಿಶಾ ಮೂಲದ ಡಿಸ್ಟಿಲರಿ ಕಂಪನಿ ವಿರುದ್ಧ ನಡೆದ ತೆರಿಗೆ ಶೋಧದಲ್ಲಿ ಐದು ದಿನಗಳ ಎಣಿಕೆಯ ನಂತರ 355.5 ಕೋಟಿ ರೂ. ನಗದು ವಶಪಡಿಸಿಕೊಂಡ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಾಹು ಅವರು ಭೂಗರ್ಭದಲ್ಲಿ ಅಡಗಿಸಿಟ್ಟಿರಬಹುದು ಎಂದು ಶಂಕಿಸಲಾದ ಚಿನ್ನದ ಆಭರಣಗಳ ಪತ್ತೆಗೆ ಹೈಟೆಕ್ ಗ್ಯಾಜೆಟ್‍ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ರಾಂಚಿಯ ಧೀರಜ್ ಸಾಹು ಮತ್ತು ಜಾರ್ಖಂಡ್‍ನ ಲೋಹರ್ದಗಾ ಅವರ ಎರಡು ಮನೆಗಳಲ್ಲಿ ಐಟಿ ತಂಡಗಳು ಜಿಯೋ ಕಣ್ಗಾವಲು ವ್ಯವಸ್ಥೆಯನ್ನು ಬಳಸುತ್ತಿವೆ ಎಂದು ಅಕಾರಿಗಳು ತಿಳಿಸಿದ್ದಾರೆ.ಆದಾಯ ತೆರಿಗೆ ಇಲಾಖೆಯು ಹೈಟೆಕ್ ಆಗಿದೆ, ಆದ್ದರಿಂದ ಮುಚ್ಚಿಟ್ಟಿರುವ ಚಿನ್ನವನ್ನು ಹುಡುಕಲು ಇತ್ತೀಚಿನ ಲಭ್ಯವಿರುವ ತಂತ್ರಜ್ಞಾನವನ್ನು ಹುಡುಕಾಟದಲ್ಲಿ ಬಳಸಲಾಗುವುದು ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಛತ್ತೀಸ್‍ಗಢದ ಇಬ್ಬರು ಮಾಜಿ ಶಾಸಕರನ್ನು ಉಚ್ಛಾಟಿಸಿದ ಕಾಂಗ್ರೆಸ್

ತೆರಿಗೆ ವಂಚನೆ ಮತ್ತು ಆಫ್ -ದಿ-ಬುಕ್ ವಹಿವಾಟಿನ ಆರೋಪದ ಮೇಲೆ ಡಿಸೆಂಬರ್ 6 ರಂದು ಆದಾಯ ತೆರಿಗೆ ಇಲಾಖೆ ಅಕಾರಿಗಳು ದಾಳಿಗಳನ್ನು ಪ್ರಾರಂಭಿಸಿದ್ದರು. ಬೌದ್ ಡಿಸ್ಟಿಲರಿಗಳು ಮತ್ತು ಸಂಬಂಧಿತ ಘಟಕಗಳ ಮೇಲಿನ ದಾಳಿಯ ಸಮಯದಲ್ಲಿ ಪತ್ತೆಯಾದ ಬೃಹತ್ ನಗದು ಸಂಗ್ರಹವು ದೇಶದ ಮದ್ಯದ ಮಾರಾಟದಿಂದ ಉತ್ಪತ್ತಿಯಾಗುವ ಲೆಕ್ಕವಿಲ್ಲದ ಆದಾಯವನ್ನು ಪ್ರತಿನಿಸುತ್ತದೆ ಎಂದು ಐಟಿ ಇಲಾಖೆ ಶಂಕಿಸಿದೆ.

ಲೂಟಿ ಮಾಡಿದ ಹಣವನ್ನು ಜನರಿಗೆ ವಾಪಸ್ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ಆದಾಯ ತೆರಿಗೆ ಇಲಾಖೆಯಿಂದ ವಶಪಡಿಸಿಕೊಂಡಿರುವ ಹಣದ ಪರ್ವತಗಳನ್ನು ತೋರಿಸುವ ಹಿಂದಿ ಪತ್ರಿಕೆಯ ವರದಿಯನ್ನು ಪ್ರಧಾನಿ ಹಂಚಿಕೊಂಡಿದ್ದಾರೆ.

ಏತನ್ಮಧ್ಯೆ, ಧೀರಜ್ ಸಾಹು ಅವರಿಂದ ದೂರ ಉಳಿದಿರುವ ಕಾಂಗ್ರೆಸ್ ನಮಗೂ ಸಾಹುಗೂ ಯಾವುದೇ ರೀತಿಯ ವ್ಯವಹಾರಗಳೊಂದಿಗೆ ಸಂಪರ್ಕವಿಲ್ಲ ಮತ್ತು ಸಂಸದರು ನಗದು ಮತ್ತು ಅದರ ಮೂಲವನ್ನು ವಿವರಿಸಬೇಕು ಎಂದು ಕೇಳಿಕೊಂಡಿದೆ.

RELATED ARTICLES

Latest News