Wednesday, April 29, 2026
Homeರಾಷ್ಟ್ರೀಯಹೊಸ ಆದಾಯ ತೆರಿಗೆ ಕಾಯ್ದೆ-2025 ನಿಯಮಗಳ ಕುರಿತು ಅಧಿಸೂಚನೆ

ಹೊಸ ಆದಾಯ ತೆರಿಗೆ ಕಾಯ್ದೆ-2025 ನಿಯಮಗಳ ಕುರಿತು ಅಧಿಸೂಚನೆ

India notifies new income tax rules: Key changes effective April 1

ನವದೆಹಲಿ,ಮಾ,20-ಕೇಂದ್ರ ನೇರ ತೆರಿಗೆ ಮಂಡಳಿ ಇಂದು ಹೊಸ ಆದಾಯ ತೆರಿಗೆ ಕಾಯ್ದೆ-2025ಕ್ಕೆ ಸಂಬಂಧಿಸಿದ ನಿಯಮಗಳನ್ನು ಕುರಿತು ಅಧಿಸೂಚನೆ ಹೊರಡಿಸಿದೆ. ಈ ನಿಯಮಗಳ ಪ್ರಕಾರ ವೇತನಭತ್ಯೆ ಪಡೆಯುವವರಿಗೆ ಮನೆ ಬಾಡಿಗೆ ಭತ್ಯೆ ಮೇಲೆ ಹೆಚ್ಚುವರಿ ತೆರಿಗೆ ಸೌಲಭ್ಯ ಒದಗಿಸಲಾಗಿದ್ದು, ಬಾಡಿಗೆದಾರ ,ಮಾಲೀಕ ಹೆಸರು ಬಹಿರಂಗಪಡಿಸುವುದು ಕಡ್ಡಾಯವಾಗಿರಲಿದೆ.

ಈ ಆದಾಯ ತೆರಿಗೆ ನಿಯಮಗಳು, 2026 ಏಪ್ರಿಲ್‌ 1ರಿಂದ ಜಾರಿಗೆ ಬರಲಿದ್ದು, ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕರಿಸಲಾದ ಸರಳೀಕೃತ ನೇರ ತೆರಿಗೆ ಕಾಯ್ದೆಯನ್ನು ಕಾರ್ಯರೂಪಕ್ಕೆ ತರುವುದಾಗಿದೆ. ಗಜೆಟ್‌ ಅಧಿಸೂಚನೆಯ ಪ್ರಕಾರ, ಈ ನಿಯಮಗಳನ್ನು ಆದಾಯ ತೆರಿಗೆ ನಿಯಮಗಳು, 2026 ಎಂದು ಕರೆಯಲಾಗುವುದು ಮತ್ತು ಅವು 2026ರ ಏಪ್ರಿಲ್‌ 1ರಿಂದ ಜಾರಿಗೆ ಬರಲಿವೆ ಎಂದು ತಿಳಿಸಲಾಗಿದೆ.

2025ರ ಆಗಸ್ಟ್‌ 12ರಂದು ಸಂಸತ್ತು ಹೊಸ ಆದಾಯ ತೆರಿಗೆ ಮಸೂದೆಯನ್ನು ಅಂಗೀಕರಿಸಿತ್ತು. ಇದು ಸುಮಾರು ಆರು ದಶಕಗಳ ಹಳೆಯ 1961ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸುತ್ತದೆ.ಹೊಸ ಕಾಯ್ದೆಯಲ್ಲಿ ಯಾವುದೇ ಹೊಸ ತೆರಿಗೆ ದರಗಳನ್ನು ವಿಧಿಸದೇ, ಕಾನೂನಿನ ಭಾಷೆಯನ್ನು ಸರಳಗೊಳಿಸಲಾಗಿದೆ.ಈ ಕಾಯ್ದೆಯಡಿ ಅನಾವಶ್ಯಕ ಹಾಗೂ ಹಳೆಯ ವಿಧಿಗಳನ್ನು ತೆಗೆದುಹಾಕಲಾಗಿದ್ದು, ವಿಭಾಗಗಳ ಸಂಖ್ಯೆಯನ್ನು 819ರಿಂದ 536ಕ್ಕೆ ಹಾಗೂ ಅಧ್ಯಾಯಗಳನ್ನು 47ರಿಂದ 23ಕ್ಕೆ ಕಡಿತಗೊಳಿಸಲಾಗಿದೆ.

ಪದಗಳ ಸಂಖ್ಯೆ 5.12 ಲಕ್ಷದಿಂದ 2.6 ಲಕ್ಷಕ್ಕೆ ಇಳಿಸಲಾಗಿದೆ. ಜೊತೆಗೆ, ಸ್ಪಷ್ಟತೆ ಹೆಚ್ಚಿಸಲು 39 ಹೊಸ ಪಟ್ಟಿಗಳು ಮತ್ತು 40 ಹೊಸ ಸೂತ್ರಗಳನ್ನು ಪರಿಚಯಿಸಲಾಗಿದೆ.ಹೊಸ ನಿಯಮಗಳು ಮೂಲಧನ ಲಾಭ, ಷೇರು ಮಾರುಕಟ್ಟೆ ವ್ಯವಹಾರಗಳು ಮತ್ತು ಅನಿವಾಸಿ ತೆರಿಗೆ ವಿಷಯಗಳಲ್ಲಿ ಕಟ್ಟುನಿಟ್ಟಿನ ನಿಯಂತ್ರಣಗಳನ್ನು ತರಲಿದ್ದು, ಇತರ ಬಹಿರಂಗಪಡಿಸುವ ವಿಧಾನಗಳನ್ನು ಸರಳಗೊಳಿಸಿವೆ.

ಅಧಿಸೂಚನೆಯಲ್ಲಿ 150ಕ್ಕೂ ಹೆಚ್ಚು ಅಧಿಕೃತ ಫಾರ್ಮ್‌ಗಳನ್ನು ಪರಿಚಯಿಸಲಾಗಿದ್ದು, ಅವುಗಳನ್ನು ಫಾರ್ಮ್‌ 33ರಿಂದ ಸಂಖ್ಯೆಗೊಳಿಸಲಾಗಿದೆ.ಮನೆ ಬಾಡಿಗೆ ಭತ್ಯೆ ವಿನಾಯಿತಿಗೆ ಸಂಬಂಧಿಸಿದಂತೆ, ಮುಂಬೈ, ಕೊಲ್ಕತ್ತಾ, ದೆಹಲಿ, ಚೆನ್ನೈ, ಹೈದರಾಬಾದ್‌‍, ಪುಣೆ, ಅಹಮದಾಬಾದ್‌ ಮತ್ತು ಬೆಂಗಳೂರು ಸೇರಿದಂತೆ ಎಂಟು ನಗರಗಳಿಗೆ ವೇತನದ 50%ರವರೆಗೆ ವಿನಾಯಿತಿ ಲಭ್ಯವಾಗಲಿದೆ.

ಇತರೆ ಪ್ರದೇಶಗಳಿಗೆ ಇದು 40% ಆಗಿರಲಿದೆ.ಈಗಾಗಲೇ ಮುಂಬೈ, ದೆಹಲಿ, ಕೊಲ್ಕತ್ತಾ ಮತ್ತು ಚೆನ್ನೈ ನಗರಗಳಲ್ಲಿ 50% ವಿನಾಯಿತಿ ಇದ್ದು, ಇತರೆ ನಗರಗಳಲ್ಲಿ 40% ಅನ್ವಯವಾಗುತ್ತದೆ.ಹೊಸ ನಿಯಮಗಳ ಪ್ರಕಾರ, ತೆರಿಗೆ ವಿನಾಯಿತಿ ಪಡೆಯಲು ಬಾಡಿಗಾರಮಾಲೀಕರ ಸಂಬಂಧವನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ.

ವಿದೇಶೀ ಆದಾಯದ ತೆರಿಗೆ ಕ್ರೆಡಿಟ್‌ಗಳ ಪರಿಶೀಲನೆಯಲ್ಲಿ ಕಂಪನಿಗಳು ಮತ್ತು ಆಡಿಯಿಟರ್‌ಗಳ ಜವಾಬ್ದಾರಿಯನ್ನೂ ಹೆಚ್ಚಿಸಲಾಗಿದೆ.ಇದಲ್ಲದೆ, ಪಾನ್‌ ನಕಲು ಪ್ರಕರಣಗಳ ಪರಿಶೀಲನೆ ಮತ್ತು ಆಡಿಯಿಟ್‌ನಲ್ಲಿ ಕಂಡುಬರುವ ಅಸಂಗತತೆಗಳಿಂದ ಉಂಟಾಗುವ ತೆರಿಗೆ ಹೊಣೆಗಾರಿಕೆಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಆಡಿಯಿಟರ್‌ಗಳಿಗೆ ನೀಡಲಾಗಿದೆ.

ಆಸ್ತಿಗಳ ಹಿಡಿತ ಅವಧಿಯನ್ನು ಲೆಕ್ಕಿಸುವ ವಿಧಾನವನ್ನು ಸ್ಪಷ್ಟಪಡಿಸಲಾಗಿದ್ದು, ಇದರಿಂದ ಲಾಭವು ಕಡಿಮೆ ಅವಧಿಯದಾ ಅಥವಾ ದೀರ್ಘಾವಧಿಯದಾ ಎಂಬುದನ್ನು ನಿರ್ಧರಿಸಲು ಸಹಾಯವಾಗಲಿದೆ.

ಶೇರುಗಳು ಅಥವಾ ಡಿಬೆಂಚರ್‌ಗಳಂತಹ ಪರಿವರ್ತಿತ ಪಾವತಿಗಳಲ್ಲಿ, ಮೂಲ ಹೂಡಿಕೆ ಸಾಧನವನ್ನು ಹಿಡಿದಿದ್ದ ಅವಧಿಯನ್ನೂ ಸೇರಿಸಿ ಹಿಡಿತ ಅವಧಿಯನ್ನು ಲೆಕ್ಕಿಸಲಾಗುವುದು ಎಂದು ನಿಯಮಗಳು ಸ್ಪಷ್ಟಪಡಿಸಿವೆ.

RELATED ARTICLES

Latest News