Saturday, May 2, 2026
Homeರಾಜ್ಯಸೆಲ್ಫಿ ವಿಡಿಯೋ ಮಾಡಿ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾದ ಅಧಿಕಾರಿ

ಸೆಲ್ಫಿ ವಿಡಿಯೋ ಮಾಡಿ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾದ ಅಧಿಕಾರಿ

Officer commits suicide in office by making selfie video

ಪಾವಗಡ,ಮಾ.21- ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ತಮ್ಮ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಆಪ್‌ ಬಂಡೆಯಲ್ಲಿರುವ ಕಚೇರಿಯಲ್ಲಿ ನಡೆದಿದೆ.ಮಲ್ಲಿಕಾರ್ಜುನ್‌ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ.

ಸಾವಿಗೂ ಮುನ್ನ ಮೇಲಾಧಿಕಾರಿಗಳ ಕಿರುಕುಳವೇ ಸಾವಿಗೆ ಕಾರಣವೆಂದು ವಿಡಿಯೋ ಮಾಡಿ ಆರೋಪಿಸಿ ಆತಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.ವಿಡಿಯೋದಲ್ಲಿ ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಿರುಕುಳವೇ ಆತಹತ್ಯೆಗೆ ಕಾರಣ ಎಂದು ಆರೋಪಿಸಿ ಉಲ್ಲೇಖಿಸಲಾಗಿದ್ದು, ಆತಹತ್ಯೆಗೂ ಮುನ್ನ ವಿಡಿಯೋ ಮಾಡಿ ಸಹೋದ್ಯೋಗಿಗಳಿಗೆ ಕಳಿಹಿಸಿದ್ದಾರೆ.

ಮೂಲತಃ ಪಾವಗಡ ತಾಲ್ಲೂಕಿನ ಗುಂಡರ್ಲಾಹಳ್ಳಿ ಗ್ರಾಮದ ಮಲ್ಲಿಕಾರ್ಜುನ್‌ ಕಳೆದ 3 ವರ್ಷಗಳಿಂದ ಪಾವಗಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೇ ತಿಂಗಳ 31ಕ್ಕೆ ಇವರ ಸೇವಾ ಅವಧಿ ಮುಕ್ತಾಯಗೊಳ್ಳಲಿದೆ.

ಮಗನ ಸಾವಿನಿಂದ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿದ್ದಾರೆ, ಪತ್ನಿ ಪಾವಗಡ ಪೊಲೀಸ್‌‍ ಠಾಣಿಕೆ ದೂರು ಸಲ್ಲಿಸಿದ್ದು ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.

RELATED ARTICLES

Latest News