ಬೆಂಗಳೂರು,ಡಿ.17- ಭ್ರೂಣಲಿಂಗ ಪತ್ತೆ ಮತ್ತು ಭ್ರೂಣಹತ್ಯೆ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯಾದ್ಯಂತ ತಪಾಸಣಾ ಕಾರ್ಯಗಳನ್ನು ಚುರುಕುಗೊಳಿಸಿದ್ದು, ನಕಲಿ ವೈದ್ಯರು ಹಾಗೂ ಕ್ಲಿನಿಕ್‍ಗಳನ್ನು ಮುಚ್ಚಿಸಲು ಮುಂದಾಗಿದೆ.
ಆರೋಗ್ಯ ಕುಟುಂಬ ಕಲ್ಯಾಣ, ಪೊಲೀಸ್, ಕಂದಾಯ ಇಲಾಖೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ತಂಡ ವೈದ್ಯಕೀಯ ಪ್ರಯೋಗಾಲಯಗಳು, ಚಿಕಿತ್ಸಾಲಯಗಳನ್ನು ಪರಿಶೀಲನೆಗೊಳಪಡಿಸುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಹಲವು ಕಡೆ ತಪಾಸಣಾ ಕಾರ್ಯ ನಡೆಸಲಾಗಿದೆ. ಕುಂದಾಪುರದಲ್ಲಿ 7 ಕ್ಲಿನಿಕ್‍ಗಳು ಹಾಗೂ ಪ್ರಯೋಗಾಲಯಗಳ ಮೇಲೆ ದಾಳಿ ನಡೆಸಿದಾಗ 2 ಕ್ಲಿನಿಕ್‍ಗಳು ನಕಲಿ ಎಂದು ಪತ್ತೆಯಾಗಿದೆ.
ಕೋವಿಡ್ ಹೆಚ್ಚಳ ; ಮುಂಜಾಗ್ರತಾ ಕ್ರಮ ಸಿಎಂ ಸಿದ್ದರಾಮಯ್ಯ ಸೂಚನೆ
ಬ್ರಹ್ಮಾವರ ಜಿಲ್ಲೆಯ ಕುಂಜಾಲಿನಲ್ಲಿ ಬಿಕಾಂ ಪದವೀಧರರಾಗಿದ್ದ ಸಂದೇಶ್ ರಾವ್ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ಅನುಮತಿ ಪಡೆದು ಆಲೋಪತಿ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿದೆ. ಕೂಡಲೇ ಅಧಿಕಾರಿಗಳ ತಂಡ ಸಂದೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.