Wednesday, December 3, 2025
Homeಜಿಲ್ಲಾ ಸುದ್ದಿಗಳುಕಬ್ಬಿನ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದು ನಾಲ್ವರು ಯುವಕರ ಸಾವು

ಕಬ್ಬಿನ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದು ನಾಲ್ವರು ಯುವಕರ ಸಾವು

Four youths die after car hits sugarcane tractor

ಜಮಖಂಡಿ: ತಾಲ್ಲೂಕಿನ ಸಿದ್ದಾಪೂರ ಗ್ರಾಮದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ಹೋಗುತ್ತಿರುವ ಕಬ್ಬಿನ ಟ್ರ್ಯಾಕ್ಟರ್‌ ಗೆ ಹಿಂಬದಿಯಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ಕು ಜನ ಯುವಕರು ತಡರಾತ್ರಿ ಸಾವನಪ್ಪಿದ ಧಾರುಣ ಘಟನೆ ಸಂಭವಿಸಿದೆ.

ತಾಲೂಕಿನ ಸಿದ್ದಾಪೂರ ಗ್ರಾಮದ ನಾಲ್ಕು ಜನ ಯುವಕರಾದ ವಿಶ್ವನಾಥ ಕುಂಬಾರ(17), ಪ್ರವೀಣ ಶೇಡಬಾಳ(22), ಗಣೇಶ ಅಳ್ಳಿಮಟ್ಟಿ( 20), ಪ್ರಜ್ವಲ್‌ ಶೇಡಬಾಳ(17) ಸಾವನಪ್ಪಿದ ದುರ್ದೈವಿಗಳು.

ಸಿದ್ದಾಪೂರ ಗ್ರಾಮದಿಂದ ನಾಲ್ಕು ಜನ ಸ್ನೇಹಿತರು ಸೇರಿಕೊಂಡು ತಡರಾತ್ರಿ ಶಿರೋಳ ಗ್ರಾಮದ ಕಾಡಸಿದ್ದೇಶ್ವರ ದೇವರ ಜಾತ್ರೆಗೆ ಹೋಗುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೋಲಿಸ್‌ ರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

ನಾಲ್ಕು ಜನ ಯುವಕರ ಶವಗಳನ್ನು ಜಮಖಂಡಿ ಸರಕಾರಿ ಉಪವಿಭಾಗಾಧ ಆಸ್ಪತ್ರೆಗೆ ಶವ ಪರಿಕ್ಷೇಗೆ ರವಾನಿಸಲಾಗಿದೆ.ಸರಕಾರಿ ಉಪವಿಭಾಗ ಆಸ್ಪತ್ರೆಗೆ ಜಿಲ್ಲಾ ಎಸ್‌ ಪಿ. ಸಿದ್ಧಾರ್ಥ ಗೋಯಲ್‌ ಅವರು ಭೇಟಿ ನೀಡಿ. ತನಿಖೆಯನ್ನು ಮುಂದುವರಿಸಿದ್ದಾರೆ.

ಮಾಜಿ ಶಾಸಕ ಆನಂದ ನ್ಯಾಮಗೌಡ ಸರಕಾರಿ ಆಸ್ಪತ್ರೆಗೆ ಭೇಟಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.ಸಿದ್ದಾಪೂರದಲ್ಲಿ ನಾಲ್ಕು ಜನ ಯುವಕರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಡೀ ಗ್ರಾಮವೇ ನಿರವ ಮೌನ ಆವರಿಸಿದೆ.ಕುಟುಂಬಸ್ಥರ ಅಕ್ರಂದಣ ಮುಗಿಲು ಮುಟ್ಟುವಂತೆ ಇತ್ತು.

ಪೋಟೋ : ಜಮಖಂಡಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ಟ್ರ್ಯಾಕ್ಟರ್‌ ಗೆ ಹಿಂಬದಿಯಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಜನ ಯುವಕರು ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ.

RELATED ARTICLES

Latest News