Sunday, November 24, 2024
Homeಬೆಂಗಳೂರುಹೈಟೆಕ್ ವಂಚನೆ ಜಾಲ ಬೇಧಿಸಿದ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು..!

ಹೈಟೆಕ್ ವಂಚನೆ ಜಾಲ ಬೇಧಿಸಿದ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು..!

ಬೆಂಗಳೂರು,ಸೆ.30- ಕಡಿಮೆ ಹೂಡಿಕೆಯಲ್ಲಿ ಲಕ್ಷಾಂತರ ರೂಪಾಯಿ ಲಾಭ ಮಾಡುವ ಆಮಿಷದೊಂದಿಗೆ ರಾಷ್ಟ್ರಾದ್ಯಂತ ಸಾವಿರಾರು ಮಂದಿಯನ್ನು ವಂಚಿಸಿ 854 ಕೋಟಿ ರೂ.ಗೂ ಅಧಿಕ ಹಣವನ್ನು ದೋಚಿದ್ದ ಅಂತಾರಾಷ್ಟ್ರೀಯ ಜಾಲವನ್ನು ಬೆಂಗಳೂರಿನ ಸೈಬರ್‍ಕ್ರೈಂ ಪೊಲೀಸರು ಬೇಸಿಧಿದ್ದಾರೆ.

ಈ ಮೂಲಕ ರಾಷ್ಟ್ರಮಟ್ಟದಲ್ಲಿ ದೊಡ್ಡ ಜಾಲವೊಂದು ಬಯಲಿಗೆ ಬಂದಿದ್ದು, ಪ್ರಾಥಮಿಕ ಹಂತದಲ್ಲಿ ಸೈಬರ್ ಕ್ರೈಂ ಪೊಲೀಸರು 84 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ 5 ಕೋಟಿ ರೂ.ಗಳಿಗೂ ಹೆಚ್ಚಿನ ಹಣವನ್ನು ಸಂರಕ್ಷಿಸಿದ್ದಾರೆ. ಕೃತ್ಯದಲ್ಲಿ ಹೈಟೆಕ್ ವಂಚಕರು ಭಾಗಿಯಾಗಿದ್ದರೆ, ವಿದ್ಯಾವಂತರು, ಸುಶಿಕ್ಷಿತರೇ ಬಲಿಪಶುಗಳಾಗಿರುವುದು ಮತ್ತೊಂದು ಕುಚೋದ್ಯವಾಗಿದೆ. ಕಳೆದ ಏ.28ರಂದು ವ್ಯಕ್ತಿಯೊಬ್ಬರು ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ, ದಿ ವೈನ್ ಗ್ರೂಪ್ ಎಂಬ ಸಾಲದ ಆ್ಯಪ್‍ನಲ್ಲಿ 8.5 ಲಕ್ಷ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿರುವುದಾಗಿ ತಿಳಿಸಿದ್ದರು.

ಈ ಮೊದಲು ದೂರುದಾರರ ಸ್ನೇಹಿತೆ ಈ ಆ್ಯಪ್‍ನಲ್ಲಿ ಹಣ ಹೂಡಿಕೆ ಮಾಡಿ ಲಾಭ ಮಾಡಿಕೊಂಡಿರುವುದನ್ನು ತಿಳಿದುಕೊಂಡು ತಾನೂ ಕೂಡ ಲಾಭ ಮಾಡುವ ಆಸೆಯಿಂದ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ಅದರಲ್ಲಿದ್ದ ಆಕರ್ಷಕ ಇನ್‍ಸ್ಟಾಲ್‍ಮೆಂಟ್ ಆಫರ್‍ಗಳಿಗೆ ಮರುಳಾಗಿ ಹಣ ಹೂಡಿಕೆ ಮಾಡಲು ಒಪ್ಪಿದ್ದೆ. ತನ್ನ ಬ್ಯಾಂಕ್ ಖಾತೆಯಿಂದ ಆರೋಪಿಗಳು ಹೇಳಿದ ಮಹಾರಾಷ್ಟ್ರದ ಐಸಿಐಸಿಐ ಬ್ಯಾಂಕ್ ಶಾಖೆಗೆ ಹಾಗೂ ವಿವಿಧ ಯುಪಿಐ ಐಡಿಗಳಿಗೆ ಹಂತ ಹಂತವಾಗಿ 8.50 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾಗಿ ತಿಳಿಸಿದ್ದಾರೆ.

BIG NEWS : ದೆಹಲಿಯಲ್ಲಿ ಐಸಿಸ್ ಶಂಕಿತ ಉಗ್ರರು, ರಕ್ತದೋಕುಳಿಗೆ ಪ್ಲಾನ್..!

ದೂರು ದಾಖಲಿಸಿ ತನಿಖೆ ಕೈಗೆತ್ತಿಕೊಂಡ ಸೈಬರ್ ಕ್ರೈಂ ಪೊಲೀಸ್ ಅಕಾರಿಗಳು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿ ಬಳಕೆಯಾಗಿರುವುದನ್ನು ಪತ್ತೆಹಚ್ಚಿದ್ದಾರೆ.ಖಾತೆದಾರರ ವಿವರಗಳನ್ನು ಬೆನ್ನಟ್ಟಿದಾಗ ಆರೋಪಿಗಳ ಮಾಹಿತಿ ತಿಳಿದುಬಂದಿದೆ. ವಂಚಕರು ವ್ಯಾಟ್ಸಪ್, ಟೆಲಿಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳು ಹಾಗೂ ಗುಂಪುಗಳನ್ನು ರಚಿಸಿ ಅಮಾಯಕರನ್ನು ಸೆಳೆಯುತ್ತಿದ್ದರು.

ಅವರಿಂದ ಹಣ ಹೂಡಿಕೆ ಮಾಡಿಸಿಕೊಳ್ಳಲು ನಕಲಿ ದಾಖಲೆಗಳನ್ನು ನೀಡಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿತ್ತು. ತಮಿಳುನಾಡಿನಲ್ಲಿ ತೆರೆಯಲಾಗಿದ್ದ ಖಾತೆಯೊಂದರಿಂದ ಬೆಂಗಳೂರಿನ ಸುಬ್ಬು ಎಂಟರ್‍ಪ್ರೈಸಸ್ ಎಂಬ ಖಾತೆಗೆ ಹಣ ವರ್ಗಾವಣೆಯಾಗಿರುವ ಸುಳಿವು ದೊರೆತಿದೆ.ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಸುಬ್ಬು ಎಂಟರ್‍ಪ್ರೈಸಸ್‍ನ ಮಾಲೀಕರು, ಸ್ನೇಹಿತರೊಬ್ಬರು ತಮಗೆ ಅರಿವಿಲ್ಲದಂತೆ ದಾಖಲಾತಿಗಳನ್ನು ಪಡೆದು ಬ್ಯಾಂಕ್ ಖಾತೆ ತೆರೆದು ಕೃತ್ಯ ನಡೆಸಿದ್ದಾರೆಂಬ ಶಂಕೆ ವ್ಯಕ್ತಪಡಿಸಿದ್ದರು.

ಸದರಿ ವ್ಯಕ್ತಿಯ ಮಾಹಿತಿ ಆಧರಿಸಿ ಆರಂಭದಲ್ಲಿ ಐದು ಆರೋಪಿಗಳನ್ನು ಬಂಸಲಾಗಿತ್ತು. ಇಂತಹ ಕೃತ್ಯದಲ್ಲಿ ಭಾಗಿಯಾದ 17 ಮಂದಿ ಆರೋಪಿಗಳು ಬೆಂಗಳೂರಿನಲ್ಲಿದ್ದು, ಅವರುಗಳ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ 2, ಆಗ್ನೇಯ ವಿಭಾಗದಲ್ಲಿ 3, ಈಶಾನ್ಯ ವಿಭಾಗದಲ್ಲಿ 4, ಉತ್ತರ ವಿಭಾಗದಲ್ಲಿ 8 ಪ್ರಕರಣಗಳು ದಾಖಲಾಗಿವೆ.

ಈ ಪ್ರಕರಣದಲ್ಲಿ ಪತ್ತೆಯಾದ ಬ್ಯಾಂಕ್ ಖಾತೆಗಳ ಬಗ್ಗೆ ಪರಿಶೀಲಿಸಿದಾಗ ನ್ಯಾಷನಲ್ ಸೈಬರ್ ಕ್ರೈಂ ರಿಪೋಟಿಂಗ್ ಪೋರ್ಟಲ್‍ನಲ್ಲಿ ವಿವಿಧ ರಾಜ್ಯಗಳಿಂದ 5,013 ದೂರುಗಳು ದಾಖಲಾಗಿರುವ ಮಾಹಿತಿ ದೊರೆತಿದೆ.

ಅದರಲ್ಲಿ ಆಂಧ್ರಪ್ರದೇಶ 296, ಬಿಹಾರ 200, ದೆಹಲಿ 194, ಗುಜರಾತ್ 642, ಕರ್ನಾಟಕ 487, ಕೇರಳ 188, ಮಹಾರಾಷ್ಟ್ರ 332, ರಾಜಸ್ಥಾನ 270, ತಮಿಳುನಾಡು 472, ತೆಲಂಗಾಣ 719, ಉತ್ತರಪ್ರದೇಶ 505 ಹಾಗೂ ಪಶ್ಚಿಮಬಂಗಾಳದಲ್ಲಿ 118 ಸೇರಿ ಎಲ್ಲಾ ರಾಜ್ಯಗಳಲ್ಲೂ ವಂಚನೆ ನಡೆದಿರುವ ವರದಿಗಳಾಗಿವೆ. ಸರಿಸುಮಾರು 854 ಕೋಟಿ ರೂ. ವಂಚನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 13 ಮೊಬೈಲ್, 7ಲ್ಯಾಪ್‍ಟಾಪ್ , ಪ್ರಿಂಟರ್, ಸ್ವೈಪಿಂಗ್ ಮಿಷನ್, ಹಾರ್ಡ್‍ಡಿಸ್ಕ್, ಹಲವಾರು ಬ್ಯಾಂಕ್ ಪಾಸ್‍ಬುಕ್‍ಗಳು ಮತ್ತು ಇತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

RELATED ARTICLES

Latest News