ಬೆಂಗಳೂರು,ಡಿ.21- ನೆರೆಯ ಕೇರಳದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ಸಿಲಿಕಾನ್ ಸಿಟಿಗೂ ವಿಸ್ತರಿಸಿರುವ ಸಾಧ್ಯತೆಗಳು ಕಂಡು ಬಂದಿದೆ.ಕೆಲವು ದಿನಗಳಿಂದ ನಗರದಲ್ಲಿ ಹಲವಾರು ಮಂದಿ ಕೊರೊನಾ ಸೊಂಕಿಗೆ ಸಿಲುಕಿರುವುದು ಇದನ್ನು ದೃಢಿಕರಿಸಿದೆ.
ಕೇರಳದಲ್ಲಿ ಸಾಲು ಸಾಲು ಹೊಸ ಕೋವಿಡ್ ಪ್ರಕರಣ ಬೆನ್ನಲ್ಲೇ ನಗರದಲ್ಲೂ ಆತಂಕ ಶುರುವಾಗಿದ್ದು, ಕಳೆದ 20 ದಿನದಲ್ಲಿ ಹೊಸದಾಗಿ 17 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಬಿಬಿಎಂಪಿಯ ಎಂಟು ವಲಯಗಳಲ್ಲಿ ಒಟ್ಟು 17 ಕೊರೋನಾ ಕೇಸ್ ಪತ್ತೆಯಾಗಿದ್ದು, ಅದರಲ್ಲೂ ಪೂರ್ವ ವಲಯದಲ್ಲಿ ಅತಿ ಹೆಚ್ಚು ಹೊಸ ಕೊರೋನಾ ಪ್ರಕರಣ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
4 ವರ್ಷದೊಳಗಿನ ಮಕ್ಕಳಿಗೆ ಈ ಕೆಮ್ಮಿನ ಸಿರಪ್ ನೀಡುವಂತಿಲ್ಲ
ಪೂರ್ವ ವಲಯದಲ್ಲಿ 11 ಹಾಗೂ ಪಶ್ಚಿಮ 09 ಹಾಗೂ ಬೊಮ್ಮನಹಳ್ಳಿ 08 ಕೇಸ್ ಹೊಸದಾಗಿ ದಾಖಲಾಗಿದ್ದು, 17 ಜನರ ಪೈಕಿ ಇಬ್ಬರ ಸ್ಥಿತಿ ಗಂಭೀರ ಸಮಸ್ಯೆಯಾಗಿ ಕಾಡುತ್ತಿದ್ದು ಅವರಿಗೆ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನಾದ ಹೊಸ ರೂಪಾಂತರಿ ಜೆಎನ್ 1 ಪತ್ತೆಯಾಗಿರುವ 17 ಮಂದಿ ಸ್ಯಾಂಪಲ್ಸ ಅನ್ನು ಜಿನೋಮಿಕ್ ಸೀಕ್ವೆನ್ಸ್ ಗೆ ರವಾನಿಸಲಾಗಿದೆ.
ಕಳೆದ 20 ದಿನದಲ್ಲಿ ದಾಖಲಾಗಿರುವ 17 ಪ್ರಕರಣಗಳನ್ನೂ ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿದೆ ಮಾತ್ರವಲ್ಲ ಸೋಂಕು ಹರಡದಂತೆ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.