ಕುಣಿಗಲ್, ಏ.27- ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು, ಒಬ್ಬರು ನಾನೇ ಐದು ವರ್ಷ ಸಿ.ಎಂ ಎನ್ನುತ್ತಾರೆ. ಮತ್ತೊಬ್ಬರು ನನಗೆ ಎರಡೂವರೆ ವರ್ಷ ನಿಗದಿಯಾಗಿತ್ತು ಎನ್ನುತ್ತಾರೆ. ಪ್ರತಿನಿತ್ಯ ಇದನ್ನು ಬಿಟ್ಟರೆ ರಾಜ್ಯದಲ್ಲಿ ಯಾವ ಸಮಸ್ಯೆ ಚರ್ಚೆಯಾಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಮಾದಪ್ಪನಹಳ್ಳಿ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ಅಲ್ಲಲ್ಲಿ ಆಲಿಕಲ್ಲು ಮಳೆ ಬಿದ್ದು ಹಲವಾರು ಭಾಗದಲ್ಲಿ ಬಾಳೆ, ದ್ರಾಕ್ಷಿ, ದಾಳಿಂಬೆ ಬೆಳೆ ನಾಶವಾದರೂ ಯಾವುದರ ಬಗ್ಗೆಯೂ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅಪರಾಧ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದರೂ ಯಾವುದೇ ಕ್ರಮ ಇಲ್ಲದಂತಾಗಿದೆ. ನನಗೆ ಬೇರೆ ಯಾವುದೇ ವ್ಯಾಮೋಹವಿಲ್ಲ ನಿಮ ಆಶಿರ್ವಾದವಿದ್ದರೆ ಗ್ರಾಮೀಣ ಭಾಗದ ಜನರ ಬದುಕನ್ನು ಸರಿಪಡಿಸಬೇಕೆಂಬುದೇ ನನ್ನ ಗುರಿಯಾಗಿದೆ. ನಮ ದೇಶ ಪ್ರಧಾನಿ ನರೇಂದ್ರ ಮೋದಿ ಅವರ ನೆತೃತ್ವದ ಕೇಂದ್ರ ಸರ್ಕಾರ ಆರ್ಥಿಕತೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
ನಿಮೆಲ್ಲರ ಆಶೀರ್ವಾದದಿಂದ ನಾನು ಕೇಂದ್ರ ಸಚಿವನಾಗಿದ್ದೇನೆ. ಉದ್ಯೋಗ, ಸಹಕಾರ ಕೇಳಿಕೊಂಡು ಪ್ರತಿನಿತ್ಯ ನನ್ನನ್ನು ನೊಡಲು ತಮ ಕಷ್ಟ ಹೇಳಿಕೊಳ್ಳಲು ನೂರಾರು ಮಂದಿ ಬರುತ್ತಾರೆ. ನನಗೆ ನರೇಂದ್ರ ಮೊದಿಯವರು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಪ್ರತಿ ರಾಜ್ಯಕ್ಕೂ ಬೇಟಿ ನೀಡಿದ್ದೇನೆ. ಬಡತನ ಎಂಬುದು ಇನ್ನೂ ನಿವಾರಣೆಯಾಗಿಲ್ಲ, ಒಂದು ಕಡೆ ಶ್ರೀಮಂತ ವರ್ಗ ಇದ್ದರೆ, ಮತ್ತೊಂದು ಕಡೆ ಬಡ ವರ್ಗದವರು ಇದ್ದಾರೆ. ಇದನ್ನೆಲ್ಲಾ ನೋಡಿದರೆ ಬಡತನ ನಿವಾರಣೆಯಾಗಿಲ್ಲ ಎಂಬ ಜಿಗುಪ್ಸೆಯಾಗುತ್ತದೆ ಎಂದರು. ಆಕಸಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ. ನಿಮಗಳ ಸೇವೆ ಮಾಡಲು ಐದು ಬಾರಿ ನನಗೆ ದೇವರು ಮರುಜನ ನೀಡಿದ್ದಾನೆ.
ಚುನಾವಣಾ ಆಯೋಗದವರು ಸುಪ್ರೀಂ ಕೋರ್ಟ್ ಮುಂದೆ ಚುನಾವಣೆಯನ್ನು ಮುಂದೂಡುವಂತೆ ಮನವಿ ಸಲ್ಲಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಈಗಾಗಲೇ ಐದು, ಹತ್ತು ವರ್ಷ ಕಳೆದು ಹೋಗಿದೆ. ಚುನಾವಣೆ ನಡೆಸಲು ಹಣವಿಲ್ಲದ ಕಾರಣ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಅವರು ಆರೋಪಿಸಿದರು.
ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಸೆಪ್ಟೆಂಬರ್ ತಿಂಗಳವರೆಗೆ ಚುನಾವಣೆಗನ್ನು ಮುಂದೂಡುವಂತೆ ಅಫಿಡವಿಟ್ ಸಲ್ಲಿಸಿದೆ. ಕಾರಣ ರಾಜ್ಯದಲ್ಲಿ ಚುನಾವಣೆ ನಡೆಸಲು ಹಣವಿಲ್ಲದಂತಾಗಿದೆ. ಇತ್ತಿಚೇಗೆ ಸಂತೆಮಾವತ್ತೂರು ಗ್ರಾಮದಲ್ಲಿ ನಡೆದ ಚುನಾವಣೆ ಅಕ್ರಮದ ಬಗ್ಗೆ ಇದುವರೆಗೂ ಯಾವುದೇ ಕ್ರಮವಿಲ್ಲ. ನೀವು ಅಣ್ಣ-ತಮಂದಿರು ಒಂದಾಗಿದ್ದರೆ, ಈ ಕೆಟ್ಟ ಪರಿಸ್ಥಿತಿ ಬರುತ್ತಿರಲಿಲ್ಲ.
ನೀವು ಬುದ್ಧಿವಂತರಾಗಿ ಒಳ್ಳೆಯವರನ್ನು ಆಯ್ಕೆ ಮಾಡಿ. ಮಾಜಿ ಸಚಿವ ಡಿ.ನಾಗರಾಜಯ್ಯ ಅವತ್ತು ಹೇಗಿದ್ದರೋ ಇವತ್ತೂ ಹಾಗೆ ಇದ್ದಾರೆ. ಯಾವುದೇ ಬದಲಾವಣೆ ಇಲ್ಲ. ನೀವಿಬ್ಬರೂ ಒಗ್ಗಟ್ಟಾಗಿ ಇದ್ದಿದ್ದರೆ ನಿಮ್ಮ ಕುಟುಂಬವನ್ನು ಯಾರೂ ಟಚ್ ಮಾಡಲು ಆಗುತ್ತಿರಲಿಲ್ಲ ಎಂದು ಡಿ.ನಾಗರಾಜಯ್ಯ ಹಾಗೂ ಡಿ.ಕೃಷ್ಣಕುಮಾರ್ ಸಹೋದರರಿಗೆ ಒಟ್ಟಾಗಿ ಕೆಲಸ ಮಾಡಿ ಎಂದು ಸಲಹೆ ಮಾಡಿದರು.
ಇದೆ ವೇಳೆ ಸಂಸದ ಡಾ.ಸಿ.ಎನ್.ಮಂಜುನಾಧ್, ಶಾಸಕ ಮುನಿರತ್ನ, ಮಾಜಿ ಸಚಿವ ಡಿ.ನಾಗರಾಜಯ್ಯ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
