Friday, November 22, 2024
Homeಕ್ರೀಡಾ ಸುದ್ದಿ | Sports2023ರಲ್ಲಿ ವಿರಾಟ್‍ ಕೊಹ್ಲಿಯ ಶತಕಗಳ ದರ್ಬಾರ್

2023ರಲ್ಲಿ ವಿರಾಟ್‍ ಕೊಹ್ಲಿಯ ಶತಕಗಳ ದರ್ಬಾರ್

ಬೆಂಗಳೂರು,ಡಿ.22- ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಯಂಗ್ ವಿಕೆಟ್ ಕೀಪರ್, ಬ್ಯಾಟರ್ ಸಂಜು ಸ್ಯಾಮ್ಸನ್ ಆಕರ್ಷಕ ಶತಕ (108 ರನ್) ಸಿಡಿಸುವ ಮೂಲಕ 2023ರಲ್ಲಿ ಭಾರತ ತಂಡದ ಪರ ಶತಕ ಬಾರಿಸಿದ ಕೊನೆಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

ಹಾಗಾದರೆ 2023ರಲ್ಲಿ ಟೀಮ್ ಇಂಡಿಯಾದ ಪರ ಅತಿ ಹೆಚ್ಚು ಒಡಿಐ ಶತಕ ಬಾರಿಸಿದ ಭಾರತ ತಂಡದ ಬ್ಯಾಟರ್ ಯಾರು ಎಂದು ಒಮ್ಮೆ ಅವಲೋಕಿಸಿದರೆ ಅಲ್ಲಿ ಕಿಂಗ್ ಕೊಹ್ಲಿ ಅಗ್ರಸ್ಥಾನದಲ್ಲಿ ನಿಂತಿದ್ದಾರೆ. ಈ ವರ್ಷ ಭಾರತ ತಂಡದ ಪರ ಅತಿ ಹೆಚ್ಚು ಏಕದಿನ ಶತಕ ಸಿಡಿಸಿದ ಬ್ಯಾಟರ್‍ಗಳ ವಿವರ ಇಲ್ಲಿದೆ.

ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಿದ್ದಕ್ಕೆ ಧನ್ಯವಾದ ; ಕಾಂಗ್ರೆಸ್

  1. ವಿರಾಟ್ ಕೊಹ್ಲಿ: 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ಅಬ್ಬರ ಪ್ರದರ್ಶಿಸಿ 765 ರನ್ ಗಳಿಸಿರುವ ವಿರಾಟ್ ಕೊಹ್ಲಿ ಈ ವರ್ಷ ಭಾರತ ತಂಡದ ಪರ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‍ನಲ್ಲಿ ಶತಕ ಸಿಡಿಸಿ ಏಕದಿನ ಸ್ವರೂಪದಲ್ಲಿ 50 ಸೆಂಚುರಿ ಬಾರಿಸಿದ ದಾಖಲೆ ನಿರ್ಮಿಸಿದ ವಿರಾಟ್, ಈ ವರ್ಷ 6 ಶತಕ ಸಿಡಿಸಿ ಟಾಪ್ 1 ಸ್ಥಾನ ಅಲಂಕರಿಸಿದ್ದಾರೆ. ಇದರಲ್ಲಿ 3 ಸೆಂಚುರಿ ಏಕದಿನ ವಿಶ್ವಕಪ್‍ನಲ್ಲೇ ಬಂದಿರುವುದು ವಿಶೇಷ.
  2. ಶುಭಮನ್ ಗಿಲ್: ಈ ವರ್ಷದ ಆರಂಭದಿಂದಲೂ ಉತ್ತಮ ಫಾರ್ಮ್‍ನಲ್ಲಿರುವ ಭಾರತ ತಂಡದ ಯುವ ಆಟಗಾರ ಶುಭಮನ್ ಗಿಲ್, ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ತಮ್ಮ ಚೊಚ್ಚಲ ದ್ವಿಶತಕ (2008) ಸಂಭ್ರಮ ಕಂಡರು. ಈ ವರ್ಷದಲ್ಲಿ ಗಿಲ್ ಆಡಿದ 29 ಏಕದಿನ ಪಂದ್ಯಗಳಿಂದ 5 ಸೆಂಚುರಿ ಗಳಿಸಿದ್ದಾರೆ.
  3. ಶ್ರೇಯಸ್ ಅಯ್ಯರ್: 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 530 ರನ್ ಗಳಿಸಿರುವ ಭಾರತ ತಂಡದ ಯುವ ಆಟಗಾರ ಶ್ರೇಯಸ್ ಅಯ್ಯರ್ 20 ಏಕದಿನ ಪಂದ್ಯಗಳಿಂದ 3 ಶತಕ ಸಿಡಿಸಿ 3ನೇ ಸ್ಥಾನದಲ್ಲಿ ನಿಂತಿದ್ದಾರೆ.
  4. ರೋಹಿತ್ ಶರ್ಮಾ: ತವರಿನ ಅಂಗಳದಲ್ಲಿ ನಡೆದಿದ್ದ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಫೈನಲ್‍ಗೆ ತಲುಪಿಸಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಈ ವರ್ಷ ಆಡಿದ 27 ಪಂದ್ಯಗಳಿಂದ 2 ಸೆಂಚುರಿ ಬಾರಿಸಿದ್ದಾರೆ.
  5. .ಕೆ.ಎಲ್.ರಾಹುಲ್: ಹರಿಣಿಗಳ ನಾಡಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆದ್ದ 2ನೇ ಟೀಮ್ ಇಂಡಿಯಾ ನಾಯಕ ಎಂಬ ದಾಖಲೆ ಬರೆದಿರುವ ಕನ್ನಡಿಗ ಕೆ.ಎಲ್.ರಾಹುಲ್ 5ನೇ ಸ್ಥಾನದಲ್ಲಿದ್ದು,ಈ ವರ್ಷ 27 ಏಕದಿನ ಪಂದ್ಯಗಳಿಂದ 2 ಸೆಂಚುರಿ ಬಾರಿಸಿದ್ದು, ಏಷ್ಯಾಕಪ್ ಟೂರ್ನಿಯ ಸೂಪರ್ 4 ಪಾಕಿಸ್ತಾನ ವಿರುದ್ಧ ಶತಕ ಸಿಡಿಸಿದ್ದಾರೆ.
RELATED ARTICLES

Latest News