ಬೆಂಗಳೂರು,ಡಿ.22 – ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಹಾರ ಹಾಗೂ ಅಕ್ರಮಗಳ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ನಗರ ಹಾಗೂ ಗ್ರಾಮಾಂತರದ ಸರ್ಕಾರಿ ಆಸ್ಪತ್ರೆಗಳಿಗೆ ಲೋಕಾಯುಕ್ತರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವೈದ್ಯರು ಹಾಗೂ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರದ ನೆಲಮಂಗಲ ನಗರ ಪ್ರದೇಶದ ಯಲಹಂಕ, ಕೆಆರ್ ಪುರ, ಜಯನಗರ, ಕೆ.ಸಿ.
ಜನರಲ್ ಆಸ್ಪತ್ರೆ, ಸಂಜಯನಗರ ಆಸ್ಪತ್ರೆ, ರಾಜೀವ್ ಗಾಂದಿ ಆಸ್ಪತ್ರೆ, ಗೌಸಿಯಾ ಆಸ್ಪತ್ರೆ, ವಾಣಿ ವಿಲಾಸ ಆಸ್ಪತ್ರೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಪೋಲೀಸರು ಹಾಗೂ ಅಧಿಕಾರಿಗಳ ತಂಡ ಇಂದು ತಪಾಸಣಾ ಕಾರ್ಯ ಕೈಗೊಂಡಿದೆ.
ಲೋಕಾಯುಕ್ತ ನ್ಯಾಯ ಮೂರ್ತಿ ಬಿಎಸ್ ಪಾಟೀಲ್ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಕೆಸಿ ಜನರಲ್ ಆಸ್ಪತ್ರೆ ಹಾಗೂ ಯಲಹಂಕ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಂದ ಮತ್ತು ಅವರ ಸಂಬಂದಿಕರಿಂದ ಅಹವಾಲುಗಳನ್ನು ಆಲಿಸಿದರು.
ಈ ವೇಳೆ ಇಲ್ಲಿ ಔಷಧಗಳನ್ನು ಬೇರೆಡೆಯಿಂದ ತರಲು ರಶೀದಿ ನೀಡುತ್ತಾರೆ ಮತ್ತು ಚಿಕಿತ್ಸೆಗಾಗಿ ಕೆಲವರು ಹಣ ಕೇಳುತ್ತಾರೆದು ದೂರುಗಳು ಕೇಳಿ ಬಂತು. ಸುಚಿತ್ವ ಕಾಪಾಡಿಕೊಳ್ಳದೇ ಮತ್ತು ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ನಿರ್ವಹಿಸದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಅದೀಕ್ಷಕರಿಗೆ ಕೂಡಲೇ ಇದನ್ನು ಸರಿ ಪಡಿಸುವಂತೆ ಸೂಚಿಸಿ ಗಡುವು ನೀಡಿದರು.
ರಾಜ್ಯದಲ್ಲಿ ಬರ, ಐಷಾರಾಮಿ ವಿಮಾನದಲ್ಲಿ ಸಿದ್ದು-ಜಮೀರ್ ಆಡಂಬರ : ಬಿಜೆಪಿ ಟೀಕೆ
ವಾಣಿ ವಿಲಾಸ ಹಾಗೂ ಸಂಜಯ್ ಗಾಂದಿ ಆಸ್ಪತ್ರೆಗಳಿಗೆ ಎಡಿಜಿಪಿ ಎ ಸುಬ್ರಮಣ್ಯ ರಾವ್ ಅವರ ನೇತೃತ್ವ ತಂಡ ದಿಡೀರ್ ಭೇಟಿ ನೀಡಿದ್ದಾಗ ಆಸತ್ರೆಯ ಸಿಬ್ಬಂದಿ ಗಾಬರಿಗೊಂಡರು. ಲೋಕಾಯುಕ್ತರು ಬಂದಿದ್ದಾರೆಂಬ ಮಾಹಿತಿ ಪಡೆದ ಅಲ್ಲಿಂದ ಸಾರ್ವಜನಿಕರು ವೈದ್ಯರ ಕೊರತೆ, ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಳಂಬ ಮತ್ತು ಲಂಚ ಕೇಳುವ ದೂರುಗಳನ್ನು ಹೇಳಿಕೊಂಡರು.
ಈ ವೇಳೆ ವೈದ್ಯರಿಗೆ ಕಠಿಣ ಎಚ್ಚರಿಕೆ ನೀಡಿ ಸರಿಯಾದ ಸಮಯಕ್ಕೆ ಬಂದು ಕೆಲಸ ಮಾಡಿ ಇದು ನಿಮಗೆ ಪವಿತ್ರವಾದ ಕೆಲಸ ಆರೋಗ್ಯ ಸೇವೆಯಲ್ಲಿ ಉದಾಸೀನ ಬೇಜಾವಬ್ದಾರಿತನ ಸರಿಯಲ್ಲಯೆಂದು ಎಚ್ಚರಿಕೆ ಕೂಡ ನೀಡಿದರು.