Thursday, December 12, 2024
Homeರಾಜ್ಯರಾಜ್ಯದಲ್ಲಿ ಬರ, ಐಷಾರಾಮಿ ವಿಮಾನದಲ್ಲಿ ಸಿದ್ದು-ಜಮೀರ್‌ ಆಡಂಬರ : ಬಿಜೆಪಿ ಟೀಕೆ

ರಾಜ್ಯದಲ್ಲಿ ಬರ, ಐಷಾರಾಮಿ ವಿಮಾನದಲ್ಲಿ ಸಿದ್ದು-ಜಮೀರ್‌ ಆಡಂಬರ : ಬಿಜೆಪಿ ಟೀಕೆ

ಬೆಂಗಳೂರು,ಡಿ.22- ಕರ್ನಾಟಕ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಿಎಂ ಸಿದ್ದರಾಮಯ್ಯ ಅವರ ಜತೆ ಐಷಾರಾಮಿ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದಕ್ಕೆ ಸಂಬಂಧಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಅವರ ಮೇಲೆ ಮುಗಿಬಿದ್ದಿದೆ. ರಾಜ್ಯದಲ್ಲಿ ಬರ ಬಂದು ಜನತೆ ಸಂಕಷ್ಟದಲ್ಲಿದ್ದರೆ ಮಜಾವಾದಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಆಪ್ತ ಜಮೀರ್ ಅಹ್ಮದ್ ಖಾನ್ ಆಡಂಬರಕ್ಕೇನೂ ಕಡಿಮೆ ಇಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ದೆಹಲಿಯಿಂದ ಬೆಂಗಳೂರಿಗೆ ನಮ್ಮ ಹೆಮ್ಮೆಯ ನಾಯಕರು, ಸಿಎಂ ಸಿದ್ದರಾಮಯ್ಯ ಅವರ ಜೊತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಸಂತಸದ ಕ್ಷಣಗಳು ಎಂದು ಜಮೀರ್ ಅಹ್ಮದ್ ಖಾನ್ ನಿನ್ನೆ ರಾತ್ರಿ ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ವಿಮಾನ ಪ್ರಯಾಣದ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.

ರಾಹುಲ್‍ಗಾಂಧಿ ಸಂಸದರಾಗಲು ನಾಲಾಯಕ್ ; ವಿಜಯ್ ವರ್ಗಿಯಾ

ಜಮೀರ್ ಅಹ್ಮದ್ ಅವರು ಐಷಾರಾಮಿ ಚಾರ್ಟರ್ಡ್ ಫ್ಲೈಟ್‍ನಲ್ಲಿ ಉದ್ದನೆಯ ಸೋಫಾದಲ್ಲಿ ಕ್ಯಾಮೆರಾಗೆ ಪೋಸ್ ನೀಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ವಿಶೇಷ ವಿಮಾನದಲ್ಲಿ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಕೂಡ ಇರುವುದನ್ನು 32 ಸೆಕೆಂಡುಗಳ ವೀಡಿಯೊದಲ್ಲಿ ಕಾಣಬಹುದು.

RELATED ARTICLES

Latest News