Wednesday, October 16, 2024
Homeಮನರಂಜನೆಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡ್ತಾರಂತೆ ದುನಿಯಾ ವಿಜಯ್ ಪುತ್ರಿ

ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡ್ತಾರಂತೆ ದುನಿಯಾ ವಿಜಯ್ ಪುತ್ರಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರಾ ಚಿತ್ರದ ಮೂಲಕ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅವರ ಎಂಟ್ರಿ ಆಗಿದ್ದು, ಈಗ ದುನಿಯಾ ವಿಜಯ್ ಅವರ ಪುತ್ರಿ ಮೋನಿಕಾ ಜಬರದಸ್ತಾಗಿ ಬಣ್ಣದ ಲೋಕ ಪ್ರವೇಶಿಸಲಿದ್ದಾರೆ. ದುನಿಯಾ ವಿಜಯ್ ಅವರು ನಟಿಸಿ, ನಿರ್ದೇಶಿಸಿರುವ ಭೀಮ ಚಿತ್ರದ ಚಿತ್ರೀಕರಣವು ಬಹುತೇಕ ಮುಗಿದಿದ್ದು, ಈಗ ತಮ್ಮ ಮುಂದಿನ ಚಿತ್ರದಲ್ಲಿ ಪುತ್ರಿ ಮೋನಿಕಾರೊಂದಿಗೆ ನಟಿಸಲು ಹೊರಟಿದ್ದಾರೆ ಎಂಬ ಸುದ್ದಿಯೂ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಅಪ್ಪ ಹಾಗೂ ಮಗಳ ಸಮಾಗಮದ ಚಿತ್ರವನ್ನು ಕಾಟೇರ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಜಡೇಶ್‍ಕುಮಾರ್ ಅವರು ಆಕ್ಷನ್ ಕಟ್ ಹೇಳಲಿದ್ದಾರೆ. ಜಡೇಶ್ ಕುಮಾರ್ ಅವರು ಈ ಹಿಂದೆ ಶರಣ್ ನಟನೆಯ ಗುರುಶಿಷ್ಯರು ಚಿತ್ರವನ್ನು ನಿರ್ದೇಶಿಸಿದ್ದರು.

ವಜ್ರದುಡುಪಿನಲ್ಲಿ ಪಳಪಳ ಹೊಳೆದ ಊರ್ವಶಿ

ಸಲಗ, ಭೀಮ ಚಿತ್ರವನ್ನು ನಿರ್ದೇಶಿಸಿದ್ದ ದುನಿಯಾ ವಿಜಯ್‍ಅವರು ತಮ್ಮ ನಿರ್ದೇಶನದ ಚಿತ್ರದ ಮೂಲಕವೇ ಮೋನಿಷಾ ಹಾಗೂ ಮೋನಿಕಾರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಾರೆ ಎಂದು ಹೇಳಲಾಗುತ್ತಿತ್ತಾದರೂ, ಈಗ ಜಡೇಶ್‍ಕುಮಾರ್ ಅವರ ನಿರ್ದೇಶನದ ಮೂಲಕ ಮೋನಿಕಾರನ್ನು ಬಣ್ಣದ ಲೋಕಕ್ಕೆ ಕರೆತರಲು ಹೊರಟಿದ್ದಾರೆ.

ಮೋನಿಕಾ ಈಗಾಗಲೇ ಬಾಲಿವುಡ್‍ನ ಖ್ಯಾತ ನಟ ಅನುಪಮ್‍ಖೇರ್ ಅವರ ಫಿಲಂ ಇನ್ಸಿಟ್ಯೂಟ್‍ನಲ್ಲಿ ನಟನೆ ಬಗ್ಗೆ ಸಂಪೂರ್ಣ ತಯಾರಿ ನಡೆಸಿದ್ದು, ಅಪ್ಪ ಹಾಗೂ ಮಗಳ ದರ್ಶನವನ್ನು ಬೆಳ್ಳಿತೆರೆ ಮೇಲೆ ನೋಡಲು 2024ರ ಅಂತ್ಯದವರೆಗೂ ಕಾಯಲೇಬೇಕು.

RELATED ARTICLES

Latest News