Friday, May 17, 2024
Homeರಾಜ್ಯಸದಾಶಿವ ಆಯೋಗ ವರದಿ ಜಾರಿಗೆ ಮಾದಿಗ ದಂಡೋರ ಆಗ್ರಹ

ಸದಾಶಿವ ಆಯೋಗ ವರದಿ ಜಾರಿಗೆ ಮಾದಿಗ ದಂಡೋರ ಆಗ್ರಹ

ಬೆಂಗಳೂರು,ಡಿ.22- ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ವರದಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಜನಜಾಗೃತಿ ಸಮಿತಿ ಇಂದೂ ಸರ್ಕಾರವನ್ನು ಒತ್ತಾಯಿಸಿತು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಎಂ.ಸಿ. ಶ್ರೀನಿವಾಸ, ಮಾದಿಗ ದಂಡೋರ ಹೋರಾಟ ವೇದಿಕೆ ರಾಜ್ಯದಲ್ಲಿ ರಸ್ತೆತಡೆ, ರೈಲು ರೋಖೋ ಚಳುವಳಿ, ಜಿಲ್ಲಾ ಸಮಾವೇಶಗಳು, ಅರೆಬೆತ್ತಲೆ ಮೆರವಣಿಗೆ, ಪುಟಗೋಸಿ ಚಳುವಳಿ, ತಮಟೆ ಚಳುವಳಿ, ಏಕಕಾಲದಲ್ಲಿ ರಾಜ್ಯದಲ್ಲಿ 125 ತಾಲ್ಲೂಕು ಕಛೇರಿಗಳ ಮುಂದೆ ಮತ್ತು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಬೃಹತ್ ಸಮಾವೇಶಗಳು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ, ವಿಧಾನಸೌಧ ಅಧಿವೇಶನದಲ್ಲಿ ಗದ್ದಲ ಇನ್ನೂ ಮುಂತಾದ ಆಳುವ ಸರ್ಕಾರದ ಗಮನ ಸೆಳೆಯುವ ಹೋರಾಟಗಳ ಬಲದಿಂದ ಮುಂದುವರಿದ ನಮ್ಮ ಮಾದಿಗ ದಂಡೋರ, ಮೀಸಲಾತಿ ಹೋರಾಟ ಸಮಿತಿಯಿಂದ ಮೀಸಲಾತಿ ಹೋರಾಟವನ್ನು ಕಾರ್ಯರೂಪದಲ್ಲಿ ತರಲಾಗಿದೆ ಹಾಗೂ ಕಳೆದ 25 ವರ್ಷಗಳಿಂದ ನಿರಂತರವಾಗಿ ಈ ಬಗ್ಗೆ ಹಲವಾರು ಹೋರಾಟಗಳನ್ನು ಸಹ ಮಾಡುತ್ತಾ ಬಂದಿರುತ್ತೇವೆ.

ಹುಬ್ಬಳ್ಳಿಯ ಹೋರಾಟವನ್ನು ಮಾಡುವ ಸಂದರ್ಭದಲ್ಲಿ ಸಮಾವೇಶದಲ್ಲಿ ದಿನಾಂಕ: 11.12.2016 ರಲ್ಲಿ 07 ಜನರು ಮೃತಪಟ್ಟಿರುತ್ತಾರೆ. ಹಾಗೂ ದಿನಾಂಕ 11.12.2023 ರ ಸೋಮವಾರದಂದು ಬೆಂಗಳೂರಿನಿಂದ ಬೆಳಗವಿಯ ಸಮಾವೇಶಕ್ಕೆ ಹೋಗಿ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವ ಸಂಬಂಧ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ 4 ಕಾರ್ ನಲ್ಲಿ ತೆರಳುತ್ತಿದ್ದಾಗ ದಾವಣಗೆರೆ ಬಳಿ ಸದರಿ ಕಾರ್ ಅಪಘಾತಗೊಂಡು 18 ಜನರು ತೀವ್ರತರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.

ಇಷ್ಟೇ ಅಲ್ಲದೆ ಸಮಾಜದ ಏಳಿಗೆಗಾಗಿ ಶ್ರಮಿಸಿದ ಹಲವಾರು ಜನರು ಸಹ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವಲ್ಲಿ ಹೋರಾಟ ಮಾಡಿ ತಮ್ಮ ಪ್ರಾಣವನ್ನು ತ್ಯಜಿಸಿರುತ್ತಾರೆ. 2012 ರಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅಂದಿನ ಮುಖ್ಯಮಂತ್ರಿಗಳಾದ ಸದಾನಂದಗೌಡರವರ ಅವಧಿಯಲ್ಲಿ ಸಲ್ಲಿಸಲಾಗಿತ್ತು.

ಜನರ ದುಡ್ಡು, ಆಕಾಶದಲ್ಲಿ ಜಾತ್ರೆ : ಸುದ್ದು-ಜಮೀರ್ ಆಡಂಬರಕ್ಕೆ ವಿಜೆಯೇಂದ್ರ ಟೀಕೆ

ಮುಂದುವರೆದು ನಮ್ಮ ಸಂಘಟನೆಯು ಹಲವಾರು ವರ್ಷಗಳಿಂದ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ವರದಿ ಅನುಷ್ಠಾನಗೊಳಿಸಲು ಹಲವಾರು ಹೋರಾಟ, ಪ್ರತಿಭಟನೆ ಮತ್ತು ಚಳುವಳಿಗಳನ್ನು ಮಾಡುತ್ತಾ ಬಂದಿರುತ್ತದೆ. ಆದರೂ ಸಹ ಆಯೋಗದ ವರದಿಯನ್ನು ಇದುವರೆಗೂ ಜಾರಿಗೊಳಿಸಿದ ವಿಳಂಭ ಧೋರಣೆ ಅನುಸರಿಸಲಾಗುತ್ತಿದೆ. 2023 ರಲ್ಲಿನ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಆಗ ನಾವು ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಒತ್ತಾಯ ಮಾಡುವುದಾಗಿ ತಿಳಿಸಿದ್ದರು ಆ ಮಾತನ್ನು ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದರು

ಆದ್ದರಿಂದ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸುವ ಸಂಬಂಧ ಕಡತವನ್ನು ಮಂಡಿಸಿ ಅನುಮೋದನೆ ನೀಡಿ ಸದರಿ ಕಡತವನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸರ್ಕಾರವನ್ನು ಒತ್ತಾಯ ಮಾಡಲಾಗುವುದು ಈ ವಿಷಯವನ್ನು ತಮ್ಮ ಪ್ರತಿಷ್ಠಿತ ದಿನಪತ್ರಿಕೆಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಿಸಲು ಕೋರಿದೆ. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ವಿ ರಾಮಪ್ಪ, ಗೌರವಾಧ್ಯಕ್ಷ ಕೆ.ಬಿ ನರಸಿಂಹ, ಮಹಿಳಾ ಅಧ್ಯಕ್ಷ ವೀಣಮ್ಮ,ಸುರೇಶ,ರಂಗಣ್ಣ ಮುಂತಾದವರು ಉಪಸ್ಥಿತರಿದ್ದರು

RELATED ARTICLES

Latest News