Wednesday, February 28, 2024
Homeರಾಜ್ಯಹೊಸ ವರ್ಷಾಚರಣೆಗೆ ಕಟ್ಟೆಚ್ಚರ, ಗೃಹಸಚಿವ ಪರಮೇಶ್ವರ್ ಸಭೆ

ಹೊಸ ವರ್ಷಾಚರಣೆಗೆ ಕಟ್ಟೆಚ್ಚರ, ಗೃಹಸಚಿವ ಪರಮೇಶ್ವರ್ ಸಭೆ

ಬೆಂಗಳೂರು,ಡಿ.22- ಹೊಸ ವರ್ಷಾಚರಣೆ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸುರಕ್ಷತೆಗೆ ಸಂಬಂಧಪಟ್ಟಂತೆ ಅನುಸರಿಸಬೇಕಾದ ಕ್ರಮಗಳ ಕುರಿತು ಗೃಹಸಚಿವ ಡಾ.ಜಿ.ಪರಮೇಶ್ವರ್ ವಿಧಾನಸೌಧದಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಿದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಬಿಬಿಎಂಪಿಯ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ನಗರ ಪೆಪೊಲೀಸ್ ಆಯುಕ್ತ ಬಿ.ದಯಾನಂದ್, ಹಿರಿಯ ಅಧಿಕಾರಿಗಳಾದ ಕಮಲ್‍ಪಂಥ್ ಸೇರಿದಂತೆ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಸಚಿವರು, ಬೆಂಗಳೂರಿನಲ್ಲಿ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಇಂದಿರಾನಗರ, ಶಾಪಿಂಗ್ ಮಾಲ್, ಸ್ಟಾರ್ ಹೋಟೆಲ್‍ಗಳು ಸೇರಿದಂತೆ ಅನೇಕ ಕಡೆ ಜನ ಸೇರಿಕೊಂಡು ಹೊಸ ವರ್ಷಾಚರಣೆ ಮಾಡುವುದು ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಅಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ಎಚ್ಚರಿಕೆ ವಹಿಸಲು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿಯೂ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಪೊಲೀಸರು, ಅಗ್ನಿಶಾಮಕ, ಅಬಕಾರಿ, ಮೆಟ್ರೋ, ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದ್ದು, ಎಲ್ಲಾ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ನಿಭಾಯಿಸಬೇಕು. ಆಯಾ ಇಲಾಖೆಗಳು ಈಗಾಗಲೇ ಅನುಸರಿಸಿರುವ ಮುಂಜಾಗ್ರತೆ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದರು.

ಹೊಸ ವರ್ಷಕ್ಕೂ ಮೊದಲು ಆಯಾ ಇಲಾಖೆಗಳು ಆಂತರಿಕವಾಗಿ ಮತ್ತೊಂದು ಸಭೆ ನಡೆಸಿ ಅಂತಿಮ ಹಂತದ ಸಿದ್ಧತೆ ಕೈಗೊಳ್ಳಲಿವೆ. ಅನಂತರ ಎಲ್ಲಾ ಇಲಾಖೆಗಳು ಸಮನ್ವಯಗೊಂಡು ಕೆಲಸ ಮಾಡುತ್ತವೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಭಾವನೆ ಇಲ್ಲ : ಮೋದಿ

ಎನ್‍ಐಎ ಅಧಿಕಾರಿಗಳು ಕಳೆದೊಂದು ತಿಂಗಳಿನಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ದಾಳಿ ನಡೆಸಿ, ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ಹೊರಗಡೆಯಿಂದ ಬೇರೆ ಉದ್ದೇಶವಿಟ್ಟುಕೊಂಡು ಬರುವವರ ಮೇಲೆ ತೀವ್ರ ನಿಗಾ ವಹಿಸಲಾಗುವುದು. ಈ ಬಗ್ಗೆ ಗುಪ್ತಚರ ಇಲಾಖೆಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದರು.


ಆರೋಗ್ಯ ಇಲಾಖೆಯ ಸೂಚನೆ ಪ್ರಕಾರ, ಹೆಚ್ಚು ಜನಸಂದಣಿ ಇರುವ ಕಡೆ ಮಾಸ್ಕ್ ಧರಿಸಬೇಕಿದೆ. ಅದರಲ್ಲೂ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯವಾಗಿದೆ. ಅದರ ಹೊರತಂತೆ ಬೇರೆ ನಿಬಂಧನೆಗಳಿಲ್ಲ. ಮೆಟ್ರೊ ಪ್ರಯಾಣಿಕರು ಎಂ.ಜಿ.ರಸ್ತೆ ಬದಲು ಕುಂಬ್ಳೆ ಅಥವಾ ಟ್ರಿನಿಟಿ ಸರ್ಕಲ್‍ನಲ್ಲಿ ಪ್ರವೇಶ ಪಡೆಯುವುದು ಸೇರಿದಂತೆ ಸಣ್ಣಪುಟ್ಟ ಬದಲಾವಣೆಗಳನ್ನಷ್ಟೇ ಮಾಡಲಾಗುತ್ತಿದೆ ಎಂದು ಹೇಳಿದರು.

ಜನಸಂದಣಿ ಸೇರುವ ಪ್ರದೇಶಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವ ಸಾಧ್ಯತೆಯಿದೆ. ಇದರಿಂದ ಅವಘಡಗಳಾಗುವ ಅವಕಾಶವಿದ್ದು, ಜಾಗೃತರಾಗಿರುವಂತೆ ಅಗ್ನಿಶಾಮಕ ಅಕಾರಿಗಳಿಗೆ ಸಲಹೆ ನೀಡಲಾಗಿದೆ. ಪಬ್ ಮತ್ತು ಬಾರ್‍ಗಳಲ್ಲಿ ಸುರಕ್ಷತಾ ಕ್ರಮಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು. ಮೇಲ್ಛಾವಣಿಯಲ್ಲಿ ಅಡುಗೆ ಮಾಡುವುದಕ್ಕೆ ಅವಕಾಶ ಕೊಡಬಾರದು. ಮದ್ಯದಂಗಡಿಗಳಿಗೆ ಯಥಾ ರೀತಿಯ ಸಮಯದ ನಿಗದಿಯಿರುತ್ತದೆ. ವಿಶೇಷ ರಿಯಾಯಿತಿ ಇರುವುದಿಲ್ಲ ಎಂದರು.

ತಾತ್ಕಾಲಿಕ ಷೆಡ್‍ಗಳನ್ನು ಹಾಕಿಕೊಂಡು ರೆಸ್ಟೋರೆಂಟ್ ನಡೆಸುವುದು, ಮದ್ಯ ಸರಬರಾಜು ಮಾಡುವಂತಹ ಚಟುವಟಿಕೆಗಳನ್ನು ಕ್ರಮಬದ್ಧಗೊಳಿಸಲಾಗುತ್ತಿದೆ. ಯಾವುದನ್ನೂ ನಿರ್ಬಂಧಿಸುವುದಿಲ್ಲ. ಆದರೆ ಎಚ್ಚರಿಕೆ ವಹಿಸುತ್ತೇವೆ ಎಂದು ತಿಳಿಸಿದರು. ಪೊಲೀಸರು ಅಲ್ಲಲ್ಲಿ ತಾತ್ಕಾಲಿಕ ಸಹಾಯ ವೇದಿಕೆಗಳನ್ನು ತೆರೆಯಬೇಕು, ಮೈಕ್‍ಗಳಲ್ಲಿ ಜನರಿಗೆ ಮಾಹಿತಿಯನ್ನು ನೀಡುತ್ತಿರಬೇಕು, ಮೆಟ್ರೋ, ಬಸ್ ಮತ್ತು ಸಾರ್ವಜನಿಕ ಬಸ್‍ಗಳು ಹೆಚ್ಚು ಸಂಚರಿಸಬೇಕು, ಪಾರ್ಕಿಂಗ್ ಸ್ಥಳಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿರುವುದಾಗಿ ಹೇಳಿದರು.

ಜನರ ದುಡ್ಡು, ಆಕಾಶದಲ್ಲಿ ಜಾತ್ರೆ : ಸುದ್ದು-ಜಮೀರ್ ಆಡಂಬರಕ್ಕೆ ವಿಜೆಯೇಂದ್ರ ಟೀಕೆ

ಇದಕ್ಕೂ ಮೊದಲು ತಮ್ಮ ಮನೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಕರ್ನಾಟಕದಲ್ಲಿ ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆಯಂತಹ ನಾಯಕರಿದ್ದಾರೆ ಎಂದು ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, ವಿಪಕ್ಷ ನಾಯಕರು ಭ್ರಮೆಯಲ್ಲಿರಲಿ, ನಾವು ಬೇಡ ಎನ್ನುವುದಿಲ್ಲ ಎಂದು ತಿರುಗೇಟು ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರು ಐಶಾರಾಮಿ ವಾಹನದಲ್ಲಿ ಬಂದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

RELATED ARTICLES

Latest News