ಬೆಂಗಳೂರು,ಡಿ.22 -ಪೊಲೀಸರೆಂದು ಹೇಳಿಕೊಂಡು ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿ ಮನೆಗೆ ನುಗ್ಗಿ ಕುಟುಂಬದವರನ್ನು ಬೆದರಿಸಿ ಡಕಾಯಿತಿ ಮಾಡಿಕೊಂಡು ಪರಾರಿಯಾಗಿದ್ದ 11 ಮಂದಿ ಡಕಾಯಿತರ ಪೈಕಿ ಇಬ್ಬರು ರೌಡಿಗಳು, ಒಬ್ಬ ಉಪ ಅರಣ್ಯಾಧಿಕಾರಿ, ಕಾರು ಚಾಲಕ ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಹೆಚ್.ಎಂ.ಟಿ.ಲೇಔಟ್‍ನಲ್ಲಿರುವ ಉದ್ಯಮಿ ಮಗ ಡಿ.4ರಂದು ಸಂಜೆ ಸುಮಾರು 6.30ರ ಸುಮಾರಿಗೆ ಪ್ಯಾಕ್ಟರಿಯಿಂದ ಬಂದು ಪತ್ನಿಯೊಂದಿಗೆ ಮನೆಯಲ್ಲಿದ್ದರು. ಅಂದು ರಾತ್ರಿ 7.30ರ ಸುಮಾರಿನಲ್ಲಿ ಡಕಾಯಿತರ ಗುಂಪು ಇವರ ಮನೆ ಬಂದಿದ್ದು, ಒಬ್ಬಾತ ಕಾಲಿಂಗ್ ಬೆಲೆ ಒತ್ತಿದ್ದಾನೆ. ಬಾಗಿಲು ತೆರೆಯುತ್ತಿದ್ದಂತೆ ಇಬ್ಬರು ಆರೋಪಿಗಳು ಪೊಲೀಸರೆಂದು ಹೇಳಿಕೊಂಡು ಮನೆಯೊಳಗೆ ನುಗ್ಗಿದ್ದಾರೆ. ನಂತರ ಹೊರಗಡೆ ಇದ್ದ ಉಳಿದ ಡಕಾಯಿತರು ಮನೆಯೊಳಗೆ ನುಗ್ಗಿ ಉದ್ಯಮಿಯ ಮಗ ಹಾಗೂ ಅವರ ಪತ್ನಿ ಮೇಲೆ ಹಲ್ಲೆ ಮಾಡಿ ಕೈಗಳನ್ನು ಕಟಿ ್ಟ ಹಾಕಿ, ಮನೆಯಲ್ಲಿದ್ದ ಚಿನ್ನಾಭರಣ, ಹಣ ಮತ್ತು ಉದ್ಯಮಿ ತಾಯಿಯ ಮೈಮೇಲಿದ್ದ ಚಿನ್ನಾಭರಣ, ಮೊಬೈಲ್ ಫೋನ್, ಲ್ಯಾಪ್‍ಟಾಪ್, ದೋಚಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೃತ್ಯ ನಡೆದ ಸ್ಥ ಳವನ್ನು ಪರಿಶೀಲಿಸಿದ್ದಾರೆ. ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನು ಇನ್ಸ್‍ಪೆಕ್ಟ ರ್ ನೇತೃತ್ವದಲ್ಲಿ ಒಂದು ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ತನಿಖೆ ಕೈ ಗೊಂಡು ಕೃತ್ಯ ನಡೆದ ಸ್ಥ ಳದ ಅಕ್ಕಪಕ್ಕ ರಸ್ತೆಯಲ್ಲಿನ ಸಿ.ಸಿ.ಕ್ಯಾಮರಾಗಳನ್ನು ಪರಿಶೀಲಿಸಿ, ಕೃತ್ಯ ತ್ಯವೆಸಗಿದ ವ್ಯಕ್ತಿಯ ಚಹರೆಯನ್ನು ತಂತ್ರಜ್ಞಾನ ಸಹಾಯದಿಂದ ಗುರುತು ಪತ್ತೆಹಚ್ಚಿ 11 ಮಂದಿಯನ್ನು ಬಂಧಿಸಿದೆ.
ವಜ್ರದುಡುಪಿನಲ್ಲಿ ಪಳಪಳ ಹೊಳೆದ ಊರ್ವಶಿ
ಆರೋಪಿಗಳಿಂದ 45.52 ಲಕ್ಷ ಬೆಲೆ ಬಾಳುವ 273 ಗ್ರಾಂ ಚಿನ್ನಾಭರಣಗಳು, 23,37,300 ರೂ. ನಗದು, 370 ಗ್ರಾಂ ಬೆಳಿ ್ಳ ಒಡವೆಗಳು 2 ಮೊಬೈಲ್ ಫೋನ್‍ಗಳು, ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್ ಫೋನ್‍ಗಳು 3 ಲಾಂಗ್, ಡ್ರಾಗರ್, ರಾಡ್, ಕಾರು, ಹಾಗೂ 2 ದ್ವಿಚಕ ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಹೆಚಿ ್ಚನ ವಿಚಾರಣೆಗೊಳಪಡಿಸಿದಾಗ ಒಬ್ಬ ಕೆಜೆ ಹಳ್ಳಿ ಹಾಗೂ ಮತ್ತೊಬ್ಬ ಹೆಣ್ಣೂರು ಪೊಲೀಸ್ ಠಾಣೆಯ ರೌಡಿ ಶೀಟರ್ ಎಂಬುದು ಗೊತ್ತಾಗಿದೆ.
ಮತ್ತೊಬ್ಬ ಆರೋಪಿ ಉದ್ಯಮಿಯ ಕಂಪನಿಯಲ್ಲಿ ಈ ಹಿಂದೆ ಲಾರಿ ಚಾಲಕನಾಗಿ ಹಾಗೂ ಹಣ ಕಲೆಕ್ಷನ್ ಮಾಡುವ ಕೆಲಸವನ್ನೂ ಮಾಡಿಕೊಂಡಿದ್ದಾಗ ಅವರ ಹಣಕಾಸಿನ ವ್ಯವಹಾರವನ್ನು ತಿಳಿದುಕೊಂಡು ಹಣ ದೋಚಲು ಯೋಚಿಸಿ ಈ ಕೃತ್ಯ ನಡೆಸಿದ್ದಾನೆ. ಇದಲ್ಲದೆ ಕೃತ್ಯದ ಸಂದರ್ಭದಲ್ಲಿ ಪೊಲೀಸ್ ಎಂದು ಹೇಳಿಕೊಂಡವರು ಚಿಕ್ಕ ಮಗಳೂರು ಮೂಲದ ಚನ್ನಗಿರಿ ಅರಣ್ಯವಲಯದಲ್ಲಿನ ಉಪ ಅರಣ್ಯಾಧಿಕಾರಿಯಾಗಿರುವುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.