Saturday, May 2, 2026
Homeರಾಷ್ಟ್ರೀಯಯಾದಗಿರಿ : ಬಿಸಿಲಿನ ತಾಪಕ್ಕೆ ಕಾರ್ಮಿಕ ಬಲಿ

ಯಾದಗಿರಿ : ಬಿಸಿಲಿನ ತಾಪಕ್ಕೆ ಕಾರ್ಮಿಕ ಬಲಿ

Yadagiri: Laborer dies due to heatstroke

ಯಾದಗಿರಿ,ಮೇ.2- ಬಿಸಿಲಿನ ತಾಪಕ್ಕೆ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ ನಡೆದಿದೆ.ಮೃತನನ್ನು ಸಿದ್ದಪ್ಪ ಕೊಂಡಗುಳಿ ಎಂದು ಗುರುತಿಸಲಾಗಿದೆ .

ಮೃತ ಸಿದ್ದಪ್ಪ ಕೂಲಿ ಕೆಲಸ ಮಾಡಿ ಮರಳಿ ಮನೆ ಬಂದಾಗ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೂಲಿ ಕೆಲಸಕ್ಕೆ ತೆರಳಿದ್ದಾಗ ಬಿಸಿಲು ಹೆಚ್ಚಾದ್ದರಿಂದ ಮನೆಗೆ ಮರಳಿದ್ದರು. ಮನೆಗೆ ಬಂದ ತಕ್ಷಣ ನೀರಿನ ಕುಡಿದ ಕೆಲ ಕ್ಷಣಗಳಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಮೃತ ಸಿದ್ದಪ್ಪ ಕುಟುಂಬಸ್ಥರು ಕಡುಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ, ಸಿದ್ದಪ್ಪ ಸಾವಿನಿಂದ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ಕೂಲಿ ನಾಲಿ ಮಾಡಿ ಸಿದ್ದಪ್ಪ ಕುಟುಂಬಕ್ಕೆ ನೆರವು ಆಗಿದ್ದ.

ಹೀಗಾಗಿ ಸರ್ಕಾರ ಕೂಡಲೇ ಮೃತ ಕುಟುಂಬಸ್ಥರಿಗೆ ಸಹಾಯ ಮಾಡಬೇಕೆಂದು ಗ್ರಾಮಸ್ಥರು ಹಾಗು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಆಗ್ರಹಿಸಿದ್ದಾರೆ. ಮೂಲಗಳ ಪ್ರಕಾರ ಆತ ಮಾನಸಿಕ ಅಸ್ವಸ್ಥ ನಾಗಿದ್ದು ಬೇರ ಕಾರಣದಿಂದ ಸಾವನ್ನಪ್ಪಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News