ಮಂಗೋಲಿಯಾ,ಅ.1-ದೇಶದ ಪ್ರಮುಖ ಮೂಲಸೌಕರ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಮೇಘಾ ಎಂಜಿನಿಯರಿಂಗ್ ಮತ್ತು ಇನ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್), ಸರ್ಕಾರಿ ಸ್ವಾಮ್ಯದ ಮಂಗೋಲ್ ರಿಫೈನರಿ – ಎಲ್‍ಎಲ್ ಸಿಯಿಂದ 648 ಮಿಲಿಯನ್ ಡಾಲರ್ ಮೌಲ್ಯದ ಅತ್ಯಾಧುನಿಕ ಕಚ್ಚಾ ತೈಲ ಸಂಸ್ಕರಣಾ ಘಟಕವನ್ನು ನಿರ್ಮಿಸುವ ಒಡಂಬಡಿಕೆ ಮಾಡಿಕೊಂಡಿದೆ.
ಎಂಇಐಎಲ್ ಹೈಡ್ರೋಕಾರ್ಬನ್ಸ್ ಅಧ್ಯಕ್ಷ ಪಿ ರಾಜೇಶ್ ರೆಡ್ಡಿ ಮತ್ತು ಮಂಗೋಲ್ ರಿಫೈನರಿ ಸ್ಟೇಟ್ ಸ್ವಾಮ್ಯ ಪ್ರತಿನಿಧಿಸುವ ಕಾರ್ಯನಿರ್ವಾಹಕ ನಿರ್ದೇಶಕಿ ಅಲ್ಟಾಂಟ್ಸೆಟ್ಸೆಗ್ ದಶ್ಡಾವಾ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.
ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆ 209 ರೂ. ಏರಿಕೆ
ಎಂಇಐಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಕೃಷ್ಣಾರೆಡ್ಡಿ, ಉನ್ನತ ಅಧಿಕಾರಿಗಳು, ಗಣ್ಯರು ಮತ್ತು ಎರಡೂ ದೇಶಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಮಂಗೋಲ್ ಸಂಸ್ಕರಣಾಗಾರ ಯೋಜನೆಯು ಸರ್ಕಾರದಿಂದ ಸರ್ಕಾರಕ್ಕೆ (ಜಿ- 2-ಜಿ) ಉಪಕ್ರಮವಾಗಿದೆ. ಪೂರ್ಣಗೊಂಡ ನಂತರ, ಸಂಸ್ಕರಣಾಗಾರವು ವಾರ್ಷಿಕವಾಗಿ 1.5 ಮಿಲಿಯನ್ ಟನ್ ಕಚ್ಚಾ ತೈಲವನ್ನು ಉತ್ಪಾದಿಸುವ ನಿರೀಕ್ಷೆಯಿದೆ, ಇದು ಮಂಗೋಲಿಯದ ದೇಶೀಯ ಬೇಡಿಕೆಯಾದ ಗ್ಯಾಸೋಲಿನ್, ಡೀಸೆಲ್, ವಾಯುಯಾನ ಇಂಧನ ಮತ್ತು ಎಲ್‍ಪಿಜಿಯನ್ನು ಪೂರೈಸುತ್ತದೆ.
ಅರಣ್ಯ ಇಲಾಖೆಯ ಕಾರ್ಯಕ್ಕೆ ರಾಜ್ಯಪಾಲರ ಮೆಚ್ಚುಗೆ
ಮಂಗೋಲ್ ಸಂಸ್ಕರಣಾಗಾರವು ಒಂದು ಸವಾಲಿನ ಯೋಜನೆಯಾಗಿದೆ ಮತ್ತು ಇದನ್ನು ತೀವ್ರ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಒಟ್ಟಾರೆ ಭಾರತೀಯ ಮೂಲದ ಸಂಸ್ಥೆಯಾದ ಎಂ.ಇ.ಐ.ಎಲ್ ಜಾಗತಿಕ ಮಟ್ಟದಲ್ಲಿ ಅವಕಾಶಗಳನ್ನು ತನ್ನದಾಗಿಸಿ ಕೊಳ್ಳುವತ್ತ ಮುನ್ನಡೆಯುವ ಮೂಲಕ ಸಾಧನೆಗೈದಿದೆ.