ಕೋಲ್ಕತ್ತಾ,ಅ.1- ಸುಗಂಧದ್ರವ್ಯಗಳ ದಾಸ್ತಾನಿಟ್ಟಿದ್ದ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಫಫ್ರ್ಯೂಮ್‍ಗಳು ಬೆಂಕಿಗೆ ಸುಟ್ಟುಹೋಗಿ ಭಾರೀ ನಷ್ಟ ಸಂಭವಿಸಿದೆ. ಕೋಲ್ಕತ್ತಾದ ಎಲ್ಲಿಯೆಟ್ ರಸ್ತೆ ಪ್ರದೇಶದಲ್ಲಿರುವ ವೇರ್‍ಹೌಸ್‍ನಲ್ಲಿ ಈ ಘಟನೆ ನಡೆದಿದ್ದು, ಸುಮಾರು 15ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳು ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ತಹಬಂದಿಗೆ ತಂದಿದ್ದಾರೆ.
ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಮಳಿಗೆಯಲ್ಲಿ ಯಾವ ನೌಕರರು ಇರದೆ ಇದ್ದುದ್ದರಿಂದ ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ವೇಳೆ ಒಬ್ಬ ಅಗ್ನಿಶಾಮಕ ಸಿಬ್ಬಂದಿಗೆ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರಣ್ಯ ಇಲಾಖೆಯ ಕಾರ್ಯಕ್ಕೆ ರಾಜ್ಯಪಾಲರ ಮೆಚ್ಚುಗೆ
ಗೋದಾಮಿನಲ್ಲಿ ಬಾಡಿ ಸ್ಪ್ರೇ ಮತ್ತು ಸುಗಂಧ ದ್ರವ್ಯದಂತಹ ಹಲವಾರು ದಹಿಸುವ ಉತ್ಪನ್ನಗಳನ್ನು ದಾಸ್ತಾನು ಮಾಡಲಾಗಿತ್ತು. ಅದರೊಳಗೆ ಡ್ರೈ ಫ್ರೂಟ್ಸ್, ಚಿಪ್ಸ್ ಮತ್ತು ಚಾಕೊಲೇಟ್‍ಗಳನ್ನು ಸಂಗ್ರಹಿಸಲಾಗಿತ್ತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಗೋದಾಮಿನ ಎರಡೂ ಬದಿಯಲ್ಲಿ ಸಾಕಷ್ಟು ವಸತಿ ಫ್ಲಾಟ್‍ಗಳಿದ್ದು, ಬೆಂಕಿ ಹರಡುವ ಸಾಧ್ಯತೆ ಇರುವುದರಿಂದ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಅಲ್ಲಿನ ನಿವಾಸಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಿದ್ದಾರೆ.