ನವದೆಹಲಿ,ಡಿ.29- ಮುಂಬರುವ 2024ರ ಫೆಬ್ರವರಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿಯಾದ ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನು ಉದ್ಘಾಟಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ ಎಂದು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.
ಸ್ವಾಮಿ ಈಶ್ವರ ಚರಣ ದಾಸ್ ಮತ್ತು ಬ್ರಹ್ಮವಿಹಾರಿ ದಾಸ್ ನೇತೃತ್ವದ ಬಿಎಪಿಎಸ್ ಸಂಘಟನೆಯ ಪ್ರತಿನಿಧಿಗಳು ನವದೆಹಲಿಯಲ್ಲಿರುವ ಪ್ರಧಾನಿಗಳ ನಿವಾಸಕ್ಕೆ ಭೇಟಿ ಕೊಟ್ಟು, ಫೆಬ್ರವರಿ 14ರಂದು ಆಗಮಿಸಿ, ನೂತನ ನಿರ್ಮಾಣದ ದೇವಾಲಯವನ್ನು ಉದ್ಘಾಟನೆ ಮಾಡುವಂತೆ ಆಹ್ವಾನ ನೀಡಿದ್ದಾರೆ.
ಅರಬ್ ದೇಶದಲ್ಲಿ ಸ್ಥಾಪನೆಗೊಂಡಿರುವ ದೊಡ್ಡ ಹಿಂದೂ ದೇವಾಲಯವನ್ನು ಉದ್ಘಾಟಿಸುವ ಆಹ್ವಾನವನ್ನು ಪ್ರಧಾನಿಗಳು ದಯೆಯಿಂದ ಸ್ವೀಕರಿಸಿದ್ದಾರೆ. ಐತಿಹಾಸಿಕ ಮತ್ತು ಸಾಂಪ್ರದಾಯಿಕ ದೇವಾಲಯಕ್ಕೆ ತಮ್ಮ ಉತ್ಸಾಹದ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ಬಿಎಪಿಎಸ್ ಸಂಸ್ಥೆ ಹೇಳಿದೆ.
ಚಿತ್ರದುರ್ಗ : ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿ ಪಂಜರಗಳು ಪತ್ತೆ
ಸುಮಾರು ಒಂದು ಗಂಟೆಗಳ ಕಾಲ ಪ್ರಧಾನಿಯೊಂದಿಗೆ ಕುಳಿತು ಚರ್ಚಿಸಿದ ಬಿಎಪಿಎಸ್ ನಿಯೋಗವು, ಜಾಗತಿಕ ಸಾಮರಸ್ಯಕ್ಕಾಗಿ ಅಬುಧಾಬಿ ದೇವಾಲಯದ ಮಹತ್ವ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಆಧ್ಯಾತ್ಮಿಕ ನಾಯಕತ್ವಕ್ಕಾಗಿ ಮೋದಿಯವರ ದೃಷ್ಟಿಕೋನದ ಬಗ್ಗೆ ಸಂವಾದ ನಡೆಸಿತು ಎಂದು ತಿಳಿಸಿದೆ.
ಅರಳುತ್ತಿರುವ ಕಮಲದ ಹೂವನ್ನು ಹೋಲುವಂತೆ ದೇವಾಲಯದ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ ಎಂದ ಸಂಸ್ಥೆ, ಈ ದೇವಾಲಯವು ಯುನೈಟೆಡ್ ಅರಬ್ ಎಮಿರೇಟ್ಸ್‍ನ ಅತಿದೊಡ್ಡ ಹಿಂದೂ ದೇವಾಲಯವಾಗಿದೆ ಎಂದು ಹೇಳಿದೆ.