Friday, November 22, 2024
Homeರಾಜ್ಯ46 ಐಎಎಸ್ ಅಧಿಕಾರಿಗಳಿಗೆ ಬಡ್ತಿ

46 ಐಎಎಸ್ ಅಧಿಕಾರಿಗಳಿಗೆ ಬಡ್ತಿ

ಬೆಂಗಳೂರು,ಡಿ.31- ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸೇವೆಯಲ್ಲಿರುವ 46 ಮಂದಿ ಹಿರಿಯ ಹಾಗೂ ಕಿರಿಯ ಐಎಎಸ್ ಅಧಿಕಾರಿಗಳಿಗೆ ವಿವಿಧ ವೇತನ ಶ್ರೇಣಿಯ ಬಡ್ತಿ ನೀಡಲಾಗಿದ್ದು, ಬಹುತೇಕರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ. ಕೆಲವರಿಗೆ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಲಾಗಿದೆ.

ಪ್ರಧಾನಮಂತ್ರಿ ಕಚೇರಿಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಅರವಿಂದ್ ಶ್ರೀವಾಸ್ತವ್ ಅವರಿಗೆ ಬಡ್ತಿ ನೀಡಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್ ಅವರಿಗೆ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರಿಗೆ ಅಪರ ಮುಖ್ಯಕಾರ್ಯದರ್ಶಿ ಹುದ್ದೆಗೆ, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಎಂ.ಎಸ್.ಶೇಖರ್ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಜಲಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಸುಭೋಷ್ ಯಾದವ್ ಅವರಿಗೆ ಬಡ್ತಿ ನೀಡಿ ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ.

ಅಧ್ಯಯನದ ಪ್ರವಾಸದಲ್ಲಿರುವ ಖುಷ್ಟು ಜಿ.ಚೌದಿ, ರಣದೀಪ್ ಚೌದ್ರಿ ಅವರಿಗೆ, ಕೇಂದ್ರ ಸರ್ಕಾರದ ಬಾಹ್ಯಾಕಾಶ ಇಲಾಖೆಯ ನಿರ್ದೇಶಕರಾಗಿರುವ ದೀಪ್ತಿ ಆದಿತ್ಯ ಕಾನಡೆ ಅವರಿಗೆ 14ನೇ ವೇತನ ಬಡ್ತಿ ನೀಡಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಾರ್ಯದರ್ಶಿಯಾಗಿದ್ದ ರಾಜೇಂದ್ರ ಚೋಳನ್ ಅವರಿಗೆ ಕರ್ನಾಟಕ ರಾಜ್ಯ ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಉಜ್ವಲ್‍ಕುಮಾರ್ ಘೋಷ್, ರಾಜ್ಯ ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಎಂ.ದೀಪ ಅವರಿಗೂ ಬಡ್ತಿ ಭಾಗ್ಯ ದೊರೆತಿದೆ.

ಒಂದೇ ದಿನ ದೇಶದಲ್ಲಿ 841 ಮಂದಿಗೆ ಕೋವಿಡ್, ಮೂವರು ಬಲಿ

ಶಾಲಾ ಶಿಕ್ಷಣ ಇಲಾಖಾ ಆಯುಕ್ತರಾದ ಬಿ.ಬಿ.ಕಾವೇರಿ, ಕರ್ನಾಟಕ ಒತ್ತುವರಿ ತೆರವು ಪ್ರಾಕಾರದ ಮುಖ್ಯ ಅಧಿಕಾರಿ ಸುಷ್ಮಾ ಗೋಡ್ಬೋಲೆ, ಸಣ್ಣ ಕೈಗಾರಿಕೆಗಳ ವ್ಯವಸ್ಥಾಪಕ ನಿರ್ದೇಶಕ ಟಿ.ಎಚ್.ಎಂ.ಕುಮಾರ್, ಮಸೂರಿಯ ಎಲ್‍ಬಿಎಸ್‍ಎನ್‍ಎ ಗೆ ಉಪ ನಿರ್ದೇಶಕರಾಗಿರುವ ಅಭಿರಾಂ ಜಿ.ಶಂಕರ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿಂಧು ಬಿ.ರೂಪೇಶ್, ಡಿಪಿಎಆರ್ ನ ಚುನಾವಣಾ ವಿಭಾಗದ ಹೆಚ್ಚುವರಿ ಚುನಾವಣಾಧಿಕಾರಿ ಕುಮಾರ್ ರಾವ್ ಎಂ., ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರಾದ ಡಾ.ರಾಗಪ್ರಿಯ ಆರ್. ಅವರಿಗೆ ಬಡ್ತಿ ನೀಡಿ ಅದೇ ಹುದ್ದೆಗಳಲ್ಲಿ ಮುಂದುವರೆಸಲಾಗಿದೆ.

ಕೇಂದ್ರ ಹಣಕಾಸು ಮತ್ತು ಕಾರ್ಪರೇಟ್ ಅಫೇರ್ಸ್ ಸಚಿವರ ಆಪ್ತ ಕಾರ್ಯದರ್ಶಿ ಅನಿರುದ್ಧ್ ಶರವಣ, ಕಂದಾಯ ಇಲಾಖೆಯ ಭೂಸ್ವಾೀಧಿನ, ಸಾಮಾಜಿಕ ಬದ್ಧತೆ ವಿಭಾಗದ ಆಯುಕ್ತರಾದ ಪೊಮ್ಮುಲ ಸುನಿಲ್‍ಕುಮಾರ್, ಮೂಲ ಸೌಕರ್ಯ ಅಭಿವೃದ್ಧಿ ಜಂಟಿ ಕಾರ್ಯದರ್ಶಿ ಎಪೀಸ್ಬಾ ರಾಣಿ ಕೋರ್ಲಾಪತಿ, ಕರ್ನಾಟಕ ನೀರು ಸರಬರಾಜು ಅಥವಾ ಒಳಚರಂಡಿ ವ್ಯವಸ್ಥೆಯ ನಿರ್ದೇಶಕರಾದ ಶರತ್ ಬಿ., ಜವಳಿ ಇಲಾಖೆಯ ಆಯುಕ್ತರಾದ ಸಿ.ಎನ್.ಶ್ರೀಧರ ಅವರುಗಳಿಗೂ ಬಡ್ತಿ ನೀಡಲಾಗಿದೆ.

ಧಾರವಾಡ ಜಿಲ್ಲಾ ಪಂಚಾಯತ್‍ನ ಸಿಇಒ ಟಿ.ಕೆ.ಸ್ವರೂಪ, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಕಲ್ಬುರ್ಗಿ ಜಿಲ್ಲೆಯ ಜಿಲ್ಲಾಧಿಕಾರಿ ಜಿ.ಫೌಜಿಯಾ ತರುನ್ಮಾ, ವಿಜಯಪುರ ಜಿಲ್ಲಾಧಿಕಾರಿ ಬೋಬಾಬಲ್ ಟಿ. ಅವರಿಗೆ 12 ನೇ ವೇತನ ಶ್ರೇಣಿಯ ಬಡ್ತಿ ನೀಡಿ ಹಾಲಿ ಹುದ್ದೆಯಲ್ಲೇ ಮುಂದುವರೆಸಲಾಗಿದೆ.

ಮಾರ್ಗ ಮಧ್ಯೆ ಆಂಬ್ಯುಲೆನ್ಸ್‌ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ನಗರ ಮೂಲ ಸೌಕರ್ಯ ಅಭಿವೃದ್ಧಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಲಕ್ಷ್ಮೀಪತಿ ರೆಡ್ಡಿ, ಹಟ್ಟಿ ಚಿನ್ನದ ಗಣಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಬಿ.ಶೆಟ್ಟಣ್ಣನವರಿಗೆ ಬಡ್ತಿ ನೀಡುವ ಜೊತೆಗೆ ಯೋಜನಾ ನಿಗಾವಣೆ, ಸಾಂಕಿಕ ಇಲಾಖೆ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಇದೇ ರೀತಿ 46 ಮಂದಿ ಅಧಿಕಾರಿಗಳಿಗೆ ರಾಜ್ಯಸರ್ಕಾರ 17 ವೇತನ ಶ್ರೇಣಿಯಿಂದ 11 ವೇತನ ಶ್ರೇಣಿಯವರೆಗೂ ವಿವಿಧ ಹಂತದ ಬಡ್ತಿಗಳನ್ನು ನೀಡಿದೆ. ಆಯುಷ್ ಇಲಾಖೆಯ ಆಯುಕ್ತರಾಗಿದ್ದ ಕೆ.ಲೀಲಾವತಿ ಅವರನ್ನು ಕರ್ನಾಟಕ ಮೇಲ್ಮನವಿ ನ್ಯಾಯಾಕರಣದ ಸದಸ್ಯರನ್ನಾಗಿಯೂ ವರ್ಗಾವಣೆ ಮಾಡಲಾಗಿದೆ.

RELATED ARTICLES

Latest News