Saturday, November 23, 2024
Homeರಾಜ್ಯದ್ವೇಷ, ಅಸೂಯೆ, ಅಸಹನೆಯ ಗೋಡೆ ನಿರ್ಮಿಸಲಾಗುತ್ತದೆ : ಶಿವರಾಜ್ ಪಾಟೀಲ್

ದ್ವೇಷ, ಅಸೂಯೆ, ಅಸಹನೆಯ ಗೋಡೆ ನಿರ್ಮಿಸಲಾಗುತ್ತದೆ : ಶಿವರಾಜ್ ಪಾಟೀಲ್

ಬೆಂಗಳೂರು,ಡಿ.31- ಸಮಾಜದಲ್ಲಿ ದ್ವೇಷ, ಅಸೂಯೆ, ಅಸಹನೆಯ ಗೋಡೆ ನಿರ್ಮಿಸಲಾಗುತ್ತದೆ. ಅದರ ಬದಲಾಗಿ ಪ್ರೀತಿಯ ಸೇತುವೆ ಕಟ್ಟಬೇಕಿದೆ ಎಂದು ಸುಪ್ರೀಂಕೋರ್ಟ್‍ನ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಕರೆ ನೀಡಿದರು.

ನಗರದ ಪ್ರೆಸ್‍ಕ್ಲಬ್‍ನ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಾರ್ಷಿಕ ಹಾಗೂ ವಿಶೇಷ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ದೇಶದ ಸಂವಿಧಾನ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾಗಿದೆ. 2 ವರ್ಷ, 11 ತಿಂಗಳು, 17 ದಿನ ಅಧ್ಯಯನ ಮಾಡಿ ಸಂವಿಧಾನ ರಚಿಸಲಾಗಿದೆ. ಆ ವೇಳೆ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹಿಂದಿನ ಹೋರಾಟ ಮತ್ತು ಐತಿಹಾಸಿಕ ಪರಂಪರೆಯನ್ನು ಗುರುತಿಸಲಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗಿದೆ. ನಾಲ್ಕನೇ ಅಂಗವಾಗಿ ಪತ್ರಿಕಾ ರಂಗವನ್ನು ಉಲ್ಲೇಖಿಸಿದೇ ಇದ್ದರೂ ಸಮಾಜದ ಕಾವಲಿಗೆ ಮಾದ್ಯಮದ ಪಾತ್ರ ಮಹತ್ವದ್ದಾಗಿದೆ ಎಂದರು.

ಆಸ್ಕರ್ ಪ್ರಶಸ್ತಿ ಗೆದ್ದ ನಾಟು ನಾಟು ಸಾಂಗ್ ಮತ್ತು ಸಾಕ್ಷ್ಯಚಿತ್ರಕ್ಕೆ ಮೋದಿ ಮೆಚ್ಚುಗೆ

ರಾಷ್ಟ್ರಪಿತ ಮಹಾತ್ಮಗಾಂಧಿಯವರು ಸಮಾಜದ ಕಟ್ಟಕಡೆಯ ವ್ಯಕ್ತಿಯ ಶ್ರೇಯಸ್ಸನ್ನು ಸಂವಿಧಾನ ಬಯಸಬೇಕು ಎಂದು ಹೇಳಿದರು. ಸಂವಿಧಾನ ಶ್ರೇಷ್ಠವಾಗಿದೆ. ಅದೇ ರೀತಿ ಅದನ್ನು ಜಾರಿಗೆ ತರುವವರಲ್ಲೂ ಬದ್ಧತೆ ಮತ್ತು ಸಾಮಾಜಿಕ ಕಳಕಳಿ ಇದ್ದರೆ ಮಾತ್ರ ಜನರಿಗೆ ಒಳ್ಳೆಯದಾಗುತ್ತದೆ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಸಂವಿಧಾನದ ಆಶಯಗಳನ್ನು ಬೋಧಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ ಎಂದರು.

ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು, ಆಡಳಿತ ವ್ಯವಸ್ಥೆ, ಸಮರ್ಪಕ ಅನುಷ್ಠಾನಗೊಳ್ಳಬೇಕಾದರೆ ಜವಾಬ್ದಾರಿಯುತ ನಾಗರಿಕ ಸಮಾಜ, ಪ್ರಾಮಾಣಿಕ ಅಧಿಕಾರದ ವ್ಯವಸ್ಥೆ, ಜನಪರವಾದ ಸ್ವಯಂ ಸೇವಾ ಸಂಸ್ಥೆ, ಕ್ರಿಯಾಶೀಲ ನ್ಯಾಯಾಂಗ ಮತ್ತು ಅರ್ಥಪೂರ್ಣ ಮಾದ್ಯಮಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ವಿಕ್ರಂ ಸಿಂಹ ಬಂಧನದ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ

ಯಾವುದೇ ವಿಚಾರಗಳಾದರೂ ಅದರ ವಿಮರ್ಶೆ ಅಗತ್ಯ. ಜನರು ದ್ವನಿಯೆತ್ತಬೇಕು. ಸರ್ಕಾರವೂ ಅದಕ್ಕೆ ಕಿವಿಗೊಡಬೇಕು. ಜನ ಮೂಕರಾದರೆ, ಸರ್ಕಾರ ಕಿವುಡಾದರೆ ಪ್ರಜಾಪ್ರಭುತ್ವಕ್ಕೆ ಅಪಾಯವಾಗಲಿದೆ ಎಂದರು. ಸಮಾಜಕ್ಕೆ ನಮ್ಮ ಕೊಡುಗೆಯೇನು ಎಂಬ ಆತ್ಮವಿಮರ್ಶೆ ಅಗತ್ಯವಿದೆ. ಮಾದ್ಯಮ ಜವಾಬ್ದಾರಿ ಅತ್ಯಂತ ಮಹತ್ವದ್ದು. ಎಲ್ಲಾ ಕ್ಷೇತ್ರಗಳ ಮೇಲೂ ಮಾದ್ಯಮದ ನಿಗಾವಣೆ ಇರುತ್ತದೆ. ವರದಿಗಳಲ್ಲಿ ವಸ್ತುನಿಷ್ಠತೆ ಅಗತ್ಯವಿದೆ. ಪಕ್ಷಪಾತವಿರಬಾರದು ಎಂದು ಸಲಹೆ ನೀಡಿದರು.

RELATED ARTICLES

Latest News