Friday, May 3, 2024
Homeಬೆಂಗಳೂರುಮಾರ್ಚ್‍ನಲ್ಲಿ ಬಿಬಿಎಂಪಿ ಬಜೆಟ್

ಮಾರ್ಚ್‍ನಲ್ಲಿ ಬಿಬಿಎಂಪಿ ಬಜೆಟ್

ಬೆಂಗಳೂರು,ಜ.3- ಮಾರ್ಚ್ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್ ಮಂಡನೆಯಾಗುವ ಸಾಧ್ಯತೆಗಳಿವೆ.
ಪ್ರಸಕ್ತ ಸಾಲಿನ ಬಿಬಿಎಂಪಿ ಬಜೆಟ್ ಗೆ ಸಿದ್ದತೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವುದರಿಂದ ಪಾಲಿಕೆ ಅಧಿಕಾರಿಗಳು ಬಜೆಟ್ ಮಂಡನೆ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದಾರೆ. ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮಾರ್ಚ್ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್ ಮಂಡನೆಗೆ ತಯಾರಿ ನಡೆಲಾಗುತ್ತಿದೆ.

ಒಂದು ವೇಳೆ ಏಪ್ರಿಲ್ ಇಲ್ಲವೇ ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾದರೆ ಚುನಾವಣಾ ಕಾರ್ಯಕ್ಕೆ ಪಾಲಿಕೆ ಸಿಬ್ಬಂದಿಗಳನ್ನು ನಿಯೋಜಿಸಬೇಕಿರುವುದರಿಂದ ಚುನಾವಣೆಗೆ ಮುನ್ನ ಬಿಬಿಎಂಪಿ ಬಜೆಟ್ ಮಂಡನೆ ಮಾಡಲು ಕಸರತ್ತು ನಡೆಸಲಾಗುತ್ತಿದೆ. ಬಜೆಟ್ ಮಂಡನೆಗಾಗಿ ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಅಯುಕ್ತರ ನೇತೃತ್ವದಲ್ಲಿ ನಾಲ್ಕು ತಂಡಗಳ ರಚನೆ ಮಾಡಲಾಗಿದೆ. 2024-25 ನೇ ಸಾಲಿನಲ್ಲಿ ಕೈಗೊಳ್ಳುವ ಕಾಮಗಾರಿ ಯೋಜನೆ ಪಟ್ಟಿ ಹಾಗೂ ಅಂದಾಜು ವೆಚ್ಚದ ವಿವರ ನೀಡುವಂತೆ ಅದೇಶ ನೀಡಲಾಗಿದೆ.

ಪಿಎಂ ವಿಶ್ವಕರ್ಯ ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಕಾಶ್ಮೀರ

ಇನ್ನೂ 2023-24 ನೇ ಸಾಲಿನಲ್ಲಿ ಸರ್ಕಾರದ ಅನುದಾನದಲ್ಲಿ ಕೈಗೊಂಡ ಸಾಧನೆ ಪಟ್ಟಿ ಸಲ್ಲಿಕೆಗೂ ಸೂಚನೆ ನೀಡಲಾಗಿದ್ದು, ಎರಡು ದಿನಗಳಲ್ಲಿ ಎಲ್ಲಾ ವಲಯಗಳ ಮಾಹಿತಿ ಸಂಗ್ರಹಿಸಿ ಅನ್ ಲೈನ್ ಮುಖಾಂತರ ಸಲ್ಲಿಸುವಂತೆ ಅಧಿಕಾರಿಗಳಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬಿಬಿಎಂಪಿಗೆ ಚುನಾವಣೆ ನಡೆದು ನಾಲ್ಕು ವರ್ಷಗಳು ಮುಗಿಯುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳೇ ನಾಲ್ಕನೇ ಬಾರಿಗೆ ಬಿಬಿಎಂಪಿ ಬಜೆಟ್ ಮಂಡನೆ ಮಾಡುತ್ತಿರುವುದು ವಿಶೇಷವಾಗಿದೆ.

ಮೂರು ವರ್ಷಗಳಿಂದ ಪಾಲಿಕೆ ಜನ ಪ್ರತಿನಿಧಿ ಇಲ್ಲದ ಕಾರಣ ಬಿಬಿಎಂಪಿಯ ಹಣಕಾಸು ವಿಭಾಗದ ಮುಖ್ಯಸ್ಥರು ಕಳೆದ ಮೂರು ವರ್ಷಗಳಿಂದ ಬಜೆಟ್ ಮಂಡನೆ ಮಾಡಿಕೊಂಡು ಬರುತ್ತಿದ್ದಾರೆ.

RELATED ARTICLES

Latest News