ಲಕ್ನೋ,ಜ.3- ಅಯೋಧ್ಯೆಯ ರಾಮಮಂದಿರದ ಭದ್ರತೆಯ ಉಸ್ತುವಾರಿಯನ್ನು ಉತ್ತರಪ್ರದೇಶ ಪೊಲೀಸರಿಗೆ ವಹಿಸಲಾಗಿದ್ದು, ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ನಂತರವೂ ದೇವಾಲಯದ ಆವರಣದಲ್ಲಿ ವಿಶೇಷ ಪೊಲೀಸ್ ಕಾರ್ಯಪಡೆಯನ್ನು ಸಂಪೂರ್ಣವಾಗಿ ನಿಯೋಜಿಸಲಾಗುತ್ತಿದೆ.
ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೂ ಮುನ್ನ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಸಂಕೀರ್ಣದ ಭದ್ರತೆಯ ಜವಾಬ್ದಾರಿಯನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಸಂಪೂರ್ಣವಾಗಿ ವಹಿಸಿಕೊಳ್ಳಲಿದೆ.
ಉತ್ತರಪ್ರದೇಶ ಪೊಲೀಸರ ಈ ವಿಶೇಷ ಕಾರ್ಯಪಡೆಯು ಸಿಆರ್‍ಪಿಎಫ್‍ನಿಂದ ಈ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಇಲ್ಲಿಯವರೆಗೆ ಸುಪ್ರೀಂಕೋರ್ಟ್‍ನ ಸೂಚನೆಗಳ ಮೇರೆಗೆ ಪ್ರದೇಶವನ್ನು ರಕ್ಷಿಸಲಾಗುತ್ತಿತ್ತು.
1992ರಲ್ಲಿ ಬಾಬರಿ ಕಟ್ಟಡವನ್ನು ಧ್ವಂಸಗೊಳಿಸಿದ ನಂತರ ಸುಪ್ರೀಂಕೋರ್ಟ್ ಆದೇಶದಂತೆ ರಾಮ ಜನ್ಮಭೂಮಿ ಸ್ಥಳದಲ್ಲಿ ಸಿಆರ್‍ಎಫ್‍ನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಜನವರಿ 22 ರಂದು ನಡೆಯಲಿದೆ. ರಾಮ್‍ಲಲ್ಲಾನ ಪವಿತ್ರೀಕರಣದ ನಂತರ, ಯುಪಿ ವಿಶೇಷ ಭದ್ರತಾ ಪಡೆ (ಎಸ್‍ಎಸ್‍ಎಫ್) ದೇವಾಲಯದಲ್ಲಿ ಸಮಗ್ರ ಭದ್ರತೆಯನ್ನು ಒದಗಿಸಲು ಪ್ರಾರಂಭಿಸುತ್ತದೆ. ವಾಸ್ತವವಾಗಿ ರಾಮಜನ್ಮಭೂಮಿ ಸ್ಥಳದಲ್ಲಿ ಸಿಆರ್‍ಪಿಎಫ್ ಇಲ್ಲಿಯವರೆಗೂ ಭದ್ರತೆಯನ್ನು ಒದಗಿಸುತ್ತಿದೆ. ರಾಮ್‍ಲಲ್ಲಾ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಪಿಎಸಿ ಮತ್ತು ಎಸ್‍ಎಸ್‍ಎಫ್ ಜೊತೆಗೆ ದೇವಾಲಯದ ಸಂಕೀರ್ಣದ ಭದ್ರತೆಯಲ್ಲಿ ನಿಯೋಜನೆಗೊಳ್ಳುವ ನಿರೀಕ್ಷೆಯಿದೆ.
ಹಿಂದೂ ಕಾರ್ಯಕರ್ತರ ಬಂಧನ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಆದಾಗ್ಯೂ, ಯುಪಿ ವಿಶೇಷ ಕಾರ್ಯಪಡೆಯು ಎಲ್ಲ ರೀತಿಯಲ್ಲೂ ತರಬೇತಿ ಪಡೆದಿದೆ ಮತ್ತು ಹೊಸದಾಗಿ ನಿರ್ಮಿಸಲಾದ ದೇವಾಲಯದ ಸಂಕೀರ್ಣದ ಭದ್ರತೆ ಸೇರಿದಂತೆ ಎಲ್ಲಾ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸಲು ಸಾಕಷ್ಟು ತರಬೇತಿ ಪಡೆದು ಸಜ್ಜುಗೊಂಡಿದೆ.
ಜುಲೈ 2005ರಲ್ಲಿ ಸಿಆರ್‍ಪಿಎಫ್‍ನ ಐವರು ಭಯೋತ್ಪಾದಕರನ್ನು ಕೊಲ್ಲುವ ಮೂಲಕ ರಾಮ ಜನ್ಮಭೂಮಿ ಜಾಗದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದೆ ಎಂಬುವುದು ಉಲ್ಲೇಖನೀಯ.
2019ರಲ್ಲಿ ಸುಪ್ರೀಂಕೋರ್ಟ್ ಒಂದು ಶತಮಾನಕ್ಕೂ ಹೆಚ್ಚು ಹಳೆಯ ರಾಮಮಂದಿರ-ಬಾಬರಿ ಮಸೀದಿ ವಿವಾದವನ್ನು ಇತ್ಯರ್ಥಪಡಿಸುವ ಐತಿಹಾಸಿಕ ತೀರ್ಪು ನೀಡಿತ್ತು. ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವನ್ನು ಸುಪ್ರೀಂಕೋರ್ಟ್ ಬೆಂಬಲಿಸಿತಲ್ಲದೆ ವಿವಾದಿತ ಸ್ಥಳದಲ್ಲೇ ರಾಮಮಂದಿರ ನಿರ್ಮಿಸಲಾಗುವುದು, ಮಸೀದಿ ನಿರ್ಮಾಣಕ್ಕೆ ಸರ್ಕಾರದಿಂದ ಐದು ಎಕರೆ ಪರ್ಯಾಯ ಜಾಗವನ್ನು ನೀಡಲಾಗುವುದು ಎಂದು ತೀರ್ಪು ನೀಡಿತ್ತು.