ಅಲಹಾಬಾದ್(ಗುಜರಾತ್),ಸೆ.26- ಜೀವನಾಂಶಕ್ಕಾಗಿ 75ರಿಂದ 80 ವರ್ಷ ವಯಸ್ಸಿನ ದಂಪತಿ, ಸುದೀರ್ಘ ದಾಂಪತ್ಯದ ನಂತರ ವಿಚ್ಛೇಧನ ಕೋರಿ ಕಾನೂನು ಹೋರಾಟ ನಡೆಸುತ್ತಿರುವ ಅಪರೂಪದ ಘಟನೆಗೆ ಅಲಹಾಬಾದ್ ಹೈಕೋರ್ಟ್ ಸಾಕ್ಷಿ ಆಗಿದೆ.
ಕೆಲ ದಿನಗಳ ಹಿಂದೆಯಷ್ಟೇ ರಾಜ್ಯದ ಪ್ರಕರಣವೊಂದರಲ್ಲಿ ವಿಚ್ಛೇಧನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗೆ ಸ್ವಾಮೀಜಿ ಬಳಿ ಹೋಗಿ ಸಮಾಲೋಚಿಸಿ ಎಂದು ನ್ಯಾಯಾಧೀಶರು ಸಲಹೆ ನೀಡಿದ ವಿಡಿಯೋ ವೈರಲ್ ಆಗಿತ್ತು.
ಅಂತಹದ್ದೇ ಘಟನೆ ಈಗ ಗುಜರಾತ್‌ನಲ್ಲಿ ನಡೆದಿದೆ. 75 ವರ್ಷ ದಾಟಿದ ದಂಪತಿ ಅಲ್ಲದೆ ದೀರ್ಘ ಕಾಲ ದಾಂಪತ್ಯ ಅನುಭವಿಸಿದವರಲ್ಲಿ ವೈಮನಸ್ಸು ಉಂಟಾಗಿರುವುದು, ಅದಕ್ಕಾಗಿ ಜೀವನಾಂಶ ಕೋರುತ್ತಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿ, ಕಲಿಯುಗ ಬಂದಂತೆ ತೋರುತ್ತಿದೆ ಎಂದು ವಿಷಾಧಿಸಿದ್ದಾರೆ.
ಪತ್ನಿ ಪರವಾಗಿ ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶದ ವಿರುದ್ಧ ಪತಿ ಅಲಿಘರ್‌ನ ಮುನೇಶ್ ಕುಮಾರ್ ಗುಪ್ತಾ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೌರಭ್ ಶ್ಯಾಮ್ ಶಂಶೇರಿ, ನಿಮ ಕಾನೂನು ಹೋರಾಟದ ಕಳವಳಕಾರಿ ವಿಷಯ ಎಂದು ದಂಪತಿಗೆ ಸಲಹೆ ನೀಡಲು ಪ್ರಯತ್ನಿಸಿದರು.
ಪತಿಯಿಂದ ವೃದ್ಧೆ ಪತ್ನಿ ಜೀವನಾಂಶ ಕೋರಿದ್ದು, ಕೌಟುಂಬಿಕ ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿತ್ತು. ಪತಿ ಮುನೇಶ್‌ಕುಮಾರ್ ಆದೇಶವನ್ನು ಪ್ರಶ್ನಿಸಿದ್ದು, ಪತ್ನಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಮುಂದಿನ ವಿಚಾರಣೆಯ ದಿನಾಂಕದೊಳಗೆ ಅವರು ಒಪ್ಪಂದಕ್ಕೆ ಬರುತ್ತಾರೆ ಎಂದು ಭಾವಿಸುವುದಾಗಿ ಹೈಕೋರ್ಟ್ ಹೇಳಿದೆ.