Friday, September 5, 2025
Homeಅಂತಾರಾಷ್ಟ್ರೀಯ | Internationalಜೊಹ್ರಾನ್‌ ಮಮ್ದಾನಿ ನ್ಯೂಯಾರ್ಕ್‌ನ ಮುಂದಿನ ಮೇಯರ್‌..?

ಜೊಹ್ರಾನ್‌ ಮಮ್ದಾನಿ ನ್ಯೂಯಾರ್ಕ್‌ನ ಮುಂದಿನ ಮೇಯರ್‌..?

'A little bit of lead': Donald Trump says Zohran Mamdani likely to be next mayor

ವಾಷಿಂಗ್ಟನ್‌,ಸೆ.5- ಮೂವರು ಪ್ರಮುಖ ಅಭ್ಯರ್ಥಿಗಳಲ್ಲಿ ಇಬ್ಬರು ಹಿಂದೆ ಸರಿದಲ್ಲಿ ಡೆಮಾಕ್ರಾಟ್‌ ಜೊಹ್ರಾನ್‌ ಮಮ್ದಾನಿ ಅವರು ನ್ಯೂಯಾರ್ಕ್‌ ನಗರದ ಮುಂದಿನ ಮೇಯರ್‌ ಆಗುವ ಸಾಧ್ಯತೆ ಇದೆ ಎಂದು ಭಾವಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರು ತಿಳಿಸಿದ್ದಾರೆ. ಆದರೆ ಯಾವ ಅಭ್ಯರ್ಥಿಗಳು ಹಿಂದೆ ಸರಿಯಬೇಕೆಂದು ತಾವು ನಿರ್ಧರಿಸುತ್ತಿರುವುದನ್ನು ರಿಪಬ್ಲಿಕನ್‌ ನಾಯಕ ಟ್ರಂಪ್‌ ತಿಳಿಸಲಿಲ್ಲ.

ಇಬ್ಬರು ಪ್ರತಿಸ್ಪರ್ಧಿಗಳು ಮಾತ್ರ ಇರದಿದ್ದರೆ ನೀವು ಗೆಲ್ಲಬಹುದು ಎಂದು ನನಗನ್ನಿಸುವುದಿಲ್ಲ. ಆದರೆ ಮಮ್ದಾನಿ ಕೊಂಚ ಮುನ್ನಡೆಯಲ್ಲಿದ್ದಾರೆ ಎಂದು ಟ್ರಂಪ್‌ ಹೇಳಿದರು.ಏನಾಗಲಿದೆ ಎಂದು ನನಗೆ ತಿಳಿದಿಲ್ಲ ಎಂದು ಅವರು ನುಡಿದರು.ತಂತ್ರಜ್ಞಾನ ಪ್ರತಿನಿಧಿಗಳಿಗಾಗಿ ಶ್ವೇತಭವನದಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಟ್ರಂಪ್‌ ಈ ಬಗ್ಗೆ ಮಾತನಾಡಿದರು.

33 ವರ್ಷ ವಯಸ್ಸಿನ ಡೆಮಾಕ್ರೆಟಿಕ್‌ ಸೋಷಿಯಲಿಸ್ಟ್‌ ಮಮ್ದಾನಿ ಅವರು ಜೂನ್‌ನಲ್ಲಿ ಡೆಮಾಕ್ರೆಟಿಕ್‌ ಪೂರ್ವಭಾವಿ ಚುನಾವಣೆಯಲ್ಲಿ ಮಾಜಿ ಗವರ್ನರ್‌ ಆಂಡ್ರೂ ಕುವೊವೋ ಅವರನ್ನು ಭಾರಿ ಅಂತರದಿಂದ ಮಣಿಸಿದ್ದು ಮೇಯರ್‌ ಹುದ್ದೆಗೆ ಫೇವರಿಟ್‌ ಅಭ್ಯರ್ಥಿಯಾಗಿದ್ದಾರೆ.

ಆದರೆ ಕುವೊವೋ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಹಾಲಿ ಮೇಯರ್‌ ಎರಿಕ್‌ ಆಡಮ್ಸೌ ಅವರೂ ಸ್ಪರ್ಧಿಸಿದ್ದಾರೆ. ಈ ಮೂವರು ಡೆಮಾಕ್ರಾಟ್‌ಗಳ ಜೊತೆಗೆ ಗಾರ್ಡಿಯನ್‌ ಏಂಜೆಲ್‌್ಸ ಕ್ರೈಮ್‌ ಪೆಟ್ರೋಲ್‌ ಗ್ರೂಪ್‌ನ ಸಂಸ್ಥಾಪಕರಾದ ರಿಪಬ್ಲಿಕನ್‌ ಕರ್ಟಿಸ್‌‍ ಸ್ಲಿವಾ ಅವರೂ ಉಮೇದುವಾರರಾಗಿದ್ದಾರೆ.

RELATED ARTICLES

Latest News