ಬೆಂಗಳೂರು,ಅ.14-ನಗರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ತೆರಳಿದ್ದ ಗಣತಿದಾರರಿಗೆ ಸವಾಲಾಗಿದ್ದು ಸಾಕು ನಾಯಿಯೊಂದು ದಾಳಿನಡೆಸಿರುವ ಘಟನೆ ಮಹದೇವಪುರದಲ್ಲಿ ನಡೆದಿದೆ.
ಹಲವು ವಿಘ್ನಗಳೊಂದಿಗೆ ಪ್ರಾರಂಭವಾದ ಸಮೀಕ್ಷೆ ಕಾರ್ಯ ಗಣತಿದಾರರಿಗೆ ಪ್ರತಿದಿನವು ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಗಣತಿಗೆ ತೆರಳಬೇಕಾದರೆ ಜೀವ ಕೈಯಲ್ಲಿಡಿದುಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾವ ರಸ್ತೆಗೆ ಹೋದರೂ ಸಹ ಹಿಂಡು ಹಿಂಡು ಬೀದಿ ನಾಯಿಗಳು ಜೊತೆಗೆ ಸಾಕು ನಾಯಿಗಳ ಕಾಟವು ಸಹ ಹೆಚ್ಚಾಗಿದೆ. ಇದರಿಂದ ಗಣತಿದಾರರು ಭಯದಿಂದಲೇ ಕಾರ್ಯನಿರ್ವಹಿಸುವಂತಾಗಿದೆ.
ಇಂದು ಬೆಳಗ್ಗೆ ಮಹದೇವಪುರದಲ್ಲಿ ಗಣತಿಕಾರ್ಯಕ್ಕೆ ತೆರಳಿದ್ದ ನಾಗರಾಜ್ ಎಂಬುವವರ ಮೇಲೆ ಬೀದಿ ನಾಯಿ ದಾಳಿ ಮಾಡಿ ಎಡಭುಜಕ್ಕೆ ಬಲವಾಗಿ ಕಚ್ಚಿ ಗಾಯಗೊಳಿಸಿದೆ.
ಕೂಡಲೇ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೊಂದು ಕಡೆ ಮಹಿಳಾ ಗಣತಿದಾರರ ಮೇಲೆ ನಾಯಿ ದಾಳಿ ಮಾಡಿ ಮಾಂಸ ಕಿತ್ತು ಬರುವಂತೆ ಬಲವಾಗಿ ಕಚ್ಚಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ಇಂದು ಬೆಳಗ್ಗೆ ನಡೆದಿದೆ. ಒಟ್ಟಿನಲ್ಲಿ ನಗರದಲ್ಲಿ ಗಣತಿದಾರರಿಗೆ ಸಮೀಕ್ಷೆ ನಡೆಸುವುದೇ ಒಂದು ಸವಾಲಾಗಿದೆ.