Sunday, July 20, 2025
Homeಜಿಲ್ಲಾ ಸುದ್ದಿಗಳು | District Newsಚಿತ್ರದುರ್ಗ | Chitradurgaಮದುವೆಯಾಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

ಮದುವೆಯಾಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

A young man commits suicide after not getting married

ಚಿತ್ರದುರ್ಗ,ಜು.20– ಮದುವೆ ಯಾಲಿಲ್ಲ ಎಂದು ನೊಂದ ಗೃಹ ರಕ್ಷಕ ದಳದ ಸಿಬ್ಬಂದಿ ನೇಣು ಹಾಕಿಕೊಂಡು ಆತಹತ್ಯೆಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲುರು ತಾಲೂಕಿನ ಜೆಬಿ ಹಳ್ಳಿಯಲ್ಲಿ ನಡೆದಿದೆ.

ತಿರುಮಲ (31) ಮೃತ ಹೋಂ ಗಾರ್ಡ್‌. ತಿರುಮಲ ರಾಂಪುರ ಪೊಲೀಸ್‌‍ ಠಾಣೆಯಲ್ಲಿ ಹೋಂ ಗಾರ್ಡ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಅವರು ತಮ ಮದುವೆ ಬಗ್ಗೆ ತಲೆಕೆಡಿಸಿಕೊಂಡಿದ್ದರು.
ಹಲವು ವರ್ಷಗಳಿಂದ ಮದುವೆ ಮಾಡಿಕೊಳ್ಳಲು ಹೆಣ್ಣು ಹುಡುಕುತ್ತಿದ್ದರು ಎಂದು ತಿಳಿದುಬಂದಿದೆ.

ಇತ್ತೀಚಿಗೆ ಮೂರು ಕಡೆ ಹೆಣ್ಣು ನೋಡಲು ತೆರಳಿದ್ದು, ಹೆಣ್ಣಿನ ಕಡೆಯವರಿಂದ ತಿರಸ್ಕಾರಗೊಂಡ ಪರಿಣಾಮ ಹೆಚ್ಚು ಘಾಸಿಯಾಗಿತ್ತು.ವಯಸ್ಸಾಗುತ್ತಿದೆ ಮದುವೆ ಕಷ್ಟ ಎಂದು ಮನನೊಂದು, ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News