Thursday, December 26, 2024
Homeರಾಜ್ಯಪುಷ್ಪಾ-2 ಸಿನಿಮಾ ನೋಡಲು ತೆರಳುತ್ತಿದ್ದ ಯುವಕ ರೈಲಿಗೆ ಸಿಲುಕಿ ದುರ್ಮರಣ..!

ಪುಷ್ಪಾ-2 ಸಿನಿಮಾ ನೋಡಲು ತೆರಳುತ್ತಿದ್ದ ಯುವಕ ರೈಲಿಗೆ ಸಿಲುಕಿ ದುರ್ಮರಣ..!

A young man who was going to watch the movie Pushpa-2 was hit by a train and died..!

ದೊಡ್ಡಬಳ್ಳಾಪುರ, ಡಿ.5– ಇಂದು ಬಿಡುಗಡೆಯಾದ ಪುಷ್ಪ 2 ಸಿನಿಮಾ ನೋಡಲು ತೆರಳುತ್ತಿದ್ದ ಯುವಕ ರೈಲು ಡಿಕ್ಕಿಯಾಗಿ ಸಾವನಪ್ಪಿರುವ ಘಟನೆ ಇಂದು ಬೆಳಗ್ಗೆ ನಗರದ ಹೊರವಲಯದಲ್ಲಿರುವ ಬಾಶೆಟ್ಟಿಹಳ್ಳಿ ರೈಲ್ವೇ ಮೇಲ್‌ ಸೇತುವೆ ಸಮೀಪ ಸಂಭವಿಸಿದೆ.

ಮೃತ ಯುವಕನನ್ನು ಆಂಧ್ರಪ್ರದೇಶದ ಪಾಲಕೊಂಡ ನಿವಾಸಿ ಪ್ರವೀಣ್‌ (19) ಎಂದು ಗುರುತಿಸಲಾಗಿದೆ.ಪ್ರವೀಣ್‌ ಬ್ಯಾಂಕ್‌ ಸರ್ಕಲ್‌ ಬಳಿಯ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಇಂದು ಬಿಡುಗಡೆಯಾದ ಪುಷ್ಪಾ 2 ಸಿನಿಮಾ ನೋಡಲು ಬೆಳಗ್ಗೆ ಗೆಳೆಯರೊಂದಿಗೆ ಮನೆಯಿಂದ ಹೊರಟು ರೈಲ್ವೆ ಹಳಿ ದಾಟುವ ವೇಳೆ ಏಕಾಏಕಿ ಬಂದ ರೈಲು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಈ ಕುರಿತು ದೊಡ್ಡಬಳ್ಳಾಪುರ ರೈಲ್ವೇ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News