ಬೆಂಗಳೂರು, ಡಿ.11- ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನ ಪರ್ಫೆಕ್ಟ್ ಮ್ಯಾನ್ ಅಮೀರ್ ಖಾನ್ ಅವರು 29 ವರ್ಷಗಳ ನಂತರ ಮತ್ತೆ ಒಂದೇ ಚಿತ್ರದಲ್ಲಿ ನಟಿಸುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
1995ರಲ್ಲಿ ಆತಂಕ್ ಹೀ ಆತಂಕ್ ಎಂಬ ಸಿನಿಮಾದಲ್ಲಿ ಅಮೀರ್ ಖಾನ್ ಹಾಗೂ ರಜನಿಕಾಂತ್ ಅವರು ತೆರೆ ಹಂಚಿಕೊಂಡಿದ್ದರು. ಆ ನಂತರ ಈ ಇಬ್ಬರು ಮೇರು ನಟರು ಒಂದೇ ಚಿತ್ರದಲ್ಲಿ ನಟಿಸುವ ಕಾಲಾವಕಾಶ ಕೂಡಿಬಂದಿರಲಿಲ್ಲ.
ಆದರೆ ಈಗ ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ `ಕೂಲಿ’ ಚಿತ್ರದಲ್ಲಿ ಅಮೀರ್ ಖಾನ್ ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದು, ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಕನಕರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ.