ಈ ವಾರ ತೆರೆ ಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ ಅಭಿರಾಮಚಂದ್ರ ಚಿತ್ರ ಯುವಕರನ್ನ ಬಾಲ್ಯದ ನೆನಪುಗಳ ಅಂಗಳಕ್ಕೆ ಕೊಂಡೊಯ್ದು ಎರಡು ಗಂಟೆಗಳ ಕಾಲ ನಾವೆಲ್ಲಿದ್ದೇವೆ ಅನ್ನುವುದನ್ನ ಮರೆಸಿ ಹೃದಯವನ್ನ ಭಾರಮಾಡುತ್ತದೆ. ವಸ್ತು, ಪ್ರೀತಿ ಇರಲಿ, ಎಮೋಷನ್ ಅಥವಾ ಆಕ್ಷನ್ ಇರಲಿ ಆ ವಸ್ತುವನ್ನು ಗಟ್ಟಿಯಾಗಿ ಹಿಡಿದು ಅದರ ಸುತ್ತ ಮುತ್ತ ಒಂದಿಷ್ಟು ಕಲರ್ಫುಲ್ ಅಂಶಗಳನ್ನು ಹದವಾಗಿ ಬೆರೆಸಿ ಪ್ರೇಕ್ಷಕರ ಬಳಿ ತೆಗೆದುಕೊಂಡು ಹೋಗಿ ಯಶಸ್ವಿಯಾಗುವುದು ಸುಲಭವಲ್ಲ. ಈ ಪ್ರಯತ್ನದಲ್ಲಿ ನಿರ್ದೇಶಕ ನಾಗೇಂದ್ರ ಗಾಣಿಗ ಯಶಸ್ವಿಯಾಗಿದ್ದಾರೆ.
ಅಭಿ,ರಾಮ,ಚಂದ್ರ ಬೆಂಗಳೂರಲ್ಲಿ ಉದ್ಯೋಗ ನಿಮಿತ್ತ ಬಂದಿರುತ್ತಾರೆ ಒಂದೇ ಮನೆಯಲ್ಲಿ ವಾಸಿಸುತ್ತಿರುತ್ತಾರೆ. ಒಬ್ಬ ರಂಗಭೂಮಿ ಕಲಾವಿದ, ಮತ್ತೊಬ್ಬ ಕ್ಯಾಬ್ ಡ್ರೈವರ್ ಇನ್ನೊಬ್ಬ ಹೋಟಲ್ ಕ್ಯಾಶಿಯರ್. ಉದ್ಯೋಗಿಗಳಾಗಿದ್ದರೂ ಮನೆಗೆ ಬಾಡಿಗೆ ಕಟ್ಟಲಾದಷ್ಟು ಬಡತನ. ಕಾರಿಗೆ ಇಎಂಐ ಕಟ್ಟಲು ತಿಣುಕಾಟ. ಪ್ರತಿಯೊಬ್ಬರ ಬಳಿಯೂ ಸಾಲದ ಭಿಕ್ಷೆ. ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಳ್ಳುತ್ತಿರುವ ಅದೆಷ್ಟೋ ಮಂದಿಗೆ ಇದು ಅನುಭವವಾಗಿರುತ್ತದೆ. ಮೂರು ಹುಡುಗರ ತರಲೆ ತುಂಟಾಟಗಳು ನೋಡುಗರಿಗೆ ಮನರಂಜನೆಯನ್ನು ನೀಡುತ್ತವೆ.
ನಿಜ್ಜರ್ ಹತ್ಯೆಯಲ್ಲಿ ಚೀನಿ ಕೈವಾಡ : ಜೆನ್ನಿಫರ್ ಝೆಂಗ್
ಇದೇ ಸಂದರ್ಭದಲ್ಲಿ ನಾಯಕ ಅಭಿ ಪ್ರೇಮ ಕಥೆಯ ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಇದು ಮೊದಲರ್ಧಕ್ಕೆ ಮತ್ತಷ್ಟು ರಂಗನ್ನ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಕುಂದಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಯಕ ನಾಯಕಿಯ ಬಾಲ್ಯದ ಪ್ರೀತಿ ಅಭಿರಾಮಚಂದ್ರ ಚಿತ್ರದ ಹೈಲೆಟ್. ಕುಂದಾಪುರದ ಭಾಷೆ ಮತ್ತು ಅಲ್ಲಿಯ ಹಳ್ಳಿ ಸೊಗಡು ಕಥೆಗೆ ತುಂಬ ಪೂರಕವಾಗಿದೆ.
ಬಾಲ್ಯದಲ್ಲಿ ಹುಟ್ಟಿದ ಪ್ರೀತಿಯನ್ನು ಸದಾ ನೆನೆಯುತ್ತಾ ಆಕೆಯ ನೆನಪಲ್ಲೇ ಕಾಲ ಕಳೆಯುತ್ತಿರುವ ನಾಯಕನಿಗೆ ನಾಯಕಿ ಸಿಗುತ್ತಾಳ ಎಂಬ ಪ್ರಶ್ನೆಗೆ ದ್ವಿತೀಯಾರ್ಧದಲ್ಲಿ ಉತ್ತರ ಕೊಡುವ ಪ್ರಯತ್ನವಾಗಿದೆ.ಇಲ್ಲಿ ಕಥೆ ಪ್ರೇಕ್ಷರನ್ನ ತುಂಬಾ ಕುತೂಹಲಕ್ಕೆ ದೂಡುತ್ತದೆ ಅದೇನೆಂಬ ಪ್ರಶ್ನೆಗೆ ಚಿತ್ರ ನಮ್ಮ ಗೊತ್ತಾಗುತ್ತದೆ.
ನಾಯಕನಾಗಿ ರಥಕಿರಣ ಸ್ನೇಹಿತರ ಪಾತ್ರಗಳಲ್ಲಿ ಸಿದ್ದು ಮೂಲಿಮನಿ ವತ್ತು ನಾಟ್ಯರಂಗ ಅಭಿನಯಿಸಿದ್ದು ಇಡೀ ಕತೆಯನ್ನು ಈ ನಾಲ್ವರು ಹೆಗಲ ಮೇಲೆ ಎತ್ತಿಕೊಂಡು ಹೋಗಿದ್ದಾರೆ. ನಿರ್ದೇಶಕ ಇವರ ಬಳಿ ಅಭಿನಯ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ.
ರವಿ ಬಸ್ರೂರು ಮ್ಯೂಸಿಕ್ ಕುಂದಾಪುರದ ವಾತಾವರಣಕ್ಕೆ ರಂಗು ತುಂಬಿದ್ದು ಎ. ಜಿ. ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರ ಸೊಗಸಾಗಿ ಮೂಡಿ ಬರುವಂತೆ ನಿರ್ಮಾಣ ಮಾಡಿದ್ದಾರೆ.
ಅಪ್ರಾಪ್ತ ಸಹೋದರಿಯರನ್ನು ಕತ್ತು ಸೀಳಿ ಕೊಂದ ಹಂತಕರು
ಮೊದಲಾರ್ದದಲ್ಲಿ ನಾಯಕಿ ಶಿವಾನಿ ರೈ ಕಾಶಿಕೊಳ್ಳದಿದ್ದರು ಎರಡನೇ ಭಾಗದಲ್ಲಿ ನಿರ್ದೇಶಕರು ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವೀಣಾ ಸುಂದರ್, ಸುಂದರ್, ಎಸ್. ನಾರಾಯಣ್, ಪ್ರಕಾಶ್ ತುಮ್ಮಿನಾಡು ಕೂಡ ಅಭಿರಾಮಚಂದ್ರನಿಗೆ ನೆರವಾಗಿದ್ದಾರೆ. ಯಾವುದೇ ವಯೋಮಿತಿ ಇಲ್ಲದೆ ಅಭಿರಾಮಚಂದ್ರನನ್ನ ಕಣ್ತುಂಬಿಕೊಳ್ಳಲು ಅಡ್ಡಿ ಇಲ್ಲ