ಬೆಂಗಳೂರು, ಮೇ 18-ಹೋಟೆಲ್‌ನ ಡಿಜಿಟಲ್ ಬೋರ್ಡ್‌ನಲ್ಲಿ ಕನ್ನಡಿಗರ ವಿರುದ್ಧ ಅವಾಚ್ಯ ಶಬ್ದ ,ಬರಹ ಪ್ರದರ್ಶನದ ಹಿನ್ನಲೆಯಲ್ಲಿ ತಾವರೆಕೆರೆ ಮುಖ್ಯ ರಸ್ತೆಯ ಜಿಎಸ್ ಸ್ಯೂಟಸ್ ಹೋಟೆಲ್‌ನ ಮ್ಯಾನೆಜರ್‌ನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೇರಳ ಮೂಲದ ರ್ಸ್‌ರಾಜ್ (27) ಬಂಧಿತ ಹೋಟೆಲ್ ಮ್ಯಾನೇಜರ್.
ರಾಜಧಾನಿಯಲ್ಲಿ ಕನ್ನಡಿಗರ ವಿರುದ್ಧ ಅವಾಚ್ಯ ಶಬ್ದ, ನಿಂದನೆ,ಅವಮಾನ ಘಟನೆಗಳು ಆಗಾಗೇ ನಡೆಯುತ್ತಲೆ ಇವೆ. ಇದರ ಬೆನ್ನಲೆ ತಾವರೆಕೆರೆ ಮುಖ್ಯ ರಸ್ತೆಯ ಭವನಪ್ಪ ಲೇಔಟ್‌ನಲ್ಲಿರುವ ಜೆಎಸ್ ಸ್ಯೂಟಸ್ ಹೋಟೆಲ್‌ನ ಡಿಜಿಟಲ್ ಬೋರ್ಡ್‌ನಲ್ಲಿ ಕನ್ನಡಿಗರ ವಿರುದ್ಧ ಅವಾಚ್ಯಶಬ್ದ, ಬರಹ ಅಳವಡಿಸಿರುವ ಘಟನೆ ಬೆಳಕಿಗೆ ಬಂದಿತು. ಈ ಸಂಬಂಧ ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹೋಟೆಲ್ ವಿರುದ್ಧ ಮಡಿವಾಳ
ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿತ್ತು.
ದೂರಿನ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿ ಹಾಗೂ ಡಿಜಿಟಲ್ ಬೋರ್ಡ್ ಮಾಡಿಕೊಟ್ಟ ವ್ಯಕ್ತಿಗೂ ಕೂಡ ನೋಟೀಸ್ ನೀಡಲಾಗಿತ್ತು. ಹೋಟೆಲ್ ಸಿಬ್ಬಂದಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ
ಅವಾಚ್ಯ ಶಬ್ದ, ಬರಹ ಅಳವಡಿಕೆ ಆರೋಪ ಕಂಡುಬಂದ ಹಿನ್ನೆಲೆಯಲ್ಲಿ ಹೋಟೆಲ್‌ನ ಮ್ಯಾನೆಜರ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಹೋಟೆಲ್ ಮಾಲೀಕ ಕೇರಳದಲ್ಲಿದ್ದಾರೆ. ಅವರ ವಿರುದ್ಧವೂ ಕೂಡ ಎ್‌ಐಆರ್ ದಾಖಲಾಗಿದೆ. ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸದ್ಯದಲ್ಲಿ ನೋಟೀಸ್ ನೀಡಲಾಗುವುದು ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಈಗಾಗಲೇ ಹೋಟೆಲ್‌ನಲಿದ್ದ ಸಿಬ್ಬಂದಿ ಮತ್ತು ಗ್ರಾಹಕರನ್ನು ಖಾಲಿ ಮಾಡಿಸಿ ಬೀಗ ಜಡೆಯಲಾಗಿದೆ.