Monday, September 1, 2025
Homeರಾಷ್ಟ್ರೀಯ | Nationalಪೊಲೀಸ್‌‍ ಠಾಣೆಯ ಶೌಚಾಲಯದಲ್ಲಿ ನೇಣಿಗೆ ಶರಣಾದ ಆರೋಪಿ

ಪೊಲೀಸ್‌‍ ಠಾಣೆಯ ಶೌಚಾಲಯದಲ್ಲಿ ನೇಣಿಗೆ ಶರಣಾದ ಆರೋಪಿ

Accused hangs himself in toilet of police station

ಹರ್ದೋಯ್‌, ಸೆ.1- ಉತ್ತರ ಪ್ರದೇಶದ ಹರ್ದೋಯ್‌ ಜಿಲ್ಲೆಯ ಶಹಾಬಾದ್‌ ಪೊಲೀಸ್‌‍ ಠಾಣೆಯ ಶೌಚಾಲಯದಲ್ಲಿ ಬಾಲಕಿ ಅಪಹರಣದ ಆರೋಪಿ ನೇಣಿಗೆ ಶರಣಾಗಿದ್ದಾನೆ .ಇತ್ತೀಚೆಗೆ 16 ವರ್ಷದ ಬಾಲಕಿಯೊಂದಿಗೆ ಪಾರಿಯಾಗಿದ್ದ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದ್ದ ರವಿ ರಜಪೂತ್‌(20)ಮೃತ ಯುವಕ.

ಸಾವಿನ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಎಸ್‌‍ಪಿ ನೀರಜ್‌ ಜದೌನ್‌ ಹೇಳಿದ್ದಾರೆ.ಪೊಲೀಸ್‌‍ ಠಾಣೆಯೊಳಗಿನ ಶೌಚಾಲಯದಲ್ಲಿ ರಜಪೂತ್‌ ನೇಣು ಬಿಗಿದುಕೊಂಡಿದ್ದು , ತಕ್ಷಣ ಆತನನ್ನು ಹಾಬಾದ್‌ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅತ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಜಪೂತ್‌ನ ಕುಟುಂಬ ಮತ್ತು ಸಂಬಂಧಿಕರು ಪೊಲೀಸ್‌‍ ಠಾಣೆಗೆ ಧಾವಿಸಿ ಲಾಕಪ್‌ ಡೆತ್‌ ಎಂದು ಆರೋಪಿಸಿದ್ದಾರೆ.ಘಟನೆಯ ಕುರಿತ್ತುತನಿಖೆ ಮಾಡಲಾಗುತ್ತಿದೆ, ಮತ್ತು ತನಿಖೆಯ ನಂತರ ನಿಖರವಾದ ಸಂದರ್ಭಗಳು ಸ್ಪಷ್ಟವಾಗುತ್ತವೆ ಎಂದು ಜದೌನ್‌ ಹೇಳಿದರು.

RELATED ARTICLES

Latest News