ಹೈದರಾಬಾದ್,ಡಿ.28– ಪೂರ್ಣ ಪ್ರಮಾಣದ ಜಾಮೀನಿಗಾಗಿ ಅಲ್ಲು ಅರ್ಜುನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಅಲ್ಲು ಅರ್ಜುನ್ ಒಂದು ತಿಂಗಳ ಮಧ್ಯಂತರ ಜಾಮೀನು ಪಡೆದಿದ್ದು, ಪೂರ್ಣಪ್ರಮಾಣದ ಜಾಮೀನಿಗೆ ಅವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಇತ್ತೀಚೆಗೆ ಅಲ್ಲು ಅರ್ಜುನ್ ಅವರು ಆನ್‌ಲೈನ್ ಮೂಲಕ ಸ್ಥಳೀಯ ಕೋರ್ಟ್‌ನ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ, ಸದ್ಯ ಅರ್ಜಿ ವಿಚಾರಣೆ ಮುಂದಕ್ಕೆ ಹೋಗಿದೆ.ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಅಲ್ಲು ಅರ್ಜುನ್ ಅವರು 11ನೇ ಆರೋಪಿ ಆಗಿದ್ದಾರೆ.
ಅವರು ಜಾಮೀನಿಗಾಗಿ ಮನವಿ ಮಾಡಿದ್ದು, ಇದರ ವಿಚಾರಣೆ ನಡೆದಿದೆ. ಈ ವೇಳೆ ಪೊಲೀಸರು ಹೆಚ್ಚುವರಿ ಸಮಯಾವಕಾಶ ಕೇಳಿದ್ದು, ಅರ್ಜಿ ವಿಚಾರಣೆ ಡಿಸೆಂಬರ್ 30ಕ್ಕೆ ಮಂದೂಡಲ್ಪಟ್ಟಿದೆ.
ಅವರು ಕೋರ್ಟ್‌ಗೆ ಹಾಜರಾದರೆ ಮತ್ತೆ ಅಭಿಮಾನಿಗಳು ಮುತ್ತಿಕೊಳ್ಳೋದು ಗ್ಯಾರಂಟಿ. ಇದರಿಂದ ಮತ್ತಷ್ಟು ತೊಂದರೆ ಉಂಟಾಗಲಿವೆ. ಈ ಕಾರಣಕ್ಕೆ ಅಲ್ಲು ಅರ್ಜುನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಜಾಯಿನ್ ಆಗಿದ್ದರು.