Monday, November 10, 2025
Homeರಾಜ್ಯಕಾರಾಗೃಹದಲ್ಲಿ ರಾಜಾತಿಥ್ಯ ವಿಡಿಯೋ ವೈರಲ್‌ : ದರ್ಶನ್‌ ಆಪ್ತ ಧನ್ವೀರ್‌ ವಿಚಾರಣೆ

ಕಾರಾಗೃಹದಲ್ಲಿ ರಾಜಾತಿಥ್ಯ ವಿಡಿಯೋ ವೈರಲ್‌ : ದರ್ಶನ್‌ ಆಪ್ತ ಧನ್ವೀರ್‌ ವಿಚಾರಣೆ

ಬೆಂಗಳೂರು,ನ.10-ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ಹಾಗೂ ವಿಚಾರಣಾಧೀನ ಖೈದಿಗಳಿಗೆ ರಾಜಾತಿಥ್ಯದ ವಿಡಿಯೋ ಹರಿದಾಡಿದ ಬೆನ್ನಲ್ಲೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಪೊಲೀಸರು ದರ್ಶನ್‌ ಆಪ್ತ ಧನ್ವೀರ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಘಟನೆ ಪೊಲೀಸ್‌‍ ಇಲಾಖೆಗೆ ಹಾಗೂ ಸರ್ಕಾರಕ್ಕೆ ಒಂದು ರೀತಿ ಮುಜುಗರ ಉಂಟಾಗಿದೆ. ಈ ಕಾರಾಗೃಹದೊಳಗೆ ಖೈದಿಗಳಿಗೆ ಹಾಗೂ ವಿಚಾರಣಾ ಖೈದಿಗಳಿಗೆ ಮೊಬೈಲ್‌,ಟಿವಿ ಹಾಗೂ ಇನ್ನಿತರ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ಇತ್ತೀಚೆಗೆ ವಿಡಿಯೋ ವೈರಲ್‌ ಆಗಿದೆ.

ಈ ವಿಡಿಯೋಗಳನ್ನು ದರ್ಶನ್‌ ಅವರ ಆಪ್ತ ಗೆಳೆಯ ಧನ್ವೀರ್‌ ಬಿಡುಗಡೆ ಮಾಡಿದ್ದಾರೆಂಬ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಇದೀಗ ಧನ್ವೀರ್‌ಗೆ ವಿಚಾರಣೆಗೆ ಒಳಪಡಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಧನ್ವೀರ್‌ ಅವರ ಮೊಬೈಲ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಎಫ್‌ಎಸ್‌‍ಎಲ್‌ಗೆ ಕಳುಹಿಸಿದ್ದಾರೆ. ಅದರ ವರದಿ ಬಂದ ನಂತರವಷ್ಟೇ ಈ ವಿಡಿಯೋಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.

ಇಂದು ಮತ್ತೆ ವಿಚಾರಣೆ ಮುಂದುವರೆಸಿದರುವ ಸಿಸಿಬಿ ಪೊಲೀಸರು, ಜೈಲಿನೊಳಗಿನ ಚಲನವಲನಗಳ ವಿಡಿಯೋ ಚಿತ್ರೀಕರಣ ಮಾಡಿದವರು ಯಾರು, ಆ ವಿಡಿಯೋ ಹೊರಗೆ ಹೇಗೆ ಬಂದಿತು, ಅದನ್ನು ಹರಿಬಿಟ್ಟವರು ಯಾರು ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

RELATED ARTICLES

Latest News