Saturday, August 9, 2025
Homeರಾಷ್ಟ್ರೀಯ | Nationalಪಾರ್ಕಿಂಗ್‌ ವಿವಾದ : ಬಾಲಿವುಡ್‌ ನಟಿ ಹುಮಾ ಖುರೇಷಿ ಸೋದರಸಂಬಂಧಿ ಆಸಿಫ್‌ ಖುರೇಷಿ ಹತ್ಯೆ

ಪಾರ್ಕಿಂಗ್‌ ವಿವಾದ : ಬಾಲಿವುಡ್‌ ನಟಿ ಹುಮಾ ಖುರೇಷಿ ಸೋದರಸಂಬಂಧಿ ಆಸಿಫ್‌ ಖುರೇಷಿ ಹತ್ಯೆ

Actor Huma Qureshi's cousin killed in Delhi parking dispute

ನವದೆಹಲಿ,ಆ.8- ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ಪಾರ್ಕಿಂಗ್‌ ವಿವಾದದ ಹಿನ್ನೆಲೆಯಲ್ಲಿ ಬಾಲಿವುಡ್‌ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿ ಆಸಿಫ್‌ ಖುರೇಷಿ ಅವರನ್ನು ಹತ್ಯೆ ಮಾಡಲಾಗಿದೆ.ಕಳೆದ ರಾತ್ರಿ 11 ಗಂಟೆ ಸುಮಾರಿಗೆ ನಿಜಾಮುದ್ದೀನ್‌ನ ಜಂಗ್‌ಪುರ ಭೋಗಲ್‌ ಲೇನ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಗೆ ಸಂಭಂಧಿಸಿದಂತೆ ಇಬ್ಬರೂ ಆರೋಪಿಗಳನ್ನು ಇಂದು ಮುಂಜಾನೆ ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಆಸಿಫ್‌ ಮನೆಯೊಂದರ ಮುಖ್ಯದ್ವಾರದ ಮುಂದೆ ದ್ವಿಚಕ್ರ ವಾಹನ ನಿಲ್ಲಿಸುವ ವಿಚಾರದಲ್ಲಿ ಜಗಳ ಭುಗಿಲೆದ್ದಿದ್ದು, ನಂತರ ಆರೋಪಿಗಳು ಹರಿತವಾದ ಆಯುಧಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ಆಸಿಫ್‌ ತೀವ್ರವಾಗಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.ಆಸಿಫ್‌ ಪತ್ನಿ ಸೈನಾಜ್‌ ಖುರೇಷಿ ನೀಡಿರುವ ದೂರಿನಲ್ಲಿ ಆರೋಪಿಯು ಈ ಹಿಂದೆಯೂ ಇದೇ ಸ್ಥಳದಲ್ಲಿ ಪಾರ್ಕಿಂಗ್‌ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಗಿತ್ತು ಕಳೆದ ರಾತ್ರಿ ಆಸಿಫ್‌ ಕೆಲಸ ಮುಗಿಸಿ ಹಿಂತಿರುಗಿದಾಗ, ಮನೆಯ ಮುಖ್ಯ ದ್ವಾರದ ಮುಂದೆ ನೆರೆಮನೆಯವರ ದ್ವಿಚಕ್ರ ವಾಹನ ನಿಂತಿರುವುದನ್ನು ನೋಡಿ, ಅದನ್ನು ಅಲ್ಲಿಂದ ತೆಗೆಯುವಂತೆ ಹೇಳಿದ್ದ ಎಂದು ಅವರು ಹೇಳಿದ್ದಾರೆ.

ಆದರೆ, ವಾಹನವನ್ನು ಸ್ಥಳದಿಂದ ತೆಗೆಯುವ ಬದಲು, ನೆರೆಹೊರೆಯವರು ಆಸಿಫ್‌ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಂತರ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹುಡುಕಾಟ ನಡೆಸಿದ ನಂತರ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

RELATED ARTICLES

Latest News