Thursday, August 7, 2025
Homeಮನರಂಜನೆನಟ ಸಂತೋಷ್‌ ಬಾಲರಾಜ್‌ ವಿಧಿವಶ

ನಟ ಸಂತೋಷ್‌ ಬಾಲರಾಜ್‌ ವಿಧಿವಶ

Actor Santosh Balaraj passes away

ಬೆಂಗಳೂರು,ಆ.5- ನಿರ್ದೇಶಕ ಆನೇಕಲ್‌ ಬಾಲರಾಜ್‌ ಅವರ ಪುತ್ರ ಸಂತೋಷ್‌ (38) ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಜಾಂಡೀಸ್‌‍ ರೋಗಕ್ಕೆ ತುತ್ತಾಗಿದ್ದ ಸಂತೋಷ್‌ ಅವರು, ಖಾಸಗಿ ಆಸ್ಪತ್ರೆಯೊಂದರಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಗಣಪ, ಕರಿಯ-2, ಕೆಂಪ, ಬರ್ಕ್ಲೀ ಚಿತ್ರಗಳಲ್ಲಿ ನಟಿಸಿದ್ದ ಸಂತೋಷ್‌ ಅಭಿನಯದ ಸತ್ಯ ಚಿತ್ರ ಇನ್ನೂ ತೆರೆಕಾಣಬೇಕಾಗಿತ್ತು. ಎಲ್ಲರ ಜತೆ ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದ ಸಂತೋಷ್‌, ಒಂದೂವರೆ ವರ್ಷದ ಹಿಂದಷ್ಟೇ ತಂದೆಯನ್ನು ಕಳೆದುಕೊಂಡಿದ್ದರು. ಇವರ ಕುಟುಂಬದಲ್ಲೀಗ ನೀರವಮೌನ ಆವರಿಸಿದೆ.

RELATED ARTICLES

Latest News