Monday, July 28, 2025
Homeಮನರಂಜನೆದರ್ಶನ್‌ ಅಭಿಮಾನಿಗಳ ವಿರುದ್ಧ ಕಾನೂನು ಹೋರಾಟಕ್ಕಿಳಿದ ನಟಿ ರಮ್ಯಾ

ದರ್ಶನ್‌ ಅಭಿಮಾನಿಗಳ ವಿರುದ್ಧ ಕಾನೂನು ಹೋರಾಟಕ್ಕಿಳಿದ ನಟಿ ರಮ್ಯಾ

Actress Ramya takes legal action against Darshan's fans

ಬೆಂಗಳೂರು,ಜು.28- ಸದ್ಯ ಕನ್ನಡ ಚಿತ್ರರಂಗದಲ್ಲಿ ದರ್ಶನ್‌ ಅಭಿಮಾನಿಗಳ ವಿರುದ್ಧ ಒಳ್ಳೆ ಹುಡುಗ ಪ್ರಥಮ್‌ ಹಾಗೂ ಮೋಹಕತಾರೆ ರಮ್ಯಾ ಕೆಂಡಾಮಂಡಲರಾಗಿದ್ದಾರೆ. ಆ ಕಡೆ ನಟ ಪ್ರಥಮ್‌‍, ದರ್ಶನ್‌ ಅಭಿಮಾನಿಗಳು ನನ್ನ ಮೇಲೆ ಹಲ್ಲೆಗೆ ಪ್ರಯತ್ನ ಮಾಡ್ತಾರೆ ಅಂತ ಆರೋಪ ಮಾಡ್ತಾ ಇದ್ದಾರೆ. ಇತ್ತ ರಮ್ಯಾ ಕೂಡ ಗರಂ ಆಗಿದ್ದು, ದರ್ಶನ್‌ ಅಭಿಮಾನಿಗಳಿಗೆ ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ.

ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂತ ರಮ್ಯಾ ಪೋಸ್ಟ್‌ ಹಾಕಿದ ಬಳಿಕ ದರ್ಶನ್‌ ಅಭಿಮಾನಿಗಳ ಹೆಸರಲ್ಲಿ ಕೆಟ್ಟದಾಗಿ ಮೆಸೇಜ್‌ ಗಳನ್ನ ಮಾಡ್ತಾ ಇದಾರೆ ಅಂತ ಮೊಹಕ ತಾರೆ ರಮ್ಯ ಪೋಸ್ಟ್‌ ಹಾಕಿದ್ದರು. ಜೊತೆಗೆ ನಾನು ಯಾರಿಗೂ ಹೆದರುವುದಿಲ್ಲ ಅಂತ ಕೂಡ ಹೇಳಿದ್ದಾರೆ. ದರ್ಶನ್‌ ಫ್ಯಾನ್‌್ಸತಮಗೆ ಕಳಿಸಿರುವ ಮೆಸೇಜ್‌ಗಳ ಸ್ಕ್ರೀನ್‌ ಶಾಟ್‌ ಶೇರ್‌ ಮಾಡಿಕೊಂಡಿರುವ ನಟಿ ರಮ್ಯಾ ಅಭಿಮಾನಿಗಳ ವಿರುದ್ಧ ಸೈಬರ್‌ ಕ್ರೈಮ್‌ ವಿಭಾಗಕ್ಕೆ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.

ಡಿ ಬಾಸ್‌‍ ಫ್ಯಾನ್‌್ಸ ಎನ್ನಿಸಿಕೊಂಡವರು ಯಾರನ್ನೂ ಬಿಡುತ್ತಿಲ್ಲ. ಬರೀ ನನಗೆ ಮಾತ್ರವಲ್ಲ, ಅನೇಕರಿಗೆ ಹೀಗೆ ಕೆಟ್ಟ ಕೊಳಕು ಮೆಸೇಜ್‌ ಕಳಿಸುತ್ತಿದ್ದಾರೆ. ಸುದೀಪ್‌-ಯಶ್‌, ಅವರ ಕುಟುಂಬ, ಹೆಂಡತಿ-ಮಕ್ಕಳಿಗೂ ಸೋಷಿಯಲ್‌ ಮೀಡಿಯಾದಲ್ಲಿ ಬೈದಿದ್ದನ್ನ ನಾನು ನೋಡಿದ್ದೇನೆ ಎಂದು ಹೇಳಿದ್ದಾರೆ.

ಇದೀಗ ದರ್ಶನ್‌ ಅಭಿಮಾನಿಗಳು ಈಗ ದರ್ಶನ್‌ ರೀತಿಯೇ ಶಾಂತಿಮಂತ್ರ ಘೋಷಿಸಿದ್ದಾರೆ.
ಡಿ ಬಾಸ್‌‍ ಮೇಲೆ ಅಭಿಮಾನ ಇರುವ ಯಾವೊಬ್ಬ ಅಭಿಮಾನಿ ಕೂಡ ಯಾವುದೇ ವಿವಾದಕ್ಕೂ ಕಿವಿಗೊಡಬೇಡಿ. ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ. ಯಾರುಗೂ ಮೆಸೇಜ್‌ ಮಾಡಬೇಡಿ.

ಪ್ರಚಾರಕ್ಕೆ ಆಗಲಿ, ಹುನ್ನಾರ ಮಾಡಿ ಆಗಲಿ, ಯಾರೂ ಏನೇ ಅಂದರು ತಲೆ ಕೆಡಿಸಿಕೊಳ್ಳಬೇಡಿ. ದರ್ಶನ್‌ ಫ್ಯಾನ್‌್ಸ ಏನೆಂದು ಮಾಡಿರುವ ಸಮಾಜಮುಖಿ ಕಾರ್ಯಗಳು ಸಾಕ್ಷಿಯಿದೆ. ಈ ಅವಮಾನಗಳು ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಮೆಟ್ಟಿಲು ಆಗಲಿ ಎಂದು ಡಿ ಕಂಪನಿ ಪೋಸ್ಟ್‌ ಹಾಕಿದೆ. ಇನ್ನು ಒಳ್ಳೆ ಹುಡುಗ ಪ್ರಥಮ್‌ ರಮ್ಯ ಪರ ನಿಲುವುದಾಗಿ ಬಹಿರಂಗವಾಗಿ ಘೋಷಿಸಿ ಕಾಲವಿದರ ಕಾಲೆಳೆದಿದ್ದಾರೆ.

RELATED ARTICLES

Latest News