ನವದೆಹಲಿ,ಮಾ.22- ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವುದಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಆ್ಯಡಂ ಗಿಲ್‌ಕ್ರಿಸ್ಟ್ ಭವಿಷ್ಯ ನುಡಿದಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ನಡೆಸುವ ಕ್ಲಬ್ ಪೈರಿ ಫೈರ್ ಪಾಡ್‌ಕ್ಯಾಸ್ಟ್‌ನಲ್ಲಿ ಐಪಿಎಲ್ ಕುರಿತು ಮಾತನಾಡಿದ ಅವರು. ಈ ಬಾರಿ ಆರ್‌ಸಿಬಿ ತಂಡವು ಕೊನೆಯ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇಂಗ್ಲೆಂಡ್ ಆಟಗಾರರು ಹೆಚ್ಚಿದ್ದಾರೆ ಎಂದಿದ್ದಾರೆ.
ಹೀಗಾಗಿ ಅವರು ಗೆಲ್ಲುವ ಸಾಧ್ಯತೆಯಿಲ್ಲ ಎಂದು ಗಿಲ್‌ಕ್ರಿಸ್ಟ್ ಅವರು, ಮೈಕಲ್ ವಾನ್ ಅವರ ಕಾಲೆಳೆದಿದ್ದಾರೆ. ಈ ಮೂಲಕ ಈ ಬಾರಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುವುದನ್ನು ನಿರೀಕ್ಷಿಸಬೇಡಿ.
ನಾನು ವಿರಾಟ್ ಕೊಹ್ಲಿಯ ವಿರೋಧಿ ಏನಲ್ಲ. ಆರ್‌ಸಿಬಿ ಅಭಿಮಾನಿಗಳ ವಿರುದ್ಧವೂ ಇಲ್ಲ. ಇಂತಹ ಕಠೋರ ಹೇಳಿಕೆಗೆ ಮೊದಲೇ ನಾನು ಆರ್‌ಸಿಬಿ ಫ್ಯಾನ್ಸ್ ಬಳಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಇಂತಹ ಆಟಗಾರರನ್ನು ಆಯ್ಕೆ ಮಾಡಿದ ನಿಮ್ಮ ಆಯ್ಕೆಗಾರರ ಬಳಿ ಮಾತನಾಡಿದರೆ ಉತ್ತಮ ಎಂದು ಆ್ಯಡಂ ಗಿಲ್‌ಕ್ರಿಸ್ಟ್ ಹೇಳಿದ್ದಾರೆ. ಈ ಬಾರಿ ಆರ್‌ಸಿಬಿ ತಂಡದಲ್ಲಿ ಮೂವರು ಇಂಗ್ಲೆಂಡ್ ಆಟಗಾರರಿದ್ದಾರೆ. ಅವರೆಂದರೆ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜೇಕಬ್ ಬೆಥೆಲ್. ಈ ಮೂವರು ಆಟಗಾರರು ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅತ್ತ ಮೂವರು ಇಂಗ್ಲೆಂಡ್ ಪ್ಲೇಯರ್ ಗಳು ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು.
ಹೀಗಾಗಿಯೇ ಆರ್‌ಸಿಬಿ ತಂಡವು ಇಂಗ್ಲೆಂಡ್ ಆಟಗಾರರ ನೆರವಿನಿಂದ ಕಪ್ ಗೆಲ್ಲಲು ಸಾಧ್ಯವಿಲ್ಲ. ಈ ಬಾರಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಲಿದೆ ಎಂದು ಆ್ಯಡಂ ಗಿಲ್‌ಕ್ರಿಸ್ಟ್ ಹೇಳಿದ್ದಾರೆ.
ತಂಡದಲ್ಲಿರುವ ವಿದೇಶಿ ಆಟಗಾರರು:ಫಿಲ್ ಸಾಲ್ಟ್ (ಇಂಗ್ಲೆಂಡ್) ಲಿಯಾಮ್ ಲಿವಿಂಗ್ ಸ್ಟೋನ್ (ಇಂಗ್ಲೆಂಡ್) ಜೇಕಬ್ ಬೆಥೆಲ್ (ಇಂಗ್ಲೆಂಡ್ 1)ಟಿಮ್ ಡೇವಿಡ್ (ಆಸ್ಟ್ರೇಲಿಯಾ)ಜೋಶ್ ಹ್ಯಾಝಲ್‌ುಡ್ (ಆಸ್ಟ್ರೇಲಿಯಾ)ಲುಂಗಿ ಎನ್‌ಗಿಡಿ (ಸೌತ್ ಆಫ್ರಿಕಾ) ರೊಮಾರಿಯೊ ಶೆಫರ್ಡ್ (ವೆಸ್ಟ್ ಇಂಡೀಸ್) ನುವಾನ್ ತುಷಾರ (ಶ್ರೀಲಂಕಾ) ಉಳಿದಂತೆ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಜಿತೇಶ್ ಶರ್ಮಾ, ರಾಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ಟಪ್ಟಿಲ್ ಸಿಂಗ್, ಟಿಮ್ ಡೇವಿಡ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್ ಇದ್ದಾರೆ.”