Monday, September 8, 2025
Homeರಾಜ್ಯಹೊಯ್ಸಳ ಶೈಲಿಯ 'ಧಾರ್ಮಿಕ ಸೌಧ'ದ ನೀಲನಕ್ಷೆಗೆ ಆಡಳಿತಾತ್ಮಕ ಅನುಮೋದನೆ

ಹೊಯ್ಸಳ ಶೈಲಿಯ ‘ಧಾರ್ಮಿಕ ಸೌಧ’ದ ನೀಲನಕ್ಷೆಗೆ ಆಡಳಿತಾತ್ಮಕ ಅನುಮೋದನೆ

Administrative approval for the blueprint of the Hoysala style 'Dharmika Soudha'

ಬೆಂಗಳೂರು,ಸೆ.8- ರಾಜಧಾನಿ ಬೆಂಗಳೂರಿನ ಎಂ.ಎಸ್‌‍. ಬಿಲ್ಡಿಂಗ್‌ ಎದುರುಗಡೆ ಇರುವ ಜಾಗದಲ್ಲಿ 27 .70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಯ್ಸಳ ಶೈಲಿಯ ಧಾರ್ಮಿಕ ಸೌಧದ ನೀಲನಕ್ಷೆ ಸಿದ್ಧವಾಗಿದ್ದು ಇದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಇಲಾಖೆ ಕಟ್ಟಡ ವಿಶೇಷ ರೀತಿಯಲ್ಲಿರಬೇಕೆಂದು ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗುತ್ತಿದ್ದು, ಧಾರ್ಮಿಕ ಸೌಧ ಎಂದೂ ನಾಮಕರಣ ಮಾಡಲಾಗುತ್ತಿದೆ. ಒಂದು ವರ್ಷದಲ್ಲಿ ಪೂರ್ಣ ಧಾರ್ಮಿಕ ಸೌಧಕ್ಕೆ ಸಂಬಂಧಿಸಿದಂತೆ ನೀಲ ನಕ್ಷೆ ಸಿದ್ಧವಾಗಿದೆ. ಲೋಕೋಪಯೋಗಿ ಇಲಾಖೆ ಕಟ್ಟಡ ನಿರ್ಮಿಸಲಿದೆ. ಶೀಘ್ರದಲ್ಲಿಯೇ ನಿರ್ಮಾಣ ಕಾರ್ಯ ಆರಂಭವಾಗಲಿದ್ದು ಒಂದು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

ಎಂ.ಎಸ್‌‍. ಬಿಲ್ಡಿಂಗ್‌ ಎದುರುಗಡೆಯ ರಾಮಾಂಜನೇಯ ಸ್ವಾಮಿ ದೇವಸ್ಥಾನ ಹಿಂಭಾಗ ಇರುವ ಮುಜರಾಯಿ ಇಲಾಖೆಯ 26 ಗುಂಟೆ ಜಾಗದಲ್ಲಿ 6 ಗುಂಟೆ ದೇವಸ್ಥಾನವಿದ್ದು, ಉಳಿದ 20 ಗುಂಟೆ ಜಾಗದಲ್ಲಿ ರಾಜ್ಯದ ಮುಜರಾಯಿ ಇಲಾಖೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಿದೆ. ಹೊಯ್ಸಳ ಶೈಲಿಯಲ್ಲಿ ಧಾರ್ಮಿಕ ಸೌಧವನ್ನು ನಿರ್ಮಾಣ ಮಾಡಲಿದೆ. ನಾಲ್ಕು ಅಂತಸ್ತಿನ ಕಟ್ಟಡ ಇದಾಗಿರಲಿದೆ.

ಧಾರ್ಮಿಕ ಸೌಧದ ಮೊದಲನೆಯ ಮಹಡಿಯಲ್ಲಿ ಕೋರ್ಟ್‌ ಹಾಲ್‌‍, ಕಮಿಷನರ್‌ ಕಚೇರಿ, ಸರ್ವೆ ಇಲಾಖೆ , ಹೆಚ್‌ಕ್ಯೂ ಮತ್ತು ಕಿಂ ಕಚೇರಿಗಳು ಇರಲಿವೆ. ಎರಡನೇ ಮಹಡಿಯಲ್ಲಿ ಆಗಮ ಸೆಕ್ಷನ್‌ ಆಫೀಸರ್‌, ಐಟಿ ಸೆಕ್ಷನ್‌, ಇಂಜಿನಿಯರಿಂಗ್‌ ಸೆಕ್ಷನ್‌, ಮೀಟಿಂಗ್‌ ಹಾಲ್‌‍, ಹೆಚ್‌ಕ್ಯೂ ಒನ್‌ ಚೇಂಬರ್‌, ಕಿಂ1 ಇರಲಿದೆ. ಮೂರನೇ ಮಹಡಿಯಲ್ಲಿ ಓಪನ್‌ ಆಫೀಸ್‌‍ ಹಾಲ್‌‍, SUPCSBICKU 1-5 ಕಚೇರಿಗಳು, ಡಿಜಿಟಲ್‌ ಲೈಬ್ರರಿ, ಆರ್‌ಡಿಪಿಆರ್‌, ರೆಕಾರ್ಡ್‌್ಸ ಇರಲಿವೆ. ನಾಲ್ಕನೆಯ ಮಹಡಿಯಲ್ಲಿ ಆಡಿಟೋರಿಯಂ ಇರಲಿದೆ. ನೆಲಮಹಡಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇರಲಿದೆ.

ಪ್ರಸ್ತುತ ಧಾರ್ಮಿಕ ದತ್ತಿ ಇಲಾಖೆ ಕಚೇರಿಯು ಮಿಂಟೋ ಆಸ್ಪತ್ರೆ ಬಳಿ ಇದ್ದು, ಪ್ರತಿ ತಿಂಗಳು ಸುಮಾರು 11 ಲಕ್ಷ ಬಾಡಿಗೆ ನೀಡಲಾಗುತ್ತಿದೆ. ಸ್ವಾತಂತ್ರ್ಯ ನಂತರ ಇಲಾಖೆ ಪ್ರಾರಂಭವಾದರು ಇಲ್ಲಿಯವರೆಗೂ ಸ್ವಂತ ಕಟ್ಟಡ ಹೊಂದಿಲ್ಲ. ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ನೂರಾರು ಎಕರೆಗಳು ದೇವಸ್ಥಾನದ ಮುಜರಾಯಿ ಇಲಾಖೆಯ ಆಸ್ತಿಗಳಿದ್ದರೂ ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ಸಾಧ್ಯವಾಗಿರಲಿಲ್ಲ. ಇದೀಗ ಕಾಲ ಕೂಡಿಬಂದಿದ್ದು, ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಪ್ರಯತ್ನ ನಡೆಸಿದ್ದಾರೆ.

ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನೆಲಮಡಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ, ಮೊದಲ ಮಹಡಿಯಲ್ಲಿ ಕೋರ್ಟ್‌ ಹಾಲ್‌‍, ಆಯುಕ್ತರ ಕಚೇರಿ, ಸರ್ವೆ ಇಲಾಖೆ, ಕೇಂದ್ರ ಕಚೇರಿ ಒಂದು ಭಾಗವಿದ್ದರೆ, ಎರಡನೇ ಮಹಡಿಯಲ್ಲಿ ಆಗಮ ಸೆಕ್ಷನ್‌ ಆಫೀಸರ್‌, ಐಟಿ ಸೆಕ್ಷನ್‌, ಇಂಜಿನಿಯರಿಂಗ್‌ ಸೆಕ್ಷನ್‌, ಮೀಟಿಂಗ್‌ ಹಾಲ್‌ ಇರಲಿದೆ. ಮೂರನೇ ಮಹಡಿಯಲ್ಲಿ ಓಪನ್‌ ಆಫೀಸ್‌‍ ಹಾಲ್‌‍, ಅಧೀಕ್ಷಕರ ಕಚೇರಿಗಳು, ಡಿಜಿಟಲ್‌ ಲೈಬ್ರರಿ, ಆರ್‌ಡಿಪಿಆರ್‌, ದಾಖಲೆ ಸಂಗ್ರಹಗಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ನಾಲ್ಕನೇ ಮಹಡಿಯಲ್ಲಿ ಸಭಾಂಗಣ ನಿರ್ಮಿಸಲಾಗುತ್ತದೆ.

ಹಾಗೆಯೇ, ಈಗಿರುವ ದೇವಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಅರ್ಚಕರಿಗೆ ಎರಡು ಕೊಠಡಿ ವಸತಿ ಮನೆ ನಿರ್ಮಿಸಿಕೊಡಲಾಗುತ್ತದೆ. ಹಾಗೆಯೇ, ಆ ದೇವಸ್ಥಾನದ ಆಗುಹೋಗು ಖರ್ಚುಗಳನ್ನು ಮುಜರಾಯಿ ಇಲಾಖೆ ಭರಿಸಲಿದ್ದು, ದೇವಸ್ಥಾನ ಮುಂದೆ ಇರುವ ಯಾಗ ಶಾಲೆ, ಪಾಕಶಾಲೆ, ನವೀಕರಣ ಮಾಡಲಾಗುವುದು.

RELATED ARTICLES

Latest News