ಸೇಂಟ್ ಲೂಸಿಯಾ, ಜೂ.23- 2024ರ ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ಐತಿಹಾಸಿಕ ಗೆಲುವು ಸಾಧಿಸಿದೆ. 4 ಏಕದಿನ ಹಾಗೂ ಒಂದು ಚುಟುಕು ಪಂದ್ಯದಲ್ಲಿ ಸೋಲು ಕಂಡ ನಂತರ ಮೊದಲ ಬಾರಿ ವಿಶ್ವ ಚಾಂಪಿಯನ್ ತಂಡವನ್ನು ಮಣಿಸಿರುವ ರಶೀದ್‌ಖಾನ್ ಪಡೆ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನದ ಪರ ಆರಂಭಿಕ ಆಟಗಾರರಾದ ರೆಹಮಾನುತುಲ್ಲಾ ಗುಲ್ಬರ್ಜ್ (60 ರನ್) ಹಾಗೂ ಇಬ್ರಾಹಿಂ ಝರ್ಡಾನ್ (51 ರನ್) ತಲಾ ಅರ್ಧಶತಕ ಸಿಡಿಸುವ ಮೂಲಕ ಮೊದಲ ವಿಕೆಟ್‌ಗೆ 15.5 ಓವರ್‌ಗಳಲ್ಲಿ 118 ರನ್‌ಗಳ ಜೊತೆಯಾಟ ನೀಡಿದರು.
ಪ್ರಸಕ್ತ ವಿಶ್ವಕಪ್‌ಟೂರ್ನಿಯಲ್ಲಿ ಮೂರು ಬಾರಿ ಶತಕಗಳ ಜೊತೆಯಾಟ ನೀಡಿ ದಾಖಲೆ ನಿರ್ಮಿಸಿರುವ ಈ ಜೋಡಿಯನ್ನು ಮಾರ್ಕಸ್ ಸ್ಟೋನಿಸ್ ಅವರು ಗುರ್ಬಜ್ ವಿಕೆಟ್ ಪಡೆದು ದೂರಗೊಳಿಸಿದರು. ನಂತರ ಝರ್ದಾನ್ ಕೂಡ ಆಡಂ ಝಂಪಾ ಸ್ಪಿನ್ ಮೋಡಿಗೆ ವಿಕೆಟ್ ಒಪ್ಪಿಸಿದರು.
148 ರನ್‌ಗಳಿಗೆ ಸೀಮಿತಗೊಂಡ ಅಫ್ಘಾನ್:
ರೆಹಮಾನ್‌ಉಲ್ಲಾ ಗುರ್ಬಜ್ ಅವರ ವಿಕೆಟ್ ಪಡೆದ ನಂತರ ಪಂದ್ಯದಲ್ಲಿ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ ಬೌಲರ್‌ಗಳು ಎದುರಾಳಿ ತಂಡವನ್ನು 20 ಓವರ್‌ಗಳಲ್ಲಿ 148 ರನ್‌ಗಳಿಗೆ ಸೀಮಿತಗೊಳಿಸಿದರು. ಆಸೀಸ್ ಪರ ಪ್ಯಾಟ್ ಕಮಿನ್‌್ಸ (28ಕ್ಕೆ 3) ಯಶಸ್ವಿ ಬೌಲರ್ ಆದರೆ, ಆಡಂ ಝಂಪಾ (28ಕ್ಕೆ 2) ಹಾಗೂ ಮಾರ್ಕಸ್ ಸ್ಟೋನಿಸ್ (19ಕ್ಕೆ 1 ವಿಕೆಟ್) ಸಾಥ್ ನೀಡಿದರು.
ಆಸ್ಟ್ರೇಲಿಯಾಕ್ಕೆ ಆರಂಭಿಕ ಆಘಾತ
149 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನು ಭವಿಸಿ 32 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಮ್ಯಾಕ್ಸ್ ವೆಲ್ ಅರ್ಧಶತಕ ವ್ಯರ್ಥ:
ಅಫ್ಘಾನಿಸ್ತಾನದ ಬೌಲರ್‌ಗಳ ಎದುರು ರನ್ ಕದಿಯಲು ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್‌ಗಳು ತಿಣುಕಾಟ ನಡೆಸಿದರು, ಒಂದು ತುದಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಗ್ಲೆನ್ ಮ್ಯಾಕ್‌್ಸ ವೆಲ್ (59 ರನ್) ಅರ್ಧಶತಕ ಸಿಡಿಸುವ ಮೂಲಕ ಏಕದಿನ ವಿಶ್ವಕಪ್ ಪಂದ್ಯದ ರೀತಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಭರವಸೆ ಮೂಡಿಸಿದ್ದರು. ಆದರೆ ಗುಲ್ಬದಿನ್ ನೈಬ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ಮ್ಯಾಕ್ಸಿ ನೂರ್ ಅಹಮದ್ ಹಿಡಿದ ಅದ್ಭುತ ಕ್ಯಾಚ್‌ಗೆ ವಿಕೆಟ್ ಕೈಚೆಲ್ಲಿದರು.
ಎರಡಂಕಿ ದಾಟದ ಬಾಲಂಗೋಚಿಗಳು:
ಸ್ಟಾರ್ ಆಲ್ ರೌಂಡರ್ ಗ್ಲೆನ್‌ಮ್ಯಾಕ್‌್ಸವೆಲ್ ಔಟಾದ ನಂತರ ಅಫ್ಘಾನ್ ಬೌಲರ್‌ಗಳು ತಮ ಬೌಲಿಂಗ್ ಅನ್ನು ಮತ್ತಷ್ಟು ಹಿಡಿತಗೊಳಿಸಿದ್ದರಿಂದ ಆಸ್ಟ್ರೇಲಿಯಾದ ಬಾಲಂಗೋಚಿಗಳು ಒಂದಂಕಿಯನ್ನು ದಾಟಲು ಸಫಲರಾಗದೆ 19.2 ಓವರ್‌ಗಳಲ್ಲೇ 127 ರನ್‌ಗಳಿಗೆ ಅಲೌಟ್ ಆಗುವ ಮೂಲಕ 21 ರನ್‌ಗಳಿಂದ ಮುಖಭಂಗ ಅನುಭವಿಸಿದೆ.
ಅಫ್ಘಾನಿಸ್ತಾನದ ಪರ ಗುಲ್ಬದಿನ್ ನೈಬ್ (20ಕ್ಕೆ 4) ಯಶಸ್ವಿ ಬೌಲರ್ ಆದರೆ, ನವೀನ್ ಉಲ್ ಹಕ್ (20ಕ್ಕೆ 3), ಅಜತುಲ್ಲಾ ಓಮಾರ್ಜೆಯ್, ಮೊಹಮದ್ ನಬಿ ಹಾಗೂ ರಶೀದ್‌ಖಾನ್ ತಲಾ ವಿಕೆಟ್ ಪಡೆದರು. ಆಸ್ಟ್ರೇಲಿಯಾದ ಬ್ಯಾಟರ್ಸ್‌ಗಳ ಜಂಘಾಬಲವನ್ನೇ ಹುದುಗಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಗುಲ್ಬದಿನ್ ನೈಬ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.