ನವದೆಹಲಿ, ಕೋಟ್ಯಧಿಪತಿ ಎಲನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆಯ ಸ್ಟಾರ್‌ಲಿಂಕ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆ ಒದಗಿಸುವ ಒಪ್ಪಂದಕ್ಕೆ ಜಿಯೋ ಫ್ಲಾಟ್‌ಫಾರಂ ಸೇರ್ಪಡೆಯಾಗಿದೆ.
ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆ ಒದಗಿಸುವ ಒಪ್ಪಂದಕ್ಕೆ ಏರ್‌ಟೇಲ್ ಸಂಸ್ಥೆ ಸಹಿ ಹಾಕಿದ ಒಂದು ದಿನದಲ್ಲೇ ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆ ಕೂಡ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿ ಗಮನ ಸೆಳೆದಿದೆ.
ಈ ಒಪ್ಪಂದವು ಭಾರತದಲ್ಲಿ ಸ್ಟಾರ್ ಲಿಂಕ್ ಅನ್ನು ಮಾರಾಟ ಮಾಡಲು ಸ್ಪೇಸ್ ಎಕ್ಸ್ ಅನುಮತಿ ಪಡೆಯುವುದಕ್ಕೆ ಒಳಪಟ್ಟಿರುತ್ತದೆ. ಜಿಯೋದ ಬ್ರಾಡ್‌ಬ್ಯಾಂಡ್ ಪರಿಸರ ವ್ಯವಸ್ಥೆಯಲ್ಲಿ ಸ್ಟಾರ್ಲಿಂಕ್ ಅನ್ನು ಸಂಯೋಜಿಸುವ ಮೂಲಕ, ನಾವು ನಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ ಮತ್ತು ಈ ಎಐ-ಚಾಲಿತ ಯುಗದಲ್ಲಿ ಹೈಸ್ಪೀಡ್ ಬ್ರಾಡ್‌ಬ್ಯಾಂಡ್‌ನ ವಿಶ್ವಾಸಾರ್ಹತೆ ಮತ್ತು ಪ್ರವೇಶವನ್ನು ಹೆಚ್ಚಿಸುತ್ತಿದ್ದೇವೆ ಎಂದು ಜಿಯೋ ಸಂಸ್ಥೆ ಮುಖ್ಯಸ್ಥರು ತಿಳಿಸಿದ್ದಾರೆ.
ದೇಶಾದ್ಯಂತ ಸಮುದಾಯಗಳು ಮತ್ತು ವ್ಯವಹಾರಗಳನ್ನು ಸಬಲೀಕರಣಗೊಳಿಸುತ್ತಿದ್ದೇವೆ ಎಂದು ರಿಲಯನ್ಸ್ ಜಿಯೋ ಗ್ರೂಪ್ ಸಿಇಒ ಮ್ಯಾಥ್ಯ ಊಮ್ಮೆನ್ ಹೇಳಿದ್ದಾರೆ. ಈ ಒಪ್ಪಂದವು ಜಿಯೋ ಮತ್ತು ಸ್ಪೇಸ್‌ಎಕ್ಸ್ ಸ್ಟಾರ್‌ಲಿಂಕ್ ಜಿಯೋದ ಕೊಡುಗೆಗಳನ್ನು ಹೇಗೆ ವಿಸ್ತರಿಸಬಹುದು ಮತ್ತು ಸ್ಪೇಸ್ ಎಕ್ಸ್‌ನ ನೇರವಿಗೆ ಜಿಯೋ ಹೇಗೆ ಪೂರಕವಾಗಬಹುದು ಎಂಬುದನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ.|