Thursday, April 3, 2025
Homeರಾಜ್ಯಪತ್ರಿಕಾ ವಿತರಕರ ವಯಸ್ಸಿನ ಮಿತಿ 70 ವರ್ಷಕ್ಕೆ ಹೆಚ್ಚಿಸಿದ ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ್‌ಗೆ ಅಭಿನಂದನೆ

ಪತ್ರಿಕಾ ವಿತರಕರ ವಯಸ್ಸಿನ ಮಿತಿ 70 ವರ್ಷಕ್ಕೆ ಹೆಚ್ಚಿಸಿದ ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ್‌ಗೆ ಅಭಿನಂದನೆ

Age limit for Newspaper Distributors increased to 70 years

ಬೆಂಗಳೂರು,ಡಿ.15- ಪತ್ರಿಕಾ ವಿತರಕರಿಗಾಗಿ ರೂಪಿಸಲಾಗಿರುವ ಯೋಜನೆಯ ವಯಸ್ಸಿನ ಮಿತಿಯನ್ನು ಹೆಚ್ಚಳ ಮಾಡಿದ್ದಕ್ಕಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಅವರನ್ನು ಅಭಿನಂದಿಸಲಾಯಿತು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅಭಿನಂದಿಸಿದರು.

ಅಸಂಘಟಿತ ವಲಯದಲ್ಲಿರುವ ಪತ್ರಿಕಾ ವಿತರಕ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯು ರೂಪಿಸಿರುವ ಯೋಜನೆಯ ವಯಸ್ಸಿನ ಮಿತಿಯನ್ನು ಈ ಮೊದಲು 16ರಿಂದ 60 ವರ್ಷಕ್ಕೆ ಮಾತ್ರ ಸೀಮಿತ ಮಾಡಲಾಗಿತ್ತು. ಇದರಿಂದ ಸಾವಿರಾರು ಪತ್ರಿಕಾ ವಿತರಕರು ಯೋಜನೆ ಪ್ರಯೋಜನ ಪಡೆಯಲಾಗದೆ ಸಮಸ್ಯೆಯಲ್ಲಿ ಇರುವುದನ್ನು ಗಮನಕ್ಕೆ ತಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.

ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯ ವಯಸ್ಸಿನ ಮಿತಿಯನ್ನು 70 ವರ್ಷಕ್ಕೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದ್ದು ಸ್ವಾಗತಾರ್ಹವಾಗಿದ್ದು, ಅದಕ್ಕಾಗಿ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆ.ವಿ.ಪ್ರಭಾಕರ್‌ ಅವರು, ಪತ್ರಿಕಾ ವಿತರಕರ ಬಗ್ಗೆ ಮುಖ್ಯಮಂತ್ರಿಗಳಿಗೆ ಕಾಳಜಿ ಇದ್ದು, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕಾರಣಕರ್ತರಾಗಿದ್ದಾರೆ ಎಂದರು.

ಯೋಜನೆಯಲ್ಲಿ ವಯಸ್ಸಿನ ಮಿತಿ ಸಮಸ್ಯೆ ಆಗುತ್ತಿರುವ ಬಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ತಮಗೆ ಪತ್ರ ಬರೆದು ಗಮನ ಸೆಳೆದಿದ್ದರಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಪತ್ರಿಕಾ ವಿತರಕರಿಗೆ ಅನುಕೂಲವಾಗಬೇಕೆಂದ ದೃಷ್ಟಿಯಿಂದ ಸರ್ಕಾರ ಆದೇಶ ಹೊರಡಿಸಿದೆ ಎಂದು ಪ್ರಭಾಕರ್‌ಹೇಳಿದರು. ಈ ಸಂದರ್ಭದಲ್ಲಿ ಪ್ರೆಸ್‌‍ ಕ್ಲಬ್‌ ಮಾಜಿ ಅಧ್ಯಕ್ಷ ಸದಾಶಿವ ಶೆಣೈ, ಜಗದೀಶ್‌ ತಂಡ್ರೆ ಇದ್ದರು.

RELATED ARTICLES

Latest News