ನಾಗಮಂಗಲ,ಜು.22- ಕೃಷಿಗೆ ಸಂಬಂಧಿಸಿದಂತೆ ಕೊಬ್ಬರಿ ಮಾರಾಟ ರೈತರಿಗೆ ಎಲ್ಲಾ ರೀತಿಯಲ್ಲೂ ಅನುಕೂಲವಾಗುವ ನಿಟ್ಟಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೃಷಿ ಸಚಿವರಾದ ಚೆಲುವರಾಯಸ್ವಾಮಿ ತಿಳಿಸಿದರು.
ಪಟ್ಟಣದ ವರವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಹಂಗಣದಲ್ಲಿ ಮೂರು ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಮುಕ್ತ ಹರಾಜು ಕಟ್ಟೆ ಕಾಂಕ್ರೀಟ್ ರಸ್ತೆ ಚರಂಡಿ ಹಾರುವ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ರೈತರು ಬೆಳೆಯುವ ಎಲ್ಲಾ ರೀತಿಯ ತರಕಾರಿಗಳು ಉತ್ಪನ್ನಗಳನ್ನು ಮಾರಾಟ ಮಾಡಲು ತೊಂದರೆಯಾಗದ ರೀತಿಯಲ್ಲಿ ಕೃಷಿ ಪ್ರಾಹಂಗಣದಲ್ಲಿ ಮುಕ್ತಾರಾಜುಕಟ್ಟೆ ಮೂಲಸೌಕರ್ಯ ಕಲ್ಪಿಸುವುದು ರೈತರು ಬೆಳೆಯುವ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮಳೆಯಾಶ್ರಿತ ಪ್ರದೇಶವಾದರೂ ಇಲ್ಲಿನ ರೈತರು ರಾಗಿಹುರಳಿ ತರಕಾರಿ ಜೊತೆಗೆ ಹೈನುಗಾರಿಕೆ ತೆಂಗು ಕೃಷಿ ಅವಲಂಬಿಸಿಕೊಂಡು ಅಧಿಕ ಪ್ರಮಾಣದಲ್ಲಿ ಕೊಬ್ಬರಿ ಉತ್ಪಾದನೆ ಮಾಡುತ್ತಿದ್ದಾರೆ ಆದ್ದರಿಂದ ರೈತರ ಕೊಬ್ಬರಿ ಮಾರುಕಟ್ಟೆಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕೊಬ್ಬರಿ ಹರಾಜು ಮಾರುಕಟ್ಟೆ ಮಾದರಿಯಲ್ಲಿಯೇ ತಾಲೂಕಿನ ಕದಬಳ್ಳಿ ಅದ್ದಿಹಳ್ಳಿ ಸರ್ಕಲ್ ಮತ್ತು ನಾಗಮಂಗಲದ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮಾತನಾಡಿದರು.
ರೈತರಿಗೆ ಕೃಷಿ ಇಲಾಖೆಯಿಂದ ಹಲವು ಸವಲತ್ತುಗಳು ಕೃಷಿ ಪರಿಕರಗಳು ಪಡೆಯುವ ಪ್ರತಿಯೊಬ್ಬ ರೈತರು ಪಡೆಯುವ ಉದ್ದೇಶದಿಂದ ಇಲಾಖೆಯ ಸವಲತ್ತುಗಳನ್ನು ಯೋಜನೆಗಳು ತರುತ್ತಿದ್ದರು ಪರಿಪೂರ್ಣವಾಗಿ ರೈತರ ಯೋಜನೆಗಳಿಂದ ಕೆಲವರು ವಂಚಿತರಾಗಿದ್ದು ಇಂತಹ ಈ ಸೌಲಭ್ಯಗಳಿಂದ ಪ್ರತಿಯೊಬ್ಬ ರೈತನಿಗೂ ಕೃಷಿ ಸವಲತ್ತುಗಳನ್ನು ಸಿಗುವ ದೃಷ್ಟಿಯಿಂದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೌವಲತ್ತುಗಳನ್ನು ಪಡೆಯುವ ವ್‍ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.
ತಾಲೂಕು ದಂಡಾಧಿಕಾರಿಗಳು ನಹಿಮ್ ಉನ್ನಿಸಾ.ಎಪಿಎಂಸಿ ಆಡಳಿತ ಅ„ಕಾರಿ ರೇವತಿ ಬಾಯಿ ಕಾರ್ಯದರ್ಶಿ ಎಸ್‍ಎಂ ಸರ್ವಜ್ಞ ಕಾರ್ಯಪಲಕ ಇಂಜಿನಿಯರ್ ಟಿ.ಸತೀಶ್ ಎಇಇ ಗೌರೀಶ್. ಎಸ್‍ಎಲ್ ಬಿ ನಿರ್ದೇಶಕ ತಿಮ್ಮರಾಯಿ ಗೌಡ. ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ನರಸಿಂಹಮೂರ್ತಿ ಎಚ್.ಡಿ ಕೃಷ್ಣೆಗೌಡ, ಪ್ರಸನ್ನ ಆರ್.ಕೆ.ಕೃಷ್ಣೇಗೌಡ, ಸಂಪತ್‍ಕುಮಾರ್, ಶ್ರೀನಿವಾಸ್, ಮರಿಸ್ವಾಮಿ, ರಮೇಶ್ ಹಾಗೂ ಅನೇಕ ಮುಖಂಡರು ಹಾಜರಿದ್ದರು.